ರಸ್ತೆ ಬದಿಯಲ್ಲಿ ಭಿಕ್ಷುಕನಂತೆ ಕುಳಿತು ಹಾಡಿದ್ದ ಸೋನು ನಿಗಮ್; ಯಾರೂ ಗುರುತಿಸಲೇ ಇಲ್ಲ

ಅದು 2016ರ ಘಟನೆ. ಆಗ ಇನ್ನೂ ಸೋಶಿಯಲ್ ಮೀಡಿಯಾ ಇಷ್ಟೊಂದು ಬಲವಾಗಿ ಬೆಳೆದಿರಲಿಲ್ಲ. ಆಗ ಯಾವುದೂ ಇಷ್ಟು ವೈರಲ್ ಆಗುತ್ತಿರಲಿಲ್ಲ. ಆದಾಗ್ಯೂ ಸೋನು ನಿಗಮ್ ಹಂಚಿಕೊಂಡಿದ್ದ ವಿಡಿಯೋ ಒಂದು ಭರ್ಜರಿ ವೈರಲ್ ಆಗಿತ್ತು. ಅಲ್ಲದೆ, ಈ ವಿಡಿಯೋ ಎಲ್ಲರ ಗಮನ ಸೆಳೆದಿತ್ತು.

ರಸ್ತೆ ಬದಿಯಲ್ಲಿ ಭಿಕ್ಷುಕನಂತೆ ಕುಳಿತು ಹಾಡಿದ್ದ ಸೋನು ನಿಗಮ್; ಯಾರೂ ಗುರುತಿಸಲೇ ಇಲ್ಲ
ಸೋನು
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on:Oct 17, 2024 | 8:06 AM

ಸೋನು ನಿಗಮ್ ಅವರು ಹಾಡಿನ ಮೂಲಕ ಎಲ್ಲರ ಮನಸ್ಸು ಗೆದ್ದಿದ್ದಾರೆ. ಅವರು ಹಾಡುಗಳು ಯಶಸ್ಸು ಕಂಡಿವೆ. ಸೋನು ನಿಗಮ್ ಅವರು ಶೋ ಕೊಡೋಕೆ ಲಕ್ಷಾಂತರ ರೂಪಾಯಿ ಪಡೆಯುತ್ತಾರೆ. ಆದರೆ, ಒಮ್ಮೆ ಅವರು ಮಾಡಿದ ಪ್ರಯೋಗ ಎಲ್ಲರ ಮನಸ್ಸು ಗೆದ್ದಿತ್ತು. ಅವರು ಐದು ಗಂಟೆಗಳ ಕಾಲ ರಸ್ತೆ ಬದಿಯಲ್ಲಿ ನಿಂತು ಹಾಡನ್ನು ಹೇಳಿದ್ದರು. ಅದೂ ಭಿಕ್ಷಕುನ ಅವತಾರದಲ್ಲಿ. ಆದರೆ, ಯಾರೆಂದರೆ ಯಾರೂ ಅವರನ್ನು ಗುರುತಿಸಲೇ ಇರಲಿಲ್ಲ. ಆ ಬಗ್ಗೆ ಇಲ್ಲಿದೆ ವಿವರ.

ಅದು 2016ರ ಘಟನೆ. ಆಗ ಇನ್ನೂ ಸೋಶಿಯಲ್ ಮೀಡಿಯಾ ಇಷ್ಟೊಂದು ಬಲವಾಗಿ ಬೆಳೆದಿರಲಿಲ್ಲ. ಆಗ ಯಾವುದೂ ಇಷ್ಟು ವೈರಲ್ ಆಗುತ್ತಿರಲಿಲ್ಲ. ಆದಾಗ್ಯೂ ಸೋನು ನಿಗಮ್ ಹಂಚಿಕೊಂಡಿದ್ದ ವಿಡಿಯೋ ಒಂದು ಭರ್ಜರಿ ವೈರಲ್ ಆಗಿತ್ತು. ಅಲ್ಲದೆ, ಈ ವಿಡಿಯೋ ಎಲ್ಲರ ಗಮನ ಸೆಳೆದಿತ್ತು. ಅಷ್ಟಕ್ಕೂ ಆ ವಿಡಿಯೋದಲ್ಲಿ ಏನಿತ್ತು? ಇಲ್ಲಿದೆ ವಿವರ.

ಸೋನು ನಿಗಮ್ ಅವರು ವೇಷ ಬದಲಿಸಿಕೊಂಡಿದ್ದರು. ಗುರುತೇ ಸಿಗದಷ್ಟು ಅವರು ಬದಲಾಗಿದ್ದರು. ಅವರು ಈ ಗೆಟಪ್​ನಲ್ಲಿ ಪಿಯಾನೋ ಹಿಡಿದು ಬೀದಿಗಳಲ್ಲಿ ಸುತ್ತಾಡಿದ್ದರು. ಇವರಿಗೆ ಓರ್ವ ಧನ ಸಹಾಯ ಮಾಡಿದ್ದ. ಆದರೆ, ಯಾರೆಂದರೆ ಯಾರೂ ಅವರನ್ನು ಗುರುತಿಸುತ್ತಾ ಇರಲಿಲ್ಲ. ಅನೇಕರು ಅವರ ಧ್ವನಿಗೆ ಫಿದಾ ಆಗಿದ್ದರು. ಇದು ಅವರಿಗೆ ಖುಷಿ ಕೊಟ್ಟಿತ್ತು.

ನಂತರ ಈ ವಿಡಿಯೋನ ಸೋನು ನಿಗಮ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಆಗ ತಾವು ಭೇಟಿ ಮಾಡಿದ್ದು ಸೋನು ನಿಗಮ್ ಅನ್ನೋದು ಎಲ್ಲರಿಗೂ ಗೊತ್ತಾಗಿತ್ತು. ತಮಗೆ ಹಣ ನೀಡಿದ್ದ ವ್ಯಕ್ತಿಯನ್ನು ಅವರು ಭೇಟಿ ಮಾಡಿ ಸರ್​ಪ್ರೈಸ್ ನೀಡಿದ್ದರು.

ಇದನ್ನೂ ಓದಿ:  ‘ಹಿಂದಿನ ಜನ್ಮದಲ್ಲಿ ನಾನು ಕನ್ನಡಿಗನಾಗಿದ್ದೆ’; ಸೋನು ನಿಗಮ್ ಹೇಳಿದ ಈ ಮಾತು ನೆನಪಿದೆಯೇ?

ಸೋನು ನಿಗಮ್ ಅವರ ಶೋ ಕೇಳಬೇಕು ಎಂದು ಜನರು ಸಾವಿರಾರು ರೂಪಾಯಿ ನೀಡಬೇಕು. ಪ್ರತಿ ಶೋಗೆ ಅವರು ಲಕ್ಷಾಂತರ ರೂಪಾಯಿ ಚಾರ್ಜ್ ಮಾಡುತ್ತಾರೆ. ಆದರೆ, ಭಿಕ್ಷುಕನ ಗೆಟಪ್​ನಲ್ಲಿ ಅವರು ಉಚಿತವಾಗಿ ಹಾಡಿದ್ದರು. ಕೆಲವರಿಗೆ ಇದು ಆಸಕ್ತಿದಾಯಕ ಎನಿಸಿತ್ತು. 90ರ ದಶಕದಿಂದ ಸೋನು ನಿಗಮ್ ಅವರು ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರು ಕನ್ನಡದಲ್ಲಿ ಹಲವು ಸೂಪರ್ ಹಿಟ್ ಹಾಡುಗಳನ್ನು ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:04 am, Thu, 17 October 24

ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ