‘ಹಿಂದಿನ ಜನ್ಮದಲ್ಲಿ ನಾನು ಕನ್ನಡಿಗನಾಗಿದ್ದೆ’; ಸೋನು ನಿಗಮ್ ಹೇಳಿದ ಈ ಮಾತು ನೆನಪಿದೆಯೇ?
‘ಮುಂಗಾರು ಮಳೆ 2’ ಚಿತ್ರದ ‘ಗಮನಿಸು..’ ಹಾಡು ಸೋನು ನಿಗಮ್ ಅವರ ಫೇವರಿಟ್ ಎನಿಸಿಕೊಂಡಿದೆ. ಈ ಬಗ್ಗೆ ಅವರು ಮಾಹಿತಿ ಹಂಚಿಕೊಂಡಿದ್ದರು. ಸೋನು ನಿಗಮ್ ಕನ್ನಡದ ಅನೇಕರಿಗೆ ಇಷ್ಟ. ಅವರ ಹಾಡುಗಳನ್ನು ಈಗಲೂ ಜನರು ಗುನುಗುಡುತ್ತಾರೆ.
ಸೋನು ನಿಗಮ್ ಅವರು ಹಲವು ಭಾಷೆಗಳಲ್ಲಿ ಹಾಡಿದ್ದಾರೆ. ಹಿಂದಿಯಲ್ಲಿ ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವರು ಹುಟ್ಟಿದ್ದು ಹರಿಯಾಣದಲ್ಲಿ. ಅವರಿಗೆ ಈಗ 51 ವರ್ಷ. ಅವರಿಗೆ ಕನ್ನಡದ ಬಗ್ಗೆ ವಿಶೇಷ ಪ್ರೀತಿ ಇದೆ. ಇದನ್ನು ಅವರು ಅನೇಕ ಬಾರಿ ಹೇಳಿಕೊಂಡಿದ್ದಾರೆ. ಕಳೆದ ಜನ್ಮದಲ್ಲಿ ತಾವು ಕನ್ನಡಿಗನಾಗಿದ್ದೆ ಅನಿಸುತ್ತದೆ ಎಂದು ಅವರು ಹೇಳಿಕೊಂಡಿದ್ದರು. ಈ ವಿಡಿಯೋ ಈಗ ವೈರಲ್ ಆಗಿದೆ.
ಸೋನು ನಿಗಮ್ ಅವರು ಈ ಮೊದಲು ಆಲ್ಬಂ ಸಾಂಗ್ಗಳನ್ನು ಹಾಡುತ್ತಿದ್ದರು. 90ರ ದಶಕದಲ್ಲಿ ಅವರು ಕನ್ನಡ ಚಿತ್ರರಂಗಕ್ಕೆ ಪರಿಚಿತರಾದರು. ಕನ್ನಡದಲ್ಲಿ ಅವರು ಹಾಡಿದ ಮೊದಲ ಗೀತೆ ‘ಜೀವನದಿ’ ಸಿನಿಮಾದ ‘ಎಲ್ಲೋ ಯಾರೊ..’ ಹಾಡು. 2000ನೇ ಇಸ್ವಿ ನಂತರದಲ್ಲಿ ಅವರಿಗೆ ಕನ್ನಡದಲ್ಲಿ ಭರ್ಜರಿ ಆಫರ್ಗಳು ಬಂದವು. ‘ಉಸಿರೇ.. ಉಸಿರೇ..’, ‘ಒನ್ಸ್ ಅಪಾನ್ ಟೈಮ್..’, ‘ಕನಸೋ ಇದು..’, ‘ಮುಂಗಾರು ಮಳೆಯೇ..’, ‘ಅನಿಸುತಿದೆ..’ ಹಾಡಿನಿಂದ ಹಿಡಿದು ಇತ್ತೀಚೆಗೆ ರಿಲೀಸ್ ಆದ ‘ಕೃಷ್ಣಂ ಪ್ರಣಯ ಸಖಿ’ ಚಿತ್ರದ ‘ಹೇ ಗಗನ..’ ಹಾಡಿನವರೆಗೆ ಸೋನು ನಿಗಮ್ ಹಾಡಿದ್ದಾರೆ. ಈ ಕಾರಣಕ್ಕೋ ಏನೋ ಅವರಿಗೆ ಕನ್ನಡದ ಬಗ್ಗೆ ವಿಶೇಷ ಪ್ರೀತಿ ಇದೆ.
View this post on Instagram
‘ಕಳೆದ ಜನ್ಮದಲ್ಲಿ ನಾನು ಕನ್ನಡಿಗನಾಗಿದ್ದೆ ಎಂದು ಆಗಿದ್ದೆ ಅನಿಸುತ್ತದೆ. ನಾನು ಎಲ್ಲೇ ಹೋದರೂ ಕನ್ನಡ ಎನ್ನುವ ಶಬ್ದ ಕೇಳುತ್ತದೆ. ನಾನು 26-27 ಭಾಷೆಗಳಲ್ಲಿ ಹಾಡಿರಬಹುದು. ಹಿಂದಿಯಲ್ಲಿ ಚೆನ್ನಾಗಿರೋ ಹಾಡುಗಳನ್ನು ಹಾಡಿರಬಹುದು. ಅದಕ್ಕಿಂತ ಉತ್ತಮ ಹಾಡುಗಳನ್ನು ಕನ್ನಡದಲ್ಲಿ ಹಾಡಿದ್ದೇನೆ’ ಎಂದು ಅವರು ಹೇಳಿದ್ದರು. ಈ ಮೂಲಕ ಅವರು ಕನ್ನಡದ ಮೇಲೆ ಇರುವ ವಿಶೇಷ ಪ್ರೀತಿಯನ್ನು ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: ಭಾರಿ ಮುಂಗಾರು ಮಳೆ ಮಧ್ಯೆಯೂ ಕರ್ನಾಟಕದಲ್ಲಿ ತಾಪಮಾನ ಹೆಚ್ಚಳ!
‘ಮುಂಗಾರು ಮಳೆ 2’ ಚಿತ್ರದ ‘ಗಮನಿಸು..’ ಹಾಡು ಅವರ ಫೇವರಿಟ್ ಎನಿಸಿಕೊಂಡಿದೆ. ಈ ಬಗ್ಗೆ ಅವರು ಮಾಹಿತಿ ಹಂಚಿಕೊಂಡಿದ್ದರು. ಸೋನು ನಿಗಮ್ ಕನ್ನಡದ ಅನೇಕರಿಗೆ ಇಷ್ಟ. ಅವರ ಹಾಡುಗಳನ್ನು ಈಗಲೂ ಜನರು ಗುನುಗುಡುತ್ತಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.