Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕೇಳದೆ ನಿಮಗೀಗ..’ ಕಂಪೋಸ್ ಮಾಡುವಾಗ ನಡೆದ ಅಪರೂಪದ ಘಟನೆ ಹೇಳಿದ ಇಳಯರಾಜ

1981ರಲ್ಲಿ ರಿಲೀಸ್ ಆದ ‘ಗೀತಾ’ ಚಿತ್ರಕ್ಕೆ ಶಂಕರ್ ನಾಗ್ ನಿರ್ದೇಶನ ಇತ್ತು. ‘ಕೇಳದೆ ನಿಮಗೀಗ..’ ಹಾಡು ಇದೇ ಚಿತ್ರದ್ದು. ಇದನ್ನು, ಇಳಯರಾಜ ಕಂಪೋಸ್ ಮಾಡಿದ್ದರು. ಈ ಹಾಡಿನ ಬಗ್ಗೆ ಇಳಯರಾಜ ಮಾತನಾಡಿದ್ದರು.

‘ಕೇಳದೆ ನಿಮಗೀಗ..’ ಕಂಪೋಸ್ ಮಾಡುವಾಗ ನಡೆದ ಅಪರೂಪದ ಘಟನೆ ಹೇಳಿದ ಇಳಯರಾಜ
ಶಂಕರ್ ನಾಗ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Oct 18, 2024 | 8:20 AM

ಶಂಕರ್ ನಾಗ್ ಅವರು ಖ್ಯಾತ ನಟ, ನಿರ್ದೇಶಕ ಹಾಗೂ ನಿರ್ಮಾಪಕರಾಗಿದ್ದರು ಎಂಬುದರಲ್ಲಿ ಯಾವುದೇ ಅನುಮಾನ ಇಲ್ಲ. ಅವರ ಬಳಿ ಒಳ್ಳೆಯ ಟೇಸ್ಟ್ ಇತ್ತು. ಇದನ್ನು ಇಳಯರಾಜ ಕೂಡ ಒಪ್ಪಿಕೊಳ್ಳುತ್ತಾರೆ. ಅವರು ‘ಗೀತಾ’ ಸಿನಿಮಾಗೆ ಸಂಗೀತ ಸಂಯೋಜನೆ ಮಾಡಿದ್ದರು. 1981ರಲ್ಲಿ ರಿಲೀಸ್ ಆದ ಈ ಚಿತ್ರಕ್ಕೆ ಶಂಕರ್ ನಾಗ್ ಅವರದ್ದೇ ನಿರ್ದೇಶನ ಇತ್ತು. ‘ಕೇಳದೆ ನಿಮಗೀಗ..’ ಹಾಡು ಇದೇ ಚಿತ್ರದ್ದು. ಇದನ್ನು, ಇಳಯರಾಜ ಕಂಪೋಸ್ ಮಾಡಿದ್ದರು. ಈ ಹಾಡಿನ ಬಗ್ಗೆ ಇಳಯರಾಜ ಮಾತನಾಡಿದ್ದರು.

‘ಶಂಕರ್ ನಾಗ್​ಗೆ ನನ್ನ ಮೇಲೆ ತುಂಬ ಪ್ರೀತಿ ಇತ್ತು. ಒಂದಿನ ಬಂದು ಗೀತಾ ಸಿನಿಮಾದ ಹಾಡಿನ ಸಿಚ್ಯುವೇಷನ್ ಹೇಳಿದರು. ಡ್ರಾಮಾ ನಡೆಯುತ್ತಾ ಹೋಗುತ್ತದೆ. ಎರಡು ಹಳ್ಳಿಯ ಕಥೆ. ಒಂದು ಹಳ್ಳಿಯ ಹುಡುಗ, ಮತ್ತೊಂದು ಹಳ್ಳಿಯ ಹುಡುಗಿ ಲವ್ ಮಾಡ್ತಾರೆ. ಇದು ಘಟನೆ ಎಂದು ಶಂಕರ್ ನಾಗ್ ವಿವರಿಸಿದ್ದರು ಇದನ್ನು ಕೇಳಿ ಚಿ. ಉದಯ್ ಕುಮಾರ್ ಸಾಂಗ್ ಬರೆದರು’ ಎಂದಿದ್ದಾರೆ ಇಳಯರಾಜ.

‘ನಾನು ಕೊಟ್ಟ ಟ್ಯೂನ್​ಗೆ ಅವರು ನೇರವಾಗಿ ಸಂಪಿಗೆ ಒಂದೂರು, ಮಲ್ಲಿಗೆ ಒಂದೂರು ಎಂದು ಬರೆದಿದ್ದರು. ಹೀಗೆ ಬರೆದರೆ ಡ್ರಾಮಾಗೆ ತೂಕ ಬರಲ್ಲ ಎಂದೆ. ಆಗ ಅವರ ಬಳಿ ಡ್ರಾಮಾಗೆ ನರೇಶನ್ ಬರೆಯಿರಿ ಎಂದೆ. ಕೇಳದೇ ನಿಮಗೀಗ ದೂರದಲ್ಲಿ ಯಾರೋ, ಹಾಡು ಕೇಳಿದಂತೆ ಒಂದು ಹೆಣ್ಣಿನಾ ಓ ನೊಂದ ವಿರಹ ಗೀತೆ ಎಂದು ಬರೆದರು’ ಎಂದಿದ್ದಾರೆ.

‘ಒಂದೊಂದು ಸಾಂಗ್​ಗೆ ಒಂದೊಂದು ಘಟನೆ ಇದೆ. ಈ ರೀತಿ ಹೇಳುತ್ತಾ ಹೋದರೆ ಒಂದು ದಸರಾ ಸಾಕಾಗುವುದಿಲ್ಲ ಎಂದರು. ಯುವ ದಸರಾ ಕಾರ್ಯಕ್ರಮದಲ್ಲಿ ಇಳಯರಾಜ ಅವರು ಈ ಬಗ್ಗೆ ಹೇಳಿದ್ದರು. ಪ್ರತಿ ಹಾಡಿನ ಹಿಂದಿನ ಘಟನೆಯನ್ನು ಅವರು ಹೇಳುತ್ತಾ ಹೋಗಿದ್ದರು.

ಇದನ್ನೂ ಓದಿ: ಆ ದಿನ ಅನಂತ್ ನಾಗ್ ಮಾತನ್ನು ಕೇಳಿದ್ರೆ ಶಂಕರ್ ನಾಗ್​ಗೆ ಅಪಘಾತ ಆಗುತ್ತಲೇ ಇರಲಿಲ್ಲ

ಶಂಕರ್ ನಾಗ್ ಅವರು ಕನ್ನಡ ಚಿತ್ರಂಗ ಕಂಡ ಶ್ರೇಷ್ಠ ಹೀರೋ ಹಾಗೂ ನಿರ್ದೇಶಕರಲ್ಲಿ ಒಬ್ಬರು. ಅವರು 1992ರಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟರು. ಅವರನ್ನು ಕಳೆದುಕೊಂಡಿದ್ದು ಕನ್ನಡ ಚಿತ್ರರಂಗಕ್ಕೆ ಆದ ದೊಡ್ಡ ನಷ್ಟ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.