ಐಶ್ವರ್ಯಾ, ಧರ್ಮ, ಅನುಷಾ ನಡುವಿನ ಲವ್ ಸ್ಟೋರಿ ಚರ್ಚೆ; ಹಳೇ ವಿಷಯ ತೆಗೆದ ಗೋಲ್ಡ್ ಸುರೇಶ್
ಬಿಗ್ ಬಾಸ್ ಮನೆಯಲ್ಲಿ ಪ್ರೀತಿ ಚಿಗುರುವುದು ಹೊಸದೇನೂ ಅಲ್ಲ. ಪ್ರತಿ ಸೀಸನ್ನಲ್ಲೂ ಆ ರೀತಿಯ ಘಟನೆಗಳು ನಡೆಯುತ್ತವೆ. ‘ಬಿಗ್ ಬಾಸ್ ಕನ್ನಡ ಸೀಸನ್ 11’ ಶೋನಲ್ಲಿ ಐಶ್ವರ್ಯಾ ಸಿಂಧೋಗಿ, ಧರ್ಮ ಕೀರ್ತಿರಾಜ್ ಹಾಗೂ ಅನುಷಾ ರೈ ನಡುವೆ ತ್ರಿಕೋನ ಪ್ರೇಮಕಥೆ ಶುರುವಾದಂತಿದೆ. ಈ ಬಗ್ಗೆ ‘ಸೂಪರ್ ಸಂಡೇ ವಿತ್ ಸುದೀಪ’ ಸಂಚಿಕೆಯಲ್ಲಿ ಚರ್ಚೆ ಆಗಲಿದೆ.
ತಮಗೆ ಧರ್ಮ ಕೀರ್ತಿರಾಜ್ ಇಷ್ಟ ಆಗಿದ್ದಾರೆ ಎಂದು ಐಶ್ವರ್ಯಾ ಸಿಂಧೋಗಿ ಈಗಾಗಲೇ ಹೇಳಿದ್ದಾರೆ. ಧರ್ಮ ಮತ್ತು ಅನುಷಾ ರೈ ಜೊತೆಯಲ್ಲಿ ಇದ್ದಾಗ ಐಶ್ವರ್ಯಾ ಬೇಸರ ಮಾಡಿಕೊಳ್ಳುತ್ತಾರೆ ಎಂಬ ಅಭಿಪ್ರಾಯ ಹಲವರಿಗೆ ಇದೆ. ಈ ವಿಷಯವನ್ನು ಭಾನುವಾರದ (ಅ.13) ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಚರ್ಚೆ ಮಾಡಲಿದ್ದಾರೆ. ಈ ನಡುವೆ ಗೋಲ್ಡ್ ಸುರೇಶ್ ಅವರು ಒಂದು ಹಳೇ ಲವ್ ಸ್ಟೋರಿಯ ಬಗ್ಗೆ ಪ್ರಸ್ತಾಪಿಸಿದ್ದಾರೆ. ತ್ರಿಕೋನ ಪ್ರೇಮಕಥೆಯ ಬಗ್ಗೆ ಐಶ್ವರ್ಯಾ, ಧರ್ಮ, ಅನುಷಾ ಅವರು ಸುದೀಪ್ ಜೊತೆ ಮಾತನಾಡಿದ್ದಾರೆ. ಅದರ ಪ್ರೋಮೋ ಇಲ್ಲಿದೆ..
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos