Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನೀವೇ ನನ್ನ ಲಿಲ್ಲಿಪುಟ್ಟು, ಈ ಸಂಬಂಧ ದೂರ ಸಾಗಬೇಕು’; ಭವ್ಯಾಗೆ ಎಲ್ಲವನ್ನೂ ವಿವರಿಸಿದ ತ್ರಿವಿಕ್ರಂ

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಭವ್ಯಾ ಗೌಡ ಮತ್ತು ತ್ರಿವಿಕ್ರಂ ನಡುವಿನ ಗೆಳೆತನ ಗಮನ ಸೆಳೆಯುತ್ತಿದೆ. ತ್ರಿವಿಕ್ರಂ ಅವರು ಭವ್ಯಾಗೆ ರೋಸ್ ಕೊಟ್ಟು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ. ಭವ್ಯಾ ಕೂಡ ತ್ರಿವಿಕ್ರಂ ಅವರ ಗೆಳೆತನವನ್ನು ಮೆಚ್ಚಿಕೊಂಡಿದ್ದಾರೆ.

‘ನೀವೇ ನನ್ನ ಲಿಲ್ಲಿಪುಟ್ಟು, ಈ ಸಂಬಂಧ ದೂರ ಸಾಗಬೇಕು’; ಭವ್ಯಾಗೆ ಎಲ್ಲವನ್ನೂ ವಿವರಿಸಿದ ತ್ರಿವಿಕ್ರಂ
ತ್ರಿವಿಕ್ರಂ-ಭವ್ಯಾ
Follow us
ರಾಜೇಶ್ ದುಗ್ಗುಮನೆ
|

Updated on: Nov 12, 2024 | 7:28 AM

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಭವ್ಯಾ ಗೌಡ ಹಾಗೂ ತ್ರಿವಿಕ್ರಂ ಮಧ್ಯೆ ಒಳ್ಳೆಯ ಗೆಳೆತನ ಬೆಳೆದಿದೆ. ಅವರ ಮಧ್ಯೆ ಪ್ರೀತಿ ಮೂಡಲಿ ಎಂದು ಫ್ಯಾನ್ಸ್ ಕೋರಿಕೊಂಡಿದ್ದೂ ಇದೆ. ಹೀಗಿರುವಾಗಲೇ ಭವ್ಯಾಗೆ ತಮ್ಮ ಮನಸ್ಸಿನ ಮಾತನ್ನು ತ್ರಿವಿಕ್ರಂ ಅವರು ವಿವರಿಸಿದ್ದಾರೆ. ಇದರಿಂದ ಇವರ ಗೆಳೆತನ ಮತ್ತಷ್ಟು ಬಿಗಿಯಾಗಿದೆ. ನವೆಬರ್ 11ರ ಎಪಿಸೋಡ್​ನಲ್ಲಿ ಈ ವಿಚಾರ ಹೈಲೈಟ್ ಆಗಿದೆ.

ಬಿಗ್ ಬಾಸ್ ಮನೆಯಲ್ಲಿ ಒಳ್ಳೆಯ ಗೆಳೆತನ ಇರುವವರಿಗೆ ರೋಸ್ ಕೊಡುವ ಟಾಸ್ಕ್ ನೀಡಲಾಗಿತ್ತು. ಈ ಟಾಸ್ಕ್​ನಲ್ಲಿ ಭವ್ಯಾಗೆ ಕೆಂಗುಲಾಬಿ ಕೊಟ್ಟರು ತ್ರಿವಿಕ್ರಂ. ಅಲ್ಲದೆ, ತಮ್ಮ ಮನಸ್ಸಿನ ಮಾತನ್ನು ಅವರು ಹೇಳಿಕೊಂಡರು. ಅವರು ಹೇಳಿದ ಮಾತನ್ನು ನಾನಾ ರೀತಿಯಲ್ಲಿ ಬಣ್ಣಿಸಲಾಗುತ್ತಿದೆ.

‘ನಾನು ಈ ಮನೆಯಲ್ಲಿ ಆನೆ ತರಹ ಇದ್ದರೆ, ಮಾವುತನ ತರಹ ಒಂದು ಲಿಲ್ಲಿಪುಟ್ಟು ಓಡಾಡುತ್ತಾ ಇರುತ್ತೆ. ಫ್ರೆಂಡ್​ಶಿಪ್ ಅಂದ್ರೆ ಮಾತನಲ್ಲ, ಮೌನವನ್ನು ಅರ್ಥ ಮಾಡಿಕೊಳ್ಳುವವರು. ನಾನು ಈ ಗುಲಾಬಿಯನ್ನು ಭವ್ಯಾಗೆ ಕೊಡುತ್ತೇನೆ’ ಎಂದರು ತ್ರಿವಿಕ್ರಂ.

ಭವ್ಯಾ ವೇದಿಕೆ ಮೇಲೆ ಬಂದ ಬಳಿಕ ಮಾತನಾಡಿದ ತ್ರಿವಿಕ್ರಂ, ‘ನನ್ನ ಗೆಳತಿ ಆಗಿದ್ದಕ್ಕೆ ಧನ್ಯವಾದ. ಹೊರಗೆ ಇದ್ದಾಗ ಇವರ ನಂಬರ್ ಕೂಡ ಇರಲಿಲ್ಲ. ಇವತ್ತು ಗೆಳತಿ ಆಗಿ ನಮ್ಮ ಜೊತೆ ಇದೀರಾ. ತುಂಬಾ ದೂರ ನೋಡುವ ಆಸೆ ಇದೆ’ ಎಂದಿದ್ದಾರೆ. ಈ ಮಾತು ಗಮನ ಸೆಳೆದಿದೆ.

ಇದನ್ನೂ ಓದಿ: ಎಲ್ಲವನ್ನೂ ಕಳೆದುಕೊಂಡ ಭವ್ಯಾ ಗೌಡ; ಅಳುವಾಗ ಬಿಗಿದಪ್ಪಿ ಸಮಾಧಾನ ಮಾಡಿದ ಮೋಕ್ಷಿತಾ

ಅದೇ ರೀತಿ ಭವ್ಯಾ ಕೂಡ ಕೆಂಪು ಗುಲಾಬಿಯನ್ನು ತ್ರಿವಿಕ್ರಂ ಅವರಿಗೆ ನೀಡಿದ್ದಾರೆ. ‘ನಾನು ಈ ವ್ಯಕ್ತಿ ಜೊತೆ ಮಾತೇ ಆಡಲ್ಲ ಎಂದುಕೊಂಡಿದ್ದೆ. ಹೊರಗೆ ಹಾಯ್ ಬಾಯ್ ಕೂಡ ಸರಿಯಾಗಿ ಇರಲಿಲ್ಲ. ಅವರ ಜೊತೆ ಈಗ ಚೆನ್ನಾಗಿ ಕನೆಕ್ಟ್ ಆಗಿದ್ದೇನೆ. ಗೆಳೆತನದಲ್ಲಿ ಅವರು ಏನನ್ನೂ ನಿರೀಕ್ಷಿಸಲ್ಲ. ಆಗುಣ ಇಷ್ಟ. ಹೊರಹೋದಮೇಲೂ ನಾನು ಈ ಗೆಳೆತನ ಮುಂದುವರಿಸಲು ಬಯಸುತ್ತೇನೆ’ ಎಂದಿದ್ದಾರೆ ಭವ್ಯಾ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಸುಲಭ ಕ್ಯಾಚ್ ಕೈಚೆಲ್ಲಿದರೂ ಔಟಾದ ಆರ್​ಸಿಬಿ ಬ್ಯಾಟರ್
ಸುಲಭ ಕ್ಯಾಚ್ ಕೈಚೆಲ್ಲಿದರೂ ಔಟಾದ ಆರ್​ಸಿಬಿ ಬ್ಯಾಟರ್
ಮತ್ತೆ ಮಾರ್ದನಿಸಿದ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು
ಮತ್ತೆ ಮಾರ್ದನಿಸಿದ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು
ಮಹಾಕುಂಭಮೇಳ ಹೇಗೆ ಅಯೋಜಿಸಲಾಯಿತು ಅಂತ ವಿಚಾರಿಸಿದ್ದೀನಿ: ಶಿವಕುಮಾರ್
ಮಹಾಕುಂಭಮೇಳ ಹೇಗೆ ಅಯೋಜಿಸಲಾಯಿತು ಅಂತ ವಿಚಾರಿಸಿದ್ದೀನಿ: ಶಿವಕುಮಾರ್
ಬಜೆಟ್‌ನಲ್ಲಿ ಮಾವು, ರೇಷ್ಮೆ ಬೆಳೆಗೆ ಆದ್ಯತೆ ನೀಡಿ; ಸಂಸದ ಮಂಜುನಾಥ್ ಸಲಹೆ
ಬಜೆಟ್‌ನಲ್ಲಿ ಮಾವು, ರೇಷ್ಮೆ ಬೆಳೆಗೆ ಆದ್ಯತೆ ನೀಡಿ; ಸಂಸದ ಮಂಜುನಾಥ್ ಸಲಹೆ
ಡಿಕೆ ಶಿವಕುಮಾರ್​ ಕೂಡ ಏಕನಾಥ ಶಿಂಧೆ ರೀತಿ ಆಗಬಹುದು: ಆರ್​ ಅಶೋಕ್
ಡಿಕೆ ಶಿವಕುಮಾರ್​ ಕೂಡ ಏಕನಾಥ ಶಿಂಧೆ ರೀತಿ ಆಗಬಹುದು: ಆರ್​ ಅಶೋಕ್
ಸದ್ಗುರು ವಾಸುದೇವ್ ಖುದ್ದಾಗಿ ಮನೆಗೆ ಬಂದು ಆಹ್ವಾನಿಸಿದ್ದರು: ಶಿವಕುಮಾರ್
ಸದ್ಗುರು ವಾಸುದೇವ್ ಖುದ್ದಾಗಿ ಮನೆಗೆ ಬಂದು ಆಹ್ವಾನಿಸಿದ್ದರು: ಶಿವಕುಮಾರ್
ಮಹಿಳಾ ಪಿಡಿಒಗೆ ಚಪ್ಪಲಿಯಿಂದ ಹೊಡೆದ ಗ್ರಾಮ ಪಂಚಾಯಿತಿ ಸದಸ್ಯೆ
ಮಹಿಳಾ ಪಿಡಿಒಗೆ ಚಪ್ಪಲಿಯಿಂದ ಹೊಡೆದ ಗ್ರಾಮ ಪಂಚಾಯಿತಿ ಸದಸ್ಯೆ
ಲೇಡಿ ಕಾನ್​ಸ್ಟೇಬಲ್​ರನ್ನು ಸಾರ್ವಜನಿಕವಾಗಿ ನಿಂದಿಸಿದ ಹೆಡ್ ಕಾನ್​ಸ್ಟೇಬಲ್
ಲೇಡಿ ಕಾನ್​ಸ್ಟೇಬಲ್​ರನ್ನು ಸಾರ್ವಜನಿಕವಾಗಿ ನಿಂದಿಸಿದ ಹೆಡ್ ಕಾನ್​ಸ್ಟೇಬಲ್
ವಿಧಾನಸೌಧ ಆವರಣದಲ್ಲಿ ಮೊದಲ ಬಾರಿಗೆ ಪುಸ್ತಕ ಮೇಳ ಆಯೋಜನೆ
ವಿಧಾನಸೌಧ ಆವರಣದಲ್ಲಿ ಮೊದಲ ಬಾರಿಗೆ ಪುಸ್ತಕ ಮೇಳ ಆಯೋಜನೆ
ಲಕ್ಷ್ಮಿ ಹೆಬ್ಬಾಳ್ಕರ್​ಗೆ ಭವತಿ ಭಿಕ್ಷಾಂ ದೇಹಿ ಎಂದ ವಿದ್ಯಾರ್ಥಿಗಳು !
ಲಕ್ಷ್ಮಿ ಹೆಬ್ಬಾಳ್ಕರ್​ಗೆ ಭವತಿ ಭಿಕ್ಷಾಂ ದೇಹಿ ಎಂದ ವಿದ್ಯಾರ್ಥಿಗಳು !