ಐಶ್ವರ್ಯಾ ಜೊತೆ ಕ್ಲೋಸ್ ಆದ ಧರ್ಮ; ದುಷ್ಮನ್ ಆಗಿ ಬದಲಾದ ಅನುಷಾ ರೈ

ಈ ವಾರ ಎಲ್ಲರೂ ಬಿಗ್ ಬಾಸ್ ಮನೆಯಲ್ಲಿ ಜೋಡಿಯಾಗಿ ಆಟ ಆಡಬೇಕಾಗಿದೆ. ನೇರ ನಾಮಿನೇಷನ್​ ಮಾಡುವಾಗ ಎಲ್ಲರೂ ಗೋಲ್ಡ್ ಸುರೇಶ್ ಮತ್ತು ಅನುಷಾ ರೈ ಜೋಡಿಯನ್ನು ಟಾರ್ಗೆಟ್ ಮಾಡಿದ್ದಾರೆ. ಧರ್ಮ ಮತ್ತು ಐಶ್ವರ್ಯಾ ಸಿಂಧೋಗಿ ಕೂಡ ಅನುಷಾ-ಸುರೇಶ್ ಕಡೆಗೆ ಕೈ ತೋರಿಸಿದ್ದಾರೆ. ಇದರಿಂದ ಅನುಷಾ ರೈ ಕೆಂಡಾಮಂಡಲ ಆಗಿದ್ದಾರೆ.

ಐಶ್ವರ್ಯಾ ಜೊತೆ ಕ್ಲೋಸ್ ಆದ ಧರ್ಮ; ದುಷ್ಮನ್ ಆಗಿ ಬದಲಾದ ಅನುಷಾ ರೈ
ಧರ್ಮ ಕೀರ್ತಿರಾಜ್, ಐಶ್ವರ್ಯಾ, ಅನುಷಾ ರೈ
Follow us
ಮದನ್​ ಕುಮಾರ್​
|

Updated on: Nov 12, 2024 | 10:27 PM

ಬಿಗ್ ಬಾಸ್ ಮನೆಗೆ ಬರುವುದಕ್ಕೂ ಮುನ್ನವೇ ಅನುಷಾ ರೈ ಮತ್ತು ಧರ್ಮ ಕೀರ್ತಿರಾಜ್ ಅವರ ನಡುವೆ ಪರಿಚಯ ಇತ್ತು. ದೊಡ್ಮನೆಗೆ ಕಾಲಿಟ್ಟ ಬಳಿಕ ಅವರಿಬ್ಬರ ನಡುವಿನ ಆಪ್ತತೆ ಹೆಚ್ಚಾಗಿತ್ತು. ಆದರೆ ಈ ವಾರ ಬಿಗ್ ಬಾಸ್ ಆಟದಲ್ಲಿ ವರಸೆ ಬದಲಾಗಿದೆ. ಹಿಂದಿನ ದಿನದವರೆಗೂ ಪರಸ್ಪರ ಚೆನ್ನಾಗಿದ್ದ ಧರ್ಮ ಕೀರ್ತಿರಾಜ್ ಮತ್ತು ಅನುಷಾ ರೈ ಅವರು 43ನೇ ದಿನ ದುಷ್ಮನ್​ಗಳ ರೀತಿ ವರ್ತಿಸಿದ್ದಾರೆ. ಅದಕ್ಕೆಲ್ಲ ಕಾರಣ ಆಗಿದ್ದು ನೇರ ನಾಮಿನೇಷನ್​ ಪ್ರಕ್ರಿಯೆ. ಈ ವಾರ ಜೋಡಿ ಟಾಸ್ಕ್ ಆದ್ದರಿಂದ ಒಂದು ಜೋಡಿಯನ್ನು ನೇರವಾಗಿ ನಾಮಿನೇಟ್ ಮಾಡಬೇಕು. ಅದಕ್ಕಾಗಿ ಬಹುತೇಕರು ಅನುಷಾ ರೈ ಹಾಗೂ ಗೋಲ್ಡ್ ಸುರೇಶ್​ ಅವರನ್ನು ಟಾರ್ಗೆಟ್ ಮಾಡಿದ್ದಾರೆ.

ಜೋಡಿ ಟಾಸ್ಕ್​ನಲ್ಲಿ ಐಶ್ವರ್ಯಾ ಸಿಂಧೋಗಿ ಮತ್ತು ಧರ್ಮ ಕೀರ್ತಿರಾಜ್ ಅವರು ಒಂದಾಗಿದ್ದಾರೆ. ಈ ಮೊದಲು ಕೂಡ ಅನುಷಾ ರೈ, ಧರ್ಮ ಕೀರ್ತಿರಾಜ್ ಹಾಗೂ ಐಶ್ವರ್ಯಾ ನಡುವೆ ತ್ರಿಕೋನ ಲವ್ ಸ್ಟೋರಿ ಇದೆ ಎಂದು ಹೇಳಲಾಗಿತ್ತು. ಐಶ್ವರ್ಯಾ ಜೊತೆ ಧರ್ಮ ಇದ್ದಾಗ ಅನುಷಾಗೆ ಕಸಿವಿಸಿ ಆಗುತ್ತಿತ್ತು. ಈಗ ಆ ಕಸಿವಿಸಿ ಇನ್ನಷ್ಟು ಹೆಚ್ಚಾದಂತಿದೆ. ಯಾಕೆಂದರೆ, ಧರ್ಮ ಕೀರ್ತಿರಾಜ್​ ಮತ್ತು ಐಶ್ವರ್ಯಾ ಅವರು ಜೋಡಿಯಾಗಿ ಆಟ ಆಡುತ್ತಿದ್ದಾರೆ.

ಬಹುತೇಕ ಎಲ್ಲರೂ ಅನುಷಾ ರೈ ಮತ್ತು ಗೋಲ್ಡ್ ಸುರೇಶ್ ಅವರನ್ನು ನಾಮಿನೇಟ್ ಮಾಡಿದ್ದರಿಂದ ಧರ್ಮ ಕೀರ್ತಿರಾಜ್ ಅವರಿಗೂ ಬೇರೆ ಆಯ್ಕೆ ಇರಲಿಲ್ಲ. ಅವರು ಕೂಡ ಇದೇ ಜೋಡಿಯನ್ನು ನೇರವಾಗಿ ನಾಮಿನೇಟ್ ಮಾಡಿದರು. ಅದರಿಂದಾಗಿ ಅನುಷಾ ರೈ ಅವರಿಗೆ ತುಂಬ ನೋವಾಯಿತು. ನಾಮಿನೇಷನ್​ ಪ್ರಕ್ರಿಯೆಯಲ್ಲಿ ಧರ್ಮ ಹಾಗೂ ಅನುಷಾ ಅವರು ಜೋರಾಗಿ ಜಗಳ ಮಾಡಿಕೊಂಡರು.

ಇದನ್ನೂ ಓದಿ: ಅನುಷಾ-ಧರ್ಮ ಸಂಬಂಧಕ್ಕೆ ಹುಳಿ ಹಿಂಡಿದ ಬಿಗ್ ಬಾಸ್ ಟಾಸ್ಕ್

ಜಗಳ ನಡೆದ ಬಳಿಕ ಅನುಷಾ ರೈ ಅವರು ಸಿಕ್ಕಾಪಟ್ಟೆ ಕೋಪ ಮಾಡಿಕೊಂಡರು. ಅವರನ್ನು ಸಮಧಾನ ಮಾಡಲು ಧರ್ಮ ಪ್ರಯತ್ನಿಸಿದರು. ತಮ್ಮ ಮಾತಿನಲ್ಲಿ ಯಾವುದೇ ಬೇರೆ ಉದ್ದೇಶ ಇರಲಿಲ್ಲ ಎಂದು ಧರ್ಮ ಅವರು ಮನವರಿಕೆ ಮಾಡಲು ಪ್ರಯತ್ನಿಸಿದರೂ ಕೂಡ ಅನುಷಾ ಒಪ್ಪಿಕೊಳ್ಳಲಿಲ್ಲ. ಧರ್ಮ ಜೊತೆ ಮಾತನಾಡಲು ಕೂಡ ಅನುಷಾ ಮನಸ್ಸು ಮಾಡಲಿಲ್ಲ. ಇದರಿಂದಾಗಿ ಇಬ್ಬರ ನಡುವೆ ದುಷ್ಮನಿ ಬೆಳೆದಂತಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ದೀಪಗಳಿಂದ ಅಲಂಕೃತಗೊಂಡಿರುವ ಇಡೀ ಧರ್ಮಸ್ಥಳವೇ ಝಗಮಗ, ಕಣ್ಣಿಗೆ ಹಬ್ಬ
ದೀಪಗಳಿಂದ ಅಲಂಕೃತಗೊಂಡಿರುವ ಇಡೀ ಧರ್ಮಸ್ಥಳವೇ ಝಗಮಗ, ಕಣ್ಣಿಗೆ ಹಬ್ಬ
ಶಾಸ್ತ್ರದ ಪ್ರಕಾರ ಬಾಳೆ ಎಲೆ ಊಟ ಹೇಗೆ ಮಾಡಬೇಕು? ವಿಡಿಯೋ ನೋಡಿ
ಶಾಸ್ತ್ರದ ಪ್ರಕಾರ ಬಾಳೆ ಎಲೆ ಊಟ ಹೇಗೆ ಮಾಡಬೇಕು? ವಿಡಿಯೋ ನೋಡಿ
Horoscope: ಈ ರಾಶಿಯವರಿಗೆ ಇಂದು ಕಂಕಣ ಭಾಗ್ಯ ಕೂಡಿ ಬರಲಿದೆ
Horoscope: ಈ ರಾಶಿಯವರಿಗೆ ಇಂದು ಕಂಕಣ ಭಾಗ್ಯ ಕೂಡಿ ಬರಲಿದೆ
ಟೀಂ ಇಂಡಿಯಾದ ನೂತನ ಏಕದಿನ ಜೆರ್ಸಿ ಹೇಗಿದೆ ಗೊತ್ತಾ?
ಟೀಂ ಇಂಡಿಯಾದ ನೂತನ ಏಕದಿನ ಜೆರ್ಸಿ ಹೇಗಿದೆ ಗೊತ್ತಾ?
ರಾತ್ರಿ ಬಾರ್​ಗೆ ಕನ್ನ ಹಾಕಿ 2 ಆಲ್ಕೋಹಾಲ್ ಬಾಟಲಿಯನ್ನು ಕದ್ದ ಕಳ್ಳ!
ರಾತ್ರಿ ಬಾರ್​ಗೆ ಕನ್ನ ಹಾಕಿ 2 ಆಲ್ಕೋಹಾಲ್ ಬಾಟಲಿಯನ್ನು ಕದ್ದ ಕಳ್ಳ!
ರಂಗಾಯಣ ರಘು ಪಾತ್ರಕ್ಕೆ ಹೊಸ ಭಾಷೆ ಸೃಷ್ಟಿ ಮಾಡಿದ ಯೋಗರಾಜ್​ ಭಟ್
ರಂಗಾಯಣ ರಘು ಪಾತ್ರಕ್ಕೆ ಹೊಸ ಭಾಷೆ ಸೃಷ್ಟಿ ಮಾಡಿದ ಯೋಗರಾಜ್​ ಭಟ್
ಸಿಎಂ, ಡಿಸಿಎಂ ಸಿಡಬ್ಲ್ಯೂಸಿ ಸಭೆಯಲ್ಲಿ ಪಾಲ್ಗೊಳ್ಳಲು ಹೋಗಿದ್ದಾರೆ: ಜಮೀರ್
ಸಿಎಂ, ಡಿಸಿಎಂ ಸಿಡಬ್ಲ್ಯೂಸಿ ಸಭೆಯಲ್ಲಿ ಪಾಲ್ಗೊಳ್ಳಲು ಹೋಗಿದ್ದಾರೆ: ಜಮೀರ್
ನಂಜನಗೂಡು ಶ್ರೀಕಂಠೇಶ್ವರ ಕೋಟಿ ಒಡೆಯ, ನಾಲ್ಕೈದು ದೇಶ ಕರೆನ್ಸಿ ಪತ್ತೆ!
ನಂಜನಗೂಡು ಶ್ರೀಕಂಠೇಶ್ವರ ಕೋಟಿ ಒಡೆಯ, ನಾಲ್ಕೈದು ದೇಶ ಕರೆನ್ಸಿ ಪತ್ತೆ!
ಶೋಷಿತ ಸಮುದಾಯಗಳ ಒಕ್ಕೂಟ ಮತ್ತು ಕೆಪಿಸಿಸಿ ಸಂಯುಕ್ತ ಆಶ್ರಯದಲ್ಲಿ ಸಮಾವೇಶ
ಶೋಷಿತ ಸಮುದಾಯಗಳ ಒಕ್ಕೂಟ ಮತ್ತು ಕೆಪಿಸಿಸಿ ಸಂಯುಕ್ತ ಆಶ್ರಯದಲ್ಲಿ ಸಮಾವೇಶ
ಸಿದ್ದರಾಮಯ್ಯ ಸರ್ಕಾರಕ್ಕೆ ಹಿಂದೂಗಳನ್ನು ಕಂಡರಾಗಲ್ಲ, ಅಲರ್ಜಿ: ಅಶೋಕ
ಸಿದ್ದರಾಮಯ್ಯ ಸರ್ಕಾರಕ್ಕೆ ಹಿಂದೂಗಳನ್ನು ಕಂಡರಾಗಲ್ಲ, ಅಲರ್ಜಿ: ಅಶೋಕ