AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕನ್ನಡದ ನಟನ ಮೇಲೆ ಚಿತ್ರಮಂದಿರದಲ್ಲಿ ಮಹಿಳೆಯಿಂದ ಹಲ್ಲೆ; ಕಾರಣ ವಿಚಿತ್ರ

ಹೈದರಾಬಾದ್​ನ ಚಿತ್ರಮಂದಿರದಲ್ಲಿ ಕನ್ನಡದ ಖ್ಯಾತ ನಟ ಎನ್​.ಟಿ. ರಾಮಸ್ವಾಮಿ ಅವರ ಮೇಲೆ ಹಲ್ಲೆ ಮಾಡಲಾಗಿದೆ. ಮಹಿಳೆಯೊಬ್ಬರು ಓಡಿ ಬಂದು ನಟನಿಗೆ ಹೊಡೆದಿದ್ದಾರೆ. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ‘ಲವ್ ರೆಡ್ಡಿ’ ಸಿನಿಮಾ ಪ್ರದರ್ಶನ ಆಗುತ್ತಿದ್ದ ಚಿತ್ರಮಂದಿರದಲ್ಲಿ ಈ ಘಟನೆ ನಡೆದಿದೆ. ಮಹಿಳೆಯಿಂದ ಹಲ್ಲೆಗೆ ಒಳಗಾದ ರಾಮಸ್ವಾಮಿ ಅವರು ವಿಚಲಿತರಾಗಿದ್ದಾರೆ.

ಕನ್ನಡದ ನಟನ ಮೇಲೆ ಚಿತ್ರಮಂದಿರದಲ್ಲಿ ಮಹಿಳೆಯಿಂದ ಹಲ್ಲೆ; ಕಾರಣ ವಿಚಿತ್ರ
ನಟ ಎನ್​.ಟಿ. ರಾಮಸ್ವಾಮಿ ಮೇಲೆ ಹಲ್ಲೆ
ಮದನ್​ ಕುಮಾರ್​
|

Updated on: Oct 25, 2024 | 6:53 PM

Share

ಎನ್.ಟಿ. ರಾಮಸ್ವಾಮಿ ಅವರು ಎಲ್ಲರಿಗೂ ಪರಿಚಿತ ನಟ. ಕನ್ನಡ ಸಿನಿಮಾ ಮತ್ತು ಸೀರಿಯಲ್​ಗಳಲ್ಲಿ ನಟಿಸಿ ಅವರು ಫೇಮಸ್ ಆಗಿದ್ದಾರೆ. ಪರಭಾಷೆಯ ಸಿನಿಮಾಗಳಲ್ಲೂ ಅವರು ಅಭಿನಯಿಸಿದ್ದಾರೆ. ತೆಲುಗಿನ ‘ಲವ್​ ರೆಡ್ಡಿ’ ಸಿನಿಮಾದಲ್ಲಿ ರಾಮಸ್ವಾಮಿ ಅವರು ಒಂದು ಮುಖ್ಯವಾದ ಪಾತ್ರ ಮಾಡಿದ್ದಾರೆ. ಅಕ್ಟೋಬರ್​ 18ರಂದು ಈ ಸಿನಿಮಾ ಬಿಡುಗಡೆ ಆಯಿತು. ಒಂದು ವಾರ ಕಳೆದ ಬಳಿಕ ನಟ ಎನ್​.ಟಿ. ರಾಮಸ್ವಾಮಿ ಅವರ ಮೇಲೆ ಹಲ್ಲೆ ಆಗಿದೆ. ಅಂದಹಾಗೆ, ಈ ಹಲ್ಲೆ ಮಾಡಿರುವುದು ಓರ್ವ ಮಹಿಳೆ. ಆ ಸಂದರ್ಭದ ವಿಡಿಯೋ ಕೂಡ ವೈರಲ್ ಆಗಿದೆ.

ಹೈದರಾಬಾದ್​ನಲ್ಲಿ ಈ ಘಟನೆ ನಡೆದಿದೆ. ‘ಲವ್ ರೆಡ್ಡಿ’ ಪ್ರದರ್ಶನ ಕಾಣುತ್ತಿದ್ದ ಚಿತ್ರಮಂದಿರವೊಂದಕ್ಕೆ ಸಿನಿಮಾ ತಂಡದವರು ಭೇಟಿ ನೀಡಿದ್ದಾರೆ. ಸಿನಿಮಾಗೆ ಎಲ್ಲ ಕಡೆಗಳಲ್ಲಿ ಪಾಸಿಟಿವ್ ಪ್ರತಿಕ್ರಿಯೆ ಸಿಗುತ್ತಿರುವುದರಿಂದ ಅವರು ಪ್ರೇಕ್ಷಕರ ಎದುರು ಬಂದಿದ್ದಾರೆ. ಆದರೆ ಸಿನಿಮಾ ಮುಗಿದ ಬಳಿಕ ಮಹಿಳೆಯೊಬ್ಬರು ಎನ್​.ಟಿ. ರಾಮಸ್ವಾಮಿ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ.

ಸಿನಿಮಾ ಪ್ರದರ್ಶನ ಮುಗಿದ ನಂತರ ಚಿತ್ರತಂಡದವರು ಪ್ರೇಕ್ಷಕರ ಬಳಿ ಸಂವಾದ ಮಾಡುತ್ತಿದ್ದರು. ಆಗ ಮಹಿಳೆಯು ಕೂಗಾಡುತ್ತಾ ಓಡಿ ಬಂದು ರಾಮಸ್ವಾಮಿ ಅವರ ಕೆನ್ನೆಗೆ ಬಾರಿಸಲು ಪ್ರಯತ್ನಿಸಿದ್ದಾರೆ. ಅಲ್ಲದೇ, ನಟನ ಬಟ್ಟೆ ಹಿಡಿದುಕೊಂಡು ಹೊಡೆಯಲು ಪ್ರಯತ್ನಿಸಿದ್ದಾರೆ. ಏನು ನಡೆಯುತ್ತಿದೆ ಎಂಬುದು ತಿಳಿಯದೇ ರಾಮಸ್ವಾಮಿ ಅವರು ಕಂಗಾಲಾಗಿದ್ದಾರೆ. ಕೂಡಲೇ ಅಕ್ಕಪಕ್ಕದಲ್ಲಿ ಇದ್ದ ಎಲ್ಲರೂ ಬಂದು ಮಹಿಳೆಯನ್ನು ತಡೆದಿದ್ದಾರೆ. ಹಾಗಿದ್ದರೂ ಕೂಡ ಆ ಮಹಿಳೆಯ ಆಕ್ರೋಶ ಕಡಿಮೆ ಆಗಿಲ್ಲ.

ಎನ್​.ಟಿ. ರಾಮಸ್ವಾಮಿ ಮೇಲೆ ನಡೆದ ಹಲ್ಲೆಯ ವಿಡಿಯೋ:

ಅಷ್ಟಕ್ಕೂ ಮಹಿಳೆಗೆ ಇಷ್ಟು ಕೋಪ ಬರಲು ರಾಮಸ್ವಾಮಿ ಅವರು ಮಾಡಿದ್ದಾದರೂ ಏನು? ‘ಲವ್ ರೆಡ್ಡಿ’ ಸಿನಿಮಾದಲ್ಲಿ ರಾಮಸ್ವಾಮಿ ಅವರು ವಿಲನ್ ಪಾತ್ರ ಮಾಡಿದ್ದಾರೆ. ಆ ಪಾತ್ರದ ಇಂಪ್ಯಾಕ್ಟ್​ ಎಷ್ಟರಮಟ್ಟಿಗೆ ಇದೆ ಎಂದರೆ ಸಿನಿಮಾ ನೋಡಿದ ಮಹಿಳೆಗೆ ಇದೆಲ್ಲ ನಿಜ ಎನಿಸಿದೆ. ಹಾಗಾಗಿ ಆಕೆಗೆ ರಾಮಸ್ವಾಮಿ ಅವರ ಮೇಲೆ ಕೋಪ ಬಂದಿದೆ. ಕೋಪ ತಡೆಯಲಾಗದೇ ಅವರು ನಟನಿಗೆ ಹೊಡೆಯಲು ಬಂದಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದೆ.

ಇದನ್ನೂ ಓದಿ: ಗಣಿತದಲ್ಲಿ ಕಡಿಮೆ ಅಂಕ ಬಂತೆಂದು ವಿದ್ಯಾರ್ಥಿ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ ಕೋಚಿಂಗ್ ಸೆಂಟರ್​ನ ವಾರ್ಡನ್

ವೈರಲ್ ಆಗಿರುವ ಈ ವಿಡಿಯೋವನ್ನು ನೋಡಿ ಜನರು ಅನೇಕ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಇದು ಚಿತ್ರತಂಡದ ಪ್ರಚಾರದ ಗಿಮಿಕ್ ಕೂಡ ಇರಬಹುದು ಎಂದು ಕೆಲವರು ಅನುಮಾನ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ಆ ಮಹಿಳೆ ನಿಜವಾಗಿಯೂ ಆವೇಶಭರಿತವಾಗಿ ಹಲ್ಲೆ ಮಾಡಿದ್ದೇ ಹೌದಾದರೆ ಅದು ವಿಲನ್​ ಪಾತ್ರದಲ್ಲಿ ರಾಮಸ್ವಾಮಿ ಅವರ ನಟನೆಗೆ ಸಿಕ್ಕ ಪ್ರಶಂಸೆ ಎಂದೇ ಪರಿಗಣಿಸಬಹುದು. ಆದರೆ ಯಾವುದೇ ವ್ಯಕ್ತಿಯ ಮೇಲೆ ಕೈ ಮಾಡುವುದು ಕಾನೂನಿನ ಪ್ರಕಾರ ಅಪರಾಧ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್