AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಣಿತದಲ್ಲಿ ಕಡಿಮೆ ಅಂಕ ಬಂತೆಂದು ವಿದ್ಯಾರ್ಥಿ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ ಕೋಚಿಂಗ್ ಸೆಂಟರ್​ನ ವಾರ್ಡನ್

ವಿದ್ಯಾರ್ಥಿ ಗಣಿತ ವಿಷಯದ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದಿರೋ ಕಾರಣ ವಿದ್ಯಾರ್ಥಿಯ ತೊಡೆಭಾಗ‌ ಹಾಗೂ ಬೆನ್ನಿನ‌ ಮೇಲೆ ವಾರ್ಡನ್ ಹಲ್ಲೆ ಮಾಡಿದ್ದಾನೆ. ವಿಜಯಪುರ ತಾಲೂಕಿನ ಇಟ್ಟಂಗಿಹಾಳ ಗ್ರಾಮದ ಹೊರ ಭಾಗದಲ್ಲಿರೋ ಎಕ್ಷಲೆಂಟ್ ಕೋಚಿಂಗ್ ಸೆಂಟರ್‌ ನಲ್ಲಿ ಘಟನೆ ನಡೆದಿದೆ.

ಗಣಿತದಲ್ಲಿ ಕಡಿಮೆ ಅಂಕ ಬಂತೆಂದು ವಿದ್ಯಾರ್ಥಿ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ ಕೋಚಿಂಗ್ ಸೆಂಟರ್​ನ ವಾರ್ಡನ್
ಗಣಿತದಲ್ಲಿ ಕಡಿಮೆ ಅಂಕ; ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿದ ವಾರ್ಡನ್
ಅಶೋಕ ಯಡಳ್ಳಿ, ವಿಜಯಪುರ
| Edited By: |

Updated on: Oct 07, 2024 | 12:55 PM

Share

ವಿಜಯಪುರ, ಅ.07: ಗಣಿತ ವಿಷಯದ ಪರೀಕ್ಷೆಯಲ್ಲಿ ಕಡಿಮೆ ಆಂಕ ಪಡೆದ ಎಂಬ ಕಾರಣದಿಂದ ವಿಜಯಪುರ ನಗರದ ಕೋಚಿಂಗ್ ಸೆಂಟರ್​ನ ವಾರ್ಡನ್ ವಿದ್ಯಾರ್ಥಿ (Student) ಮೇಲೆ ತೀವ್ರವಾಗಿ ಹಲ್ಲೆ (Assault) ನಡೆಸಿದ ಘಟನೆ ನಡೆದಿದೆ. ವಿಜಯಪುರ ತಾಲೂಕಿನ ಇಟ್ಟಂಗಿಹಾಳ ಗ್ರಾಮದ ಹೊರ ಭಾಗದಲ್ಲಿರೋ ಎಕ್ಷಲೆಂಟ್ ಕೋಚಿಂಗ್ ಸೆಂಟರ್‌ ನಲ್ಲಿ ಘಟನೆ ನಡೆದಿದೆ.

ಕೋಚಿಂಗ್​ ಪಡೆಯುತ್ತಿದ್ದ ದಾವಣಗೆರೆ ಮೂಲದ ವಿದ್ಯಾರ್ಥಿ ಮೇಲೆ ವಾರ್ಡನ್ ತೀವ್ರವಾಗಿ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ವಿದ್ಯಾರ್ಥಿ ಗಣಿತ ವಿಷಯದ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದಿರೋ ಕಾರಣ ವಿದ್ಯಾರ್ಥಿಯ ತೊಡೆಭಾಗ‌ ಹಾಗೂ ಬೆನ್ನಿನ‌ ಮೇಲೆ ವಾರ್ಡನ್ ಹಲ್ಲೆ ಮಾಡಿದ್ದಾನೆ. ಹಲ್ಲೆಯಿಂದಾಗಿ ವಿದ್ಯಾರ್ಥಿಗೆ ಕುಳಿತುಕೊಳ್ಳಲೂ ಆಗುತ್ತಿಲ್ಲ. ಈ ಕೋಚಿಂಗ್ ಸೆಂಟರ್ ನಲ್ಲಿ ಈ ಹಿಂದೆಯೂ ಹಲವು‌ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿದ್ದ ಆರೋಪ ಕೇಳಿ ಬಂದಿದೆ.

ಇನ್ನು ಕೋಚಿಂಗ್ ಸೆಂಟರ್ ಮುಖ್ಯಸ್ಥ ಬಸವರಾಜ ಕವಲಗಿ ವಿದ್ಯಾರ್ಥಿ ಮೇಲೆ ವಾರ್ಡನ್ ಹಲ್ಲೆ ಮಾಡಿರೋ ವಿಚಾರ ಗೊತ್ತಿಲ್ಲವೆಂದಿದ್ಧಾರೆ. ಘಟನೆ ಕಾರಣ ವಿದ್ಯಾರ್ಥಿಯನ್ನು ಆತನ ಪೋಷಕರು ದಾವಣಗೆರೆಗೆ ವಾಪಸ್ ಕರೆದುಕೊಂಡು ಹೋಗಿದ್ದು ಅಲ್ಲಿಯೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಈ ಘಟನೆ ಕುರಿತು ದಾವಣಗೆರೆಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲು ತೀರ್ಮಾಣ ಮಾಡಿದ್ದಾಗಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಉಡುಪಿ ಜಿಲ್ಲೆಯಲ್ಲಿ ಸಂಭವಿಸಿದ ಮೇಘ ಸ್ಫೋಟಕ್ಕೆ ಓರ್ವ ವೃದ್ಧೆ ಬಲಿ

ಬಹುಹಳ್ಳಿ ಕುಡಿಯುವ ನೀರಿನ ಯೋಜನೆ ಕೆಲಸಗಾರರಿಗಿಲ್ಲ ಸಂಬಳ

ವಿಜಯಪುರ ಜಿಲ್ಲೆಯಲ್ಲಿ 20ಕ್ಕೂ ಆಧಿಕ ಬಹುಹಳ್ಳಿ ಕುಡಿಯುವ ನೀರಿನ ಯೋಜನೆ ಜಾರಿಯಲ್ಲಿವೆ. ಬಹುಹಳ್ಳಿ ಕುಡಿಯೋ ನೀರಿನ ಯೋಜನೆಯಲ್ಲಿ ಕೆಲಸ ಮಾಡುತ್ತಿರೋ ಕೆಲಸಗಾರರಿಗೆ ಕಳೆದ 18 ತಿಂಗಳುಗಳಿಂದ ಸಂಬಳ ಆಗಿಲ್ಲವೆಂದು ಜಿಲ್ಲಾ ಬಿಜೆಪಿ ರೈತ ಮೋರ್ಚಾದ ಆಧ್ಯಕ್ಷ ಗುರುಲಿಂಗಪ್ಪ ಅಂಗಡಿ ಹಾಗೂ ಇತರರು ಆರೋಪ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರ ಬಹು ಹಳ್ಳಿ ಕುಡಿಯೋ ನೀರಿನ ಯೋಜನೆಯ ಗುತ್ತಿಗೆದಾರರಿಗೆ ಹಣ ನೀಡಿಲ್ಲ. ಹಾಗಾಗಿ ಕೆಲಸಗಾರರಿಗೂ ಕಳೆದ 18 ತಿಂಗಳುಗಳಿಂದ ಸಂಬಳ ಇಲ್ಲದೇ ಕೆಲಸ ಮಾಡುವಂತಾಗಿದೆ ಎಂದು ವಾಗ್ದಾಳಿ ನಡೆಸಿದರು.

ಗುತ್ತಿಗೆದಾರರಿಗೆ ಸರ್ಕಾರ ಸಕಾಲದಲ್ಲಿ ಬಿಲ್ ಪಾವತಿ ಮಾಡದ ಹಿನ್ನಲೆಯಲ್ಲಿ ಗುತ್ತಿಗೆದಾರರು ಆರ್ಥಿಕ ತೊಂದರೆಗೀಡು ಮಾಡಿದ್ದಾರೆಂದು ಆರೋಪ ಮಾಡಿದರು. ಈ ಕಾರಣ ಕಳೆದ ಅಕ್ಟೋಬರ್ 4 ರಿಂದ ಬಹುಹಳ್ಳಿ ಕುಡಿಯೋ ನೀರಿನ ಪೂರೈಕೆ ಸ್ಥಗಿತಗೊಳಿಸಲಾಗಿದೆ. ಇದರಿಂದ ಗ್ರಾಮೀಣ ಭಾಗದ ಜನರಿಗೆ ತೀವ್ರ ತೊಂದರೆಯಾಗುತ್ತಿದೆ. ಈ ಕುರಿತು ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಗಮನ ಹರಿಸಿಲ್ಲಾ ಎಂದು ಗುರುಲಿಂಗಪ್ಪ ಅಂಗಡಿ ಆರೋಪ ಮಾಡಿದರು. ಕೂಡಲೇ ರಾಜ್ಯ ಸರಕಾರ ಕೂಡಲೇ ಇತ್ತ ಗಮನ ಹರಿಸಿ ಸಮಸ್ಯೆ ನಿವಾರಣೆ ಮಾಡಬೇಕೆಂದು ಒತ್ತಾಯಿಸಿದರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ