ಅಜಯ್ ರಾವ್ ಓದಿದ್ದು ಎಸ್ಎಸ್ಎಲ್ಸಿ ತನಕ ಮಾತ್ರ; ಅಚ್ಚರಿ ವಿಷಯ ಹೇಳಿದ ನಟ
ಸ್ಯಾಂಡಲ್ವುಡ್ ನಟ ಅಜಯ್ ರಾವ್ ಅನೇಕ ವರ್ಷಗಳಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಸಿನಿಮಾ ಹೀರೋ ಆಗಿ ಮಿಂಚಿದ್ದಾರೆ. ಅಲ್ಲದೇ ನಿರ್ಮಾಪಕನಾಗಿಯೂ ಅವರು ಗೆಲುವು ಕಂಡಿದ್ದಾರೆ. ಇಷ್ಟೆಲ್ಲ ಸಾಧನೆ ಮಾಡಿದ ಅಜಯ್ ರಾವ್ ಶಿಕ್ಷಣ ಪಡೆದಿದ್ದು ಎಸ್ಎಸ್ಎಲ್ಸಿ ತನಕ ಮಾತ್ರ! ಇದು ಅಚ್ಚರಿಯ ವಿಷಯ.
ಖ್ಯಾತ ನಟ ಅಜಯ್ ರಾವ್ (Ajay Rao) ಅವರು ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಹೀರೋ ಆಗಿ ಅವರು ಮಿಂಚಿದ್ದಾರೆ. ಅಲ್ಲದೇ ನಿರ್ಮಾಪಕನಾಗಿ ಕೂಡ ಯಶಸ್ಸು ಕಂಡಿದ್ದಾರೆ. ಇಷ್ಟೆಲ್ಲ ಸಾಧನೆ ಮಾಡಿರುವ ಅಜಯ್ ರಾವ್ ಅವರು ಓದಿದ್ದು ಕೇವಲ ಎಸ್ಎಸ್ಎಲ್ಸಿ (SSLC) ತನಕ ಮಾತ್ರ ಎಂಬುದು ಅಚ್ಚರಿಯ ವಿಷಯ. ಈ ಬಗ್ಗೆ ಅವರೇ ಹೇಳಿಕೊಂಡಿದ್ದಾರೆ. ‘ನನ್ನ ಬಳಿ ಇರುವುದು ಎಸ್ಎಸ್ಎಲ್ಸಿ ಪ್ರಮಾಣಪತ್ರ ಮಾತ್ರ’ ಎಂದು ಅವರು ಹೇಳಿದ್ದಾರೆ. ‘ಯುದ್ಧಕಾಂಡ’ (Yuddhakaanda Movie) ಸಿನಿಮಾವನ್ನು ಅವರು ನಿರ್ಮಿಸಿದ್ದಾರೆ. ಜೊತೆಗೆ ಮುಖ್ಯಭೂಮಿಕೆಯಲ್ಲೂ ನಟಿಸಿದ್ದಾರೆ. ಈ ಸಿನಿಮಾ ಇಂದು (ಏಪ್ರಿಲ್ 18) ಬಿಡುಗಡೆ ಆಗಿದೆ. ‘ಟಿವಿ9’ ವಿಶೇಷ ಸಂದರ್ಶನದಲ್ಲಿ ಅಜಯ್ ರಾವ್ ಅವರು ಮಾತನಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos