ರಸ್ತೆ ದಾಟುತ್ತಿದ್ದಾಗ ವೇಗವಾಗಿ ಬಂದ ಫಾರ್ಚೂನರ್ ಕಾರು ಡಿಕ್ಕಿ ಹೊಡೆದು ಹಾರಿ ಬಿದ್ದ ಯುವಕ
ಲಲಿತಪುರದಲ್ಲಿ ರಾಜಧಾನಿ ಧಾಬಾದ ಮುಂಭಾಗದಲ್ಲಿರುವ ಕಚ್ರೌಂಡ ಅಣೆಕಟ್ಟು ಬಳಿ ಈ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ. ಗುರುತನ್ನು ಇನ್ನೂ ಪತ್ತೆಹಚ್ಚಿಲ್ಲ. ಆತನ ಸ್ಥಿತಿ ಗಂಭೀರವಾಗಿದೆ. ಬಸ್ ಅಡ್ಡಬಂದಿದ್ದರಿಂದ ವೇಗವಾಗಿ ಬರುತ್ತಿದ್ದ ಕಾರು ಸಮೀಪಿಸುತ್ತಿರುವುದನ್ನು ಗಮನಿಸದೆ ಮುಂದೆ ಹೋದ ಆತ ಕಾರು ಡಿಕ್ಕಿಯ ರಭಸಕ್ಕೆ ಸುಮಾರು 50 ಮೀಟರ್ ದೂರಕ್ಕೆ ಬಿದ್ದಿದ್ದಾನೆ.
ನವದೆಹಲಿ, ಏಪ್ರಿಲ್ 18: ಉತ್ತರ ಪ್ರದೇಶದ (Uttar Pradesh) ಲಲಿತಪುರದಲ್ಲಿ ರಸ್ತೆ ದಾಟುತ್ತಿದ್ದಾಗ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಯುವಕನೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ. ಈ ಘಟನೆ ಆ ಪ್ರದೇಶದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಬಸ್ಸಿನಿಂದ ಇಳಿದು ರಸ್ತೆ ದಾಟಲು ಓಡುತ್ತಿದ್ದ ಯುವಕನಿಗೆ ಕಾರು ಡಿಕ್ಕಿ ಹೊಡೆದಿದ್ದರಿಂದ ಆತ ಬಹುದೂರ ಹಾರಿ ಬಿದ್ದಿದ್ದಾನೆ. ಬಸ್ ಅಡ್ಡಬಂದಿದ್ದರಿಂದ ವೇಗವಾಗಿ ಬರುತ್ತಿದ್ದ ಕಾರು ಸಮೀಪಿಸುತ್ತಿರುವುದನ್ನು ಗಮನಿಸದೆ ಮುಂದೆ ಹೋದ ಆತ ಕಾರು ಡಿಕ್ಕಿಯ ರಭಸಕ್ಕೆ ಸುಮಾರು 50 ಮೀಟರ್ ದೂರಕ್ಕೆ ಬಿದ್ದಿದ್ದಾನೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Latest Videos