ಅರವಿಂದ್ ಕೇಜ್ರಿವಾಲ್ ಮಗಳ ಮದುವೆಯಲ್ಲಿ ಪಂಜಾಬ್ ಸಿಎಂ ಭಗವಂತ್ ಮಾನ್ ಭರ್ಜರಿ ಡ್ಯಾನ್ಸ್
ಕೇಜ್ರಿವಾಲ್ ತಮ್ಮ ಮಗಳ ಮದುವೆ ಸಮಾರಂಭದಲ್ಲಿ ನೃತ್ಯ ಮಾಡುತ್ತಿರುವ ವಿಡಿಯೋ ಕೂಡ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹರಿದಾಡುತ್ತಿದೆ. ಅಲ್ಲು ಅರ್ಜುನ್ ಅಭಿನಯದ ಪುಷ್ಪಚಿತ್ರದ ಜನಪ್ರಿಯ ಟ್ರ್ಯಾಕ್ ಸಾಮಿಯ ಹಿಂದಿ ಆವೃತ್ತಿಗೆ ಕೇಜ್ರಿವಾಲ್ ಕುಣಿಯುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ಭಗವಂತ್ ಮಾನ್ ಅವರ ಡ್ಯಾನ್ಸ್ ವಿಡಿಯೋ ವೈರಲ್ ಆಗಿದೆ. ಪಂಜಾಬ್ ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್ ತಮ್ಮ ಪತ್ನಿ ಗುರುಪ್ರೀತ್ ಕೌರ್ ಅವರೊಂದಿಗೆ 'ನಾಚಿ ಜೋ ಸಾದೇ ನಾಲ್' ಹಾಡಿಗೆ ಭಾಂಗ್ರಾ ನೃತ್ಯ ಮಾಡಿದ್ದಾರೆ.
ನವದೆಹಲಿ, ಏಪ್ರಿಲ್ 18: ದೆಹಲಿಯ ಮಾಜಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರ ಪುತ್ರಿ ಹರ್ಷಿತಾ ಅವರ ಮದುವೆ ಸಂಭವ್ ಜೈನ್ ಅವರೊಂದಿಗೆ ನಡೆದಿದೆ. ಮದುವೆಯ ಹಿಂದಿನ ದಿನ ನಡೆದ ಸಂಗೀತ್ ಕಾರ್ಯಕ್ರಮದಲ್ಲಿ ಪಂಜಾಬ್ನ ಆಪ್ ಸರ್ಕಾರದ ಸಿಎಂ ಭಗವಂತ್ ಮಾನ್ ತಮ್ಮ ಪತ್ನಿಯ ಜೊತೆ ಭರ್ಜರಿಯಾಗಿ ಸ್ಟೆಪ್ ಹಾಕಿದ್ದಾರೆ. ಭಗವಂತ್ ಮಾನ್ ಅವರ ಡ್ಯಾನ್ಸ್ ವಿಡಿಯೋ ವೈರಲ್ ಆಗಿದೆ. ಪಂಜಾಬ್ ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್ ತಮ್ಮ ಪತ್ನಿ ಗುರುಪ್ರೀತ್ ಕೌರ್ ಅವರೊಂದಿಗೆ ‘ನಾಚಿ ಜೋ ಸಾದೇ ನಾಲ್’ ಹಾಡಿಗೆ ಭಾಂಗ್ರಾ ನೃತ್ಯ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published on: Apr 18, 2025 10:15 PM
Latest Videos