ಮಾಲೀಕನ ಮೇಲೆ ನಡೆದ ದಾಳಿ ತಪ್ಪಿಸಿ ಹೀರೋ ಆದ ಸಾಕುನಾಯಿ!
ಗುಜರಾತ್‌ನ ಮೋರ್ಬಿಯಲ್ಲಿ ಮಾಲೀಕನ ಮೇಲೆ ದಾಳಿ ಮಾಡಲು ಬಂದ ಮೂವರು ವ್ಯಕ್ತಿಗಳನ್ನು ನಾಯಿ ಸೋಲಿಸಿದೆ. ಸಿಸಿಟಿವಿ ದೃಶ್ಯಗಳಲ್ಲಿ ಮೂವರು ವ್ಯಕ್ತಿಗಳು ರಾತ್ರಿಯ ವೇಳೆ ತೋಟದ ಮನೆಯೊಳಗೆ ಅತಿಕ್ರಮಣ ಮಾಡಿ ವ್ಯಕ್ತಿಯ ಮೇಲೆ ದಾಳಿ ಮಾಡಲು ಬಂದಿರುವುದನ್ನು ತೋರಿಸಲಾಗಿದೆ. ಆದರೆ ಆ ಸಾಕು ನಾಯಿ ತನ್ನ ಬೋನ್ ಮುರಿದು ಆ ವ್ಯಕ್ತಿಗಳನ್ನು ಓಡಿಸಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ, ಅಪರಾಧಿಗಳನ್ನು ಗುರುತಿಸಲು ಮತ್ತು ಪತ್ತೆ ಹಚ್ಚಲು ಪ್ರಯತ್ನಗಳು ನಡೆಯುತ್ತಿವೆ. ಇಲ್ಲಿಯವರೆಗೆ, ಯಾರನ್ನೂ ಬಂಧಿಸಲಾಗಿಲ್ಲ.
ಮೋರ್ಬಿ, ಏಪ್ರಿಲ್ 18: ಗುಜರಾತ್‌ನ (Gujarat) ಮೋರ್ಬಿ ಜಿಲ್ಲೆಯಲ್ಲಿ ಜರ್ಮನ್ ಶೆಫರ್ಡ್ ನಾಯಿ ತನ್ನ ಮಾಲೀಕನನ್ನು ಮೂವರು ಹಲ್ಲೆಗಾರರ ದಾಳಿಯಿಂದ ಕಾಪಾಡಿದೆ. ಬೆಳಗಿನ ಜಾವ ನಡೆದ ಸಂಪೂರ್ಣ ಘಟನೆ ಸಿಸಿಟಿವಿ ದೃಶ್ಯಗಳಲ್ಲಿ ಸೆರೆಯಾಗಿದ್ದು, ದಾಳಿಕೋರರ ಮೇಲೆ ದಾಳಿ ಮಾಡಿ ಅವರು ಓಡಿಹೋಗುವಂತೆ ಮಾಡಿದೆ. ಟಂಕಾರ ತಹಸಿಲ್ ವ್ಯಾಪ್ತಿಯ ಮಿತಾನಾ ಗ್ರಾಮದಲ್ಲಿ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಅಮಿತ್ ಥೀಬಾ ಎಂಬ ರೈತ ತಮ್ಮ ಮನೆಯಲ್ಲಿ ಸಾಕಿದ್ದ ನಾಯಿಯಿಂದಾಗಿ ಜೀವ ಉಳಿಸಿಕೊಂಡಿದ್ದಾರೆ. ಮೂವರು ಅಪರಿಚಿತ ದಾಳಿಕೋರರು ಅಮಿತ್ ಅವರ ತೋಟದ ಮನೆಗೆ ನುಗ್ಗಿ ಅವರನ್ನು ಸುತ್ತುವರೆದರು. ಅವರಲ್ಲಿ ಒಬ್ಬರು ಅವರ ಮೇಲೆ ಹಲ್ಲೆ ಮಾಡಲು ಪ್ರಾರಂಭಿಸಿದರು. ಉಳಿದವರು ಕಾವಲು ಕಾಯುತ್ತಿದ್ದರು. ಗದ್ದಲ ಕೇಳಿ ತನ್ನ ಮಾಲೀಕನ ಮೇಲೆ ದಾಳಿ ಮಾಡುವುದನ್ನು ನೋಡಿ, ಜಾನಿ ಎಂಬ ಸಾಕು ನಾಯಿ ತೀವ್ರವಾಗಿ ಬೊಗಳಲು ಪ್ರಾರಂಭಿಸಿತು. ಆ ವೇಳೆ ನಾಯಿಯನ್ನು ಬೋನಿನಲ್ಲಿ ಕೂಡಲಾಗಿತ್ತು. ಆದರೂ ಬಿಡದ ನಾಯಿ ಬೋನಿನಿಂದ ಹೊರಗೆ ಹಾರಿ ಬಂದು ನಿರ್ಭಯವಾಗಿ ದಾಳಿಕೋರರ ಮೇಲೆ ದಾಳಿ ಮಾಡಿದೆ. ಇದರಿಂದ ಹೆದರಿದ ದರೋಡೆಕೋರರು ಆ ಸ್ಥಳದಿಂದ ಓಡಿಹೋಗಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Daily Devotional: ಮನೆಯಲ್ಲಿ ಗಾಜಿನ ವಸ್ತುಗಳು ಒಡೆದು ಹೋದ್ರೆ ಅಶುಭವಾ?

Daily horoscope: ಈ ರಾಶಿಯವರಿಗೆ ಇಂದು ಅತ್ಯಂತ ಶುಭಕರ ದಿನ

ಚೈತ್ರಾ ಕುಂದಾಪುರ ಮನೆಯಲ್ಲಿ ಕಿರಿಕ್ ಆಗಲು ಕಾರಣ ಏನು? ವಿವರಿಸಿದ ತಾಯಿ

ರಕ್ತ ಪರೀಕ್ಷೆ ಮಾಡಿಸಲಿ: ಚೈತ್ರಾ ಕುಂದಾಪುರ ಆರೋಪಕ್ಕೆ ತಂದೆಯಿಂದ ನೇರ ಸವಾಲು
