AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೃಷಿಕೇಶದಲ್ಲಿ ರಿವರ್ ರಾಫ್ಟಿಂಗ್ ವೇಳೆ ಗಂಗಾ ನದಿಯಲ್ಲಿ ಮುಳುಗಿದ ಯುವಕ

ಹೃಷಿಕೇಶದಲ್ಲಿ ರಿವರ್ ರಾಫ್ಟಿಂಗ್ ವೇಳೆ ಗಂಗಾ ನದಿಯಲ್ಲಿ ಮುಳುಗಿದ ಯುವಕ

ಸುಷ್ಮಾ ಚಕ್ರೆ
|

Updated on: Apr 18, 2025 | 5:59 PM

ಹಲವಾರು ವ್ಯಕ್ತಿಗಳನ್ನು ಹೊತ್ತೊಯ್ಯುತ್ತಿದ್ದ ಬೋಟ್ ಇದ್ದಕ್ಕಿದ್ದಂತೆ ಅಲುಗಾಡಲು ಪ್ರಾರಂಭಿಸಿದಾಗ ಈ ಘಟನೆ ಸಂಭವಿಸಿದೆ. ಬೋಟ್​ನಲ್ಲಿದ್ದ ಪ್ರವಾಸಿಗರಲ್ಲಿ ಒಬ್ಬರು ಸಮತೋಲನ ಕಳೆದುಕೊಂಡು ಗರುಡ್ ಚಟ್ಟಿ ಸೇತುವೆಯ ಬಳಿ ಗಂಗಾ ನದಿಯಲ್ಲಿ ಬಿದ್ದಿದ್ದಾರೆ. ಈ ವಿಡಿಯೊದಲ್ಲಿ ಸಾಗರ್ ಪ್ಯಾಡಲ್‌ಗಳನ್ನು ಬಳಸಿ ಬೋಟ್ ಅನ್ನು ಮತ್ತೆ ಏರಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ಬೋಟ್​ನಲ್ಲಿ ಕುಳಿತಿದ್ದ ಜನರು ಅವನನ್ನು ಮತ್ತೆ ಮೇಲೆ ತರಲು ಅವನ ಹತ್ತಿರ ಹೋಗುವುದನ್ನು ಸಹ ಕಾಣಬಹುದು. ಆದರೆ ನದಿಯ ಪ್ರವಾಹ ಎಷ್ಟು ಪ್ರಬಲವಾಗಿತ್ತೆಂದರೆ ಆ ವ್ಯಕ್ತಿಯನ್ನು ಉಳಿಸಲು ಸಾಧ್ಯವಾಗಲಿಲ್ಲ. ಸಾಗರ್ ಅವರ ಶವವನ್ನು ರಕ್ಷಣಾ ತಂಡವು ಗಂಗಾ ನದಿಯಿಂದ ಹೊರತೆಗೆದಿದೆ. ನಂತರ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ.

ಹೃಷಿಕೇಶ, ಏಪ್ರಿಲ್ 18: ಭಾರತದ ಯೋಗ ರಾಜಧಾನಿ ಎಂದೂ ಕರೆಯಲ್ಪಡುವ ಉತ್ತರಾಖಂಡದ ಹೃಷಿಕೇಶಕ್ಕೆ (Rishikesh) ಪ್ರತಿ ವರ್ಷ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಕೆಲವರಿಗೆ ಭೇಟಿಯ ಉದ್ದೇಶ ಆಧ್ಯಾತ್ಮಿಕವಾಗಿದ್ದರೆ, ಯುವಕರು ಸಾಮಾನ್ಯವಾಗಿ ಸಾಹಸಕ್ಕಾಗಿ ಭೇಟಿ ನೀಡುತ್ತಾರೆ. ಈ ವೇಳೆ ಪ್ರವಾಸಿಗರು ರಿವರ್ ರಾಫ್ಟಿಂಗ್ ಮತ್ತು ಬಂಗೀ ಜಂಪಿಂಗ್‌ನಂತಹ ಚಟುವಟಿಕೆಗಳಲ್ಲಿ ತೊಡಗುತ್ತಾರೆ. ಈ ರಿವರ್ ರಾಫ್ಟಿಂಗ್‌ಗೆ ಅನುಸರಿಸುವ ಸುರಕ್ಷತಾ ಕ್ರಮಗಳ ಬಗ್ಗೆ ಪ್ರತಿಯೊಬ್ಬರೂ ಎಚ್ಚರಿಕೆಯಿಂದಿರಬೇಕು. ತೆಹ್ರಿ ಜಿಲ್ಲೆಯ ಹೃಷಿಕೇಶದ ಮುನಿಕಿರೇಟಿ ಪ್ರದೇಶದಲ್ಲಿ ದುರಂತ ಘಟನೆ ಬೆಳಕಿಗೆ ಬಂದಿದೆ. ಶಿವಪುರಿಯಿಂದ ಪ್ರಾರಂಭವಾದ ರಿವರ್ ರಾಫ್ಟಿಂಗ್ ಸಮಯದಲ್ಲಿ ಡೆಹ್ರಾಡೂನ್‌ನ ಯುವಕ ಸಾವನ್ನಪ್ಪಿದ್ದಾನೆ.

ಹಲವಾರು ವ್ಯಕ್ತಿಗಳನ್ನು ಹೊತ್ತೊಯ್ಯುತ್ತಿದ್ದ ಬೋಟ್ ಇದ್ದಕ್ಕಿದ್ದಂತೆ ಅಲುಗಾಡಲು ಪ್ರಾರಂಭಿಸಿದಾಗ ಈ ಘಟನೆ ಸಂಭವಿಸಿದೆ. ಬೋಟ್​​ನಲ್ಲಿದ್ದ ಪ್ರವಾಸಿಗರಲ್ಲಿ ಒಬ್ಬರು ಬ್ಯಾಲೆನ್ಸ್ ಕಳೆದುಕೊಂಡು ಗರುಡ್ ಚಟ್ಟಿ ಸೇತುವೆಯ ಬಳಿ ಗಂಗಾ ನದಿಯಲ್ಲಿ ಬಿದ್ದಿದ್ದಾರೆ. ಮೃತರನ್ನು ಸಾಗರ್ ನೇಗಿ ಎಂದು ಗುರುತಿಸಲಾಗಿದೆ. ಈ ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಈ ವಿಡಿಯೊದಲ್ಲಿ ಸಾಗರ್ ಪ್ಯಾಡಲ್‌ಗಳನ್ನು ಬಳಸಿ ಬೋಟ್ ಅನ್ನು ಮತ್ತೆ ಏರಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ಬೋಟ್​ನಲ್ಲಿ ಕುಳಿತಿದ್ದ ಜನರು ಅವನನ್ನು ಮತ್ತೆ ಮೇಲೆ ತರಲು ಅವನ ಹತ್ತಿರ ಹೋಗುವುದನ್ನು ಸಹ ಕಾಣಬಹುದು. ಆದರೆ ನದಿಯ ಪ್ರವಾಹ ಎಷ್ಟು ಪ್ರಬಲವಾಗಿತ್ತೆಂದರೆ ಆ ವ್ಯಕ್ತಿಯನ್ನು ಉಳಿಸಲು ಸಾಧ್ಯವಾಗಲಿಲ್ಲ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ