AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಲಸಿಗ ಕಾರ್ಮಿಕರ ಮಾಹಿತಿ ಕೇಳಿದ ರಾಜ್ಯ ಗೃಹ ಇಲಾಖೆ: ಅಚ್ಚರಿಯ ಅಂಶ ಬಯಲು

ಹುಬ್ಬಳ್ಳಿಯಲ್ಲಿ ಐದು ವರ್ಷದ ಬಾಲಕಿಯ ಅಪಹರಣ ಹತ್ಯೆ ಪ್ರಕರಣದ ನಂತರ ಕರ್ನಾಟಕದಲ್ಲಿ ವಲಸಿಗ ಕಾರ್ಮಿಕರ ಸಂಖ್ಯೆ ಮತ್ತು ನೋಂದಣಿ ಕುರಿತು ಆತಂಕ ಹೆಚ್ಚಾಗಿದೆ. ಕರ್ನಾಟಕ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಮಂಡಳಿ ವಲಸಿಗರ ಕಾರ್ಮಿಕರ ಲೆಕ್ಕಪರಿಶೀಲನೆ ನಡೆಸಿದ ವೇಳೆ ಅಚ್ಚರಿಯ ಅಂಶ ಬಯಲಾಗಿದೆ. ಈ ಕುರಿತು ವಿವರ ಇಲ್ಲಿದೆ.

ವಲಸಿಗ ಕಾರ್ಮಿಕರ ಮಾಹಿತಿ ಕೇಳಿದ ರಾಜ್ಯ ಗೃಹ ಇಲಾಖೆ: ಅಚ್ಚರಿಯ ಅಂಶ ಬಯಲು
ವಲಸಿಗ ಕಾರ್ಮಿಕರ ಮಾಹಿತಿ ಕೇಳಿದ ರಾಜ್ಯ ಗೃಹ ಇಲಾಖೆ: ಅಚ್ಚರಿಯ ಅಂಶ ಬಯಲು
Follow us
Kiran Surya
| Updated By: ವಿವೇಕ ಬಿರಾದಾರ

Updated on: Apr 18, 2025 | 9:23 PM

ಬೆಂಗಳೂರು, ಏಪ್ರಿಲ್​ 18: ಐದು ವರ್ಷದ ಬಾಲಕಿಯನ್ನು ಅಪಹರಿಸಿ, ಹತ್ಯೆ (Hubballi 5 Year Old Girl Murder) ಮಾಡಿದ್ದ ಆರೋಪಿ ರಿತೇಶ್​ ಕುಮಾರ್​​ ಹುಬ್ಬಳ್ಳಿ ಪೊಲೀಸರ (Hubballi Police) ಗುಂಡಿಗೆ ಮೃತಪಟ್ಟಿದ್ದಾನೆ. ಈ ಪ್ರಕರಣ ನಡೆದ ಬೆನ್ನಲ್ಲೇ ಕರ್ನಾಟಕ ಕಟ್ಟಡ ನಿರ್ಮಾಣ ಕಾರ್ಮಿಕರ ಮಂಡಳಿ ಅಲರ್ಟ್ ಆಗಿದೆ. ವಲಸಿಗ ಕಾರ್ಮಿಕರ ಲೆಕ್ಕ ಪರಿಶೀಲನೆಗೆ ಇಳಿದ ಇಲಾಖೆಗೆ ಅಚ್ಚರಿಯ ಮಾಹಿತಿ ತಿಳಿದಿದೆ. ರಾಜ್ಯದಲ್ಲಿ ಎಷ್ಟು ಜನ ವಲಸಿಗ ಕಾರ್ಮಿಕರಿದ್ದಾರೆ? ಅವರ ಹಿನ್ನೆಲೆ ಏನು? ಎಂಬಿತ್ಯಾದಿ ಮಾಹಿತಿಗಳನ್ನು ನೀಡುವಂತೆ ಗೃಹ ಇಲಾಖೆ ಆದೇಶಿಸಿತ್ತು. ಈ ವೇಳೆ ಲೆಕ್ಕಪರಿಶೀಲನೆ ಮಾಡಿದ ಅಧಿಕಾರಿಗಳಿಗೆ ಅಚ್ಚರಿಯ ವಿಚಾರ ತಿಳಿದಿದೆ.

ರಾಜ್ಯದಲ್ಲಿ ಐದು ಲಕ್ಷಕ್ಕೂ ಅಧಿಕ ವಲಸಿಗ ಕಾರ್ಮಿಕರಿದ್ದಾರೆ. ಆದರೆ, ಇದುವರೆಗೆ ನೋಂದಣಿಯಾಗಿದ್ದು ಕೇವಲ 46 ಸಾವಿರ ಕಾರ್ಮಿಕರು ಮಾತ್ರ. ಈ ನಡುವೆ ರಾಜ್ಯದಲ್ಲಿ ವಲಸಿಗ ಕಾರ್ಮಿಕರಿಂದ ಕ್ರೈಂ ಪ್ರಕರಣಗಳು ಹೆಚ್ಚಳವಾಗುತ್ತಿದೆ. ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗುವ ವಲಸಿಗರ ಪತ್ತೆ ಕಾರ್ಯ ಪೊಲೀಸ್ ಇಲಾಖೆಗೆ ಕಷ್ಟಕರವಾಗಿದೆ. ಅಪರಾಧಿಗಳನ್ನು ಪತ್ತೆ ಹಚ್ಚುವುದು ತಲೆನೋವಾಗಿ ಪರಿಣಮಿಸಿದೆ.

ಹೀಗಾಗಿ, ವಲಸೆ ಕಾರ್ಮಿಕರ ಮೇಲೆ ನಿಗಾ ಇಟ್ಟಿರುವ ಇಲಾಖೆ, ಕಾರ್ಮಿಕರ ಹಿನ್ನೆಲೆ, ಆಧಾರ್ ಕಾರ್ಡ್ ಮಾಹಿತಿ ಕಲೆ ಹಾಕಲು ಮುಂದಾಗಿದೆ. ಇದಕ್ಕಾಗಿ 43 ವ್ಯಾನ್​ಗಳ‌ ಕಾಲರ್ಯಚರಣೆಗೆ ಪ್ಲ್ಯಾನ್ ಮಾಡಿದೆ.

ಇದನ್ನೂ ಓದಿ
Image
ಹುಬ್ಬಳ್ಳಿ ಎನ್‌ಕೌಂಟರ್‌ ಕೇಸ್​: ಪಿಎಸ್​ಐ ಅನ್ನಪೂರ್ಣಗೆ ಮೆಚ್ಚುಗೆಯ ಮಹಾಪೂರ
Image
ಹೊರ ರಾಜ್ಯಗಳಿಂದ ಬಂದವರಿಂದಲೇ ಹೆಚ್ಚು ಅಪರಾಧ ಕೃತ್ಯ: ಗೃಹ ಸಚಿವ ಪರಮೇಶ್ವರ್
Image
ಹುಬ್ಬಳ್ಳಿ-ಧಾರವಾಡದಲ್ಲಿ ಡ್ರಗ್ಸ್ ಹಾವಳಿ ವಿಪರೀತವಾಗಿದೆ: ಪ್ರಹ್ಲಾದ್​ ಜೋಶಿ
Image
ಬಾಲಕಿ ಹತ್ಯೆಗೈದಿದ್ದ ಆರೋಪಿ ಪೊಲೀಸ್​ ಗುಂಡೇಗೆ ಬಲಿ: ಕಮಿಷನರ್​ಗೆ ಜೈಕಾರ

ವಲಸಿಗ ಕಾರ್ಮಿಕರಿಗಿರುವ ನಿಯಮಗಳು

ವಲಸಿಗ ಕಾರ್ಮಿಕರು ಕೆಲಸಕ್ಕೆಂದು ರಾಜ್ಯಕ್ಕೆ ಆಗಮಿಸಿದರೇ, ಮೊದಲಿಗೆ ನೋಂದಣಿ ಆಗಬೇಕು. ಕಾರ್ಮಿಕರು ತೊರೆಯುವ ರಾಜ್ಯ, ಹೋಗುವ ರಾಜ್ಯ ಎರಡು ಕಡೆ ಕೂಡ ಕಡ್ಡಾಯವಾಗಿ ಹೆಸರು ನೋಂದಯಿಸಬೇಕು. ಇ ಪೋರ್ಟಲ್ ಆ್ಯಪ್​ನಲ್ಲಿ ನೋಂದಣಿ ಮಾಡಿಸಬೇಕು. ಆದರೆ 2023 ಅಕ್ಟೋಬರ್​ನಿಂದ 2025ರ ಏಪ್ರಿಲ್ ತನಕ ಕೇವಲ 46,616 ಜನ ಮಾತ್ರ ನೋಂದಾಯಿಸಿಕೊಂಡಿದ್ದಾರೆ.

ಈ ಬಗ್ಗೆ ಕಾರ್ಮಿಕ ಮುಖಂಡ ಶೈಲೇಶ್ ಪೂಜಾರಿ ಮಾತನಾಡಿ, ಏನಾದರು ಅನಾಹುತ ನಡೆದರೆ ಮಾತ್ರ ಸರ್ಕಾರ ಕಾರ್ಮಿಕರ ಸಂಖ್ಯೆ ಮತ್ತು ಪರಿಶೀಲನೆ ಮಾಡಲು ಮುಂದಾಗುತ್ತದೆ. ನಂತರ ಸುಮ್ಮನಾಗುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ಬಾಲಕಿಯನ್ನು ಕೊಲೆಗೈದಿದ್ದ ಆರೋಪಿ ತಪ್ಪಿಸಿಕೊಳ್ಳಲು ಯತ್ನ, ಪೊಲೀಸ್​ ಗುಂಡಿಗೆ ಬಲಿ

ಒಟ್ಟಿನಲ್ಲಿ ಕಳೆದ ವಾರ ಹುಬ್ಬಳ್ಳಿಯಲ್ಲಿ ನಡೆದ ಘಟನೆ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದು ಇದರಿಂದ ಎಚ್ಚೆತ್ತು ಕೊಂಡಿರುವ ಇಲಾಖೆ ಇದೀಗ ವಲಸೆ ಕಾರ್ಮಿಕರ ಸಂಖ್ಯೆ ಮತ್ತು ಪರಿಶೀಲನೆ ಮಾಡಿ ಗೃಹ ಇಲಾಖೆಗೆ ನೀಡಲು ಮುಂದಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಿಜಯೇಂದ್ರ ಕೆಳಗಿಳಿಸಿ ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ: ಯತ್ನಾಳ್
ವಿಜಯೇಂದ್ರ ಕೆಳಗಿಳಿಸಿ ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ: ಯತ್ನಾಳ್
ಆಪರೇಷನ್ ಸಿಂಧೂರ ಬಳಿಕ ಮೋದಿ ಮೊದಲ ಮಾತು, ಪ್ರಧಾನಿ ಭಾಷಣದ ನೇರಪ್ರಸಾರ
ಆಪರೇಷನ್ ಸಿಂಧೂರ ಬಳಿಕ ಮೋದಿ ಮೊದಲ ಮಾತು, ಪ್ರಧಾನಿ ಭಾಷಣದ ನೇರಪ್ರಸಾರ
ರಾಕೇಶ್ ಪೂಜಾರಿ ಅಂತಿಮ ದರ್ಶನ ಪಡೆದು ಕಣ್ಣೀರು ಹಾಕಿದ ನಟಿ ರಕ್ಷಿತಾ ಪ್ರೇಮ್
ರಾಕೇಶ್ ಪೂಜಾರಿ ಅಂತಿಮ ದರ್ಶನ ಪಡೆದು ಕಣ್ಣೀರು ಹಾಕಿದ ನಟಿ ರಕ್ಷಿತಾ ಪ್ರೇಮ್
ರಾಕೇಶ್ ಪೂಜಾರಿ ಸಾವಿನ ಸುದ್ದಿ ಸುಳ್ಳಾಗಬಾರದೇ ಎನಿಸುತ್ತಿದೆ: ಗೋವಿಂದೇ ಗೌಡ
ರಾಕೇಶ್ ಪೂಜಾರಿ ಸಾವಿನ ಸುದ್ದಿ ಸುಳ್ಳಾಗಬಾರದೇ ಎನಿಸುತ್ತಿದೆ: ಗೋವಿಂದೇ ಗೌಡ
ಇಂದು ಸಾಯಂಕಾಲ 5 ಗಂಟೆಗೆ ನಡೆಯಬಹುದು ಡಿಜಿಎಂಒಗಳ ಸಭೆ
ಇಂದು ಸಾಯಂಕಾಲ 5 ಗಂಟೆಗೆ ನಡೆಯಬಹುದು ಡಿಜಿಎಂಒಗಳ ಸಭೆ
ಕೇಂದ್ರ ಸಚಿವ ಕುಮಾರಸ್ವಾಮಿ ಆರೋಗ್ಯದ ಬಗ್ಗೆ ಅಪ್ಡೇಟ್ ನೀಡಿದ ನಿಖಿಲ್​
ಕೇಂದ್ರ ಸಚಿವ ಕುಮಾರಸ್ವಾಮಿ ಆರೋಗ್ಯದ ಬಗ್ಗೆ ಅಪ್ಡೇಟ್ ನೀಡಿದ ನಿಖಿಲ್​
ಕುಟುಂಬದ ಜೀವಾಳವಾಗಿದ್ದ ಅಣ್ಣನನ್ನು ಕಳೆದುಕೊಂಡು ತಂಗಿ ದಿಗ್ಭ್ರಾಂತ
ಕುಟುಂಬದ ಜೀವಾಳವಾಗಿದ್ದ ಅಣ್ಣನನ್ನು ಕಳೆದುಕೊಂಡು ತಂಗಿ ದಿಗ್ಭ್ರಾಂತ
ಕೊಹ್ಲಿಯ ಕೊನೆ ಟೆಸ್ಟ್ ಶತಕದ ವಿಡಿಯೋ ಹಂಚಿಕೊಂಡ ಆರ್​ಸಿಬಿ
ಕೊಹ್ಲಿಯ ಕೊನೆ ಟೆಸ್ಟ್ ಶತಕದ ವಿಡಿಯೋ ಹಂಚಿಕೊಂಡ ಆರ್​ಸಿಬಿ
ಭಾರತೀಯ 3 ಸೇನಾಪಡೆ ಮುಖ್ಯಸ್ಥರ ಸುದ್ದಿಗೋಷ್ಠಿ ನೇರಪ್ರಸಾರ
ಭಾರತೀಯ 3 ಸೇನಾಪಡೆ ಮುಖ್ಯಸ್ಥರ ಸುದ್ದಿಗೋಷ್ಠಿ ನೇರಪ್ರಸಾರ
ಮುಖ್ಯಮಂತ್ರಿಯವರನ್ನು ಸ್ವಾಗತಿಸಲು ಸ್ಥಳೀಯ ನಾಯಕರ ನೂಕುನುಗ್ಗಲು
ಮುಖ್ಯಮಂತ್ರಿಯವರನ್ನು ಸ್ವಾಗತಿಸಲು ಸ್ಥಳೀಯ ನಾಯಕರ ನೂಕುನುಗ್ಗಲು