ರಾಜಕಾರಣಿಯಾಗುವ ಹುಚ್ಚು ತಲೆಗೆ ಹೋಗಿರದಿದ್ದರೆ ಸತೀಶ್ ಜಾರಕಿಹೊಳಿ ಕ್ರಿಕೆಟರ್ ಅಗಿರುತ್ತಿದ್ದರು!
ನೀಳಕಾಯದ ಸತೀಶ್ ಜಾರಕಿಹೊಳಿ ಒಬ್ಬ ಕ್ರೀಡಾಪಟ್ಟುವಿನ ದೇಹದಾರ್ಢ್ಯ ಹೊಂದಿದ್ದಾರೆ ಎಂದರೆ ತಪ್ಪಾಗಲಾರದು. ಅವರಿಗೀಗ 62ರ ಪ್ರಾಯ. ರಾಜಕಾರಣಿಗಳಿಗೆ 40 ರ ವಯಸ್ಸಿನಿಂದಲೇ ದೇಹದ ಆಕಾರ ಬಿಗಡಾಯಿಸಲಾರಂಭಿಸುತ್ತದೆ. ಚುನಾವಣೆ ಸಮಯದಲ್ಲಿ ಓಡಾಡುವ ಹಾಗೆ ಬೇರೆ ಟೈಮಲ್ಲೂ ಓಡಾಡಿದರೆ, ಅಥವಾ ವಾರಕ್ಕೆರಡು ಬಾರಿ ಜಿಮ್ ಗೆ ಹೋದರೆ ಬೊಜ್ಜು ಬರಲಾರದು.
ಹಾಸನ, ಏಪ್ರಿಲ್ 18: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ರಾಜಕಾರಣಕ್ಕೆ ಬರದಿದ್ದರೆ ಕ್ರಿಕೆಟ್ ಆಟಗಾರನಾಗುತ್ತಿದ್ದರೇ? ಅವರು ಬ್ಯಾಟ್ ಹಿಡಿಯುವ ರೀತಿ, ಬ್ಯಾಟಿಂಗ್ ಸ್ಟಾನ್ಸ್, ಎಸೆತಗಳನ್ನು ಎದುರಿಸುವ ಮತ್ತು ಆಡುವ ಶೈಲಿ ನೋಡಿದರೆ ಶಾಲಾ ಮತ್ತು ಕಾಲೇಜು ದಿನಗಳಲ್ಲಿ ಕ್ರಿಕೆಟ್ ಆಡಿರೋದು ದೃಢಪಡುತ್ತದೆ. ಹಾಸನದಲ್ಲಿಂದು ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಿಯೊಂದನ್ನು (Tennis ball Cricket tournament) ಉದ್ಘಾಟಿಸಿದ ಸತೀಶ್ ಜಾರಕಿಹೊಳಿ ಒಂದಷ್ಟು ಎಸೆತಗಳನ್ನು ಎದುರಿಸಿ ಆಡಿದರು. ಸ್ಕ್ವೇರ್ ಲೆಗ್ ಮತ್ತು ಮಿಡ್ ವಿಕೆಟ್ ಬೌಂಡರಿ ಕಡೆ ಅವರು ಎತ್ತಿ ಬಾರಿಸಿದ ಹೊಡೆತಗಳು ಮನಮೋಹಕವಲ್ಲದಿದ್ದರೂ ಉತ್ತಮವಾಗಿದ್ದವು ಅನ್ನಬಹುದು ಮಾರಾಯ್ರೇ!
ಇದನ್ನೂ ಓದಿ: ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಕೋಲಾಹಲ: ಸಚಿವರ ಏರು ಧ್ವನಿ, ಇಲ್ಲಿದೆ ಇನ್ಸೈಡ್ ಡಿಟೇಲ್ಸ್
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ