ದೆಹಲಿ: 1991 ಮೇ 21ರಂದು ಭಾರತದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ಲಿಬರೇಶನ್ ಆಫ್ ತಮಿಳು ಟೈಗರ್ ಏಲಂ(ಎಲ್ಟಿಟಿಇ) ಸಂಘಟನೆಯ ಸದಸ್ಯರು ಹತ್ಯೆ ಮಾಡಿದರು. ಶ್ರೀಲಂಕಾದಲ್ಲಿ ನಡೆದ ಭಾರತದ ಶಾಂತಿ ಕಾಪಾಡುವ ಅಭಿಯಾದ ಬಗ್ಗೆ ಆಕ್ರೋಶಗೊಂಡ ಎಲ್ಟಿಟಿಇ ಸದಸ್ಯರು ಕಾಂಗ್ರೆಸ್ ಮುಖ್ಯಸ್ಥ ರಾಜೀವ್ ಗಾಂಧಿಯವರನ್ನು ಹತ್ಯೆ ಮಾಡಿದರು. ರಾಜೀವ್ ಗಾಂಧಿಯವರ ಅಕಾಲಿಕ ನಿಧನದ ನಂತರ ಮಾಜಿ ಪ್ರಧಾನಿ ವಿ.ಪಿ ಸಿಂಗ್ ಮೇ 21ರ ದಿನವನ್ನು ಭಯೋತ್ಪದನಾ ವಿರೋಧಿ ದಿನವೆಂದು ಘೋಷಣೆ ಮಾಡಿದರು. ಇಡೀ ರಾಷ್ಟ್ರದಲ್ಲಿ ಶಾಂತಿ ಕಾಪಾಡುವುದು ಮತ್ತು ನಾಗರಿಕರಲ್ಲಿ ಐಕ್ಯತೆಯನ್ನು ಹೆಚ್ಚಿಸಲು ಸ್ಪೂರ್ತಿದಾಯಕ ದಿನವನ್ನಾಗಿ ಮೇ 21ನ್ನು ಆಚರಿಸಲಾಗುತ್ತದೆ.
ಜಾಗತಿಕ ಭಯೋತ್ಪಾದನಾ ಸೂಚ್ಯಾಂಕ (ಜಿಟಿಐ) ಪ್ರಕಾರ ಭಾರತ 8 ನೇ ಸ್ಥಾನದಲ್ಲಿದೆ. ದೇಶದಲ್ಲಿ ಇಲ್ಲಿಯವರೆಗೆ 558 ಭಯೋತ್ಪಾದನಾ ದಾಳಿಗಳು ನಡೆದಿದ್ದು ಇದೀಗ ಭಾರತ 8 ನೇ ಸ್ಥಾನದಲ್ಲಿದೆ. ಸೂಚ್ಯಾಂಕದ ಪ್ರಕಾರ, ಹತ್ತು ದೇಶಗಳಿಗೆ ಹೋಲಿಸಿದರೆ ಭಯೋತ್ಪಾದಕ ದಾಳಿಯಿಂದ ಸಾವಿಗೀಡಾದವರ ಸಂಖ್ಯೆ ಭಾರತದಲ್ಲಿ ಕಡಿಮೆ ಇದೆ. ಉಳಿದ 9 ದೇಶಗಳಲ್ಲಿ ಸಾವಿನ ಸಂಖ್ಯೆ ಸರಾಸರಿ 2.1ರಷ್ಟಿದ್ದರೆ, ಭಾರತದಲ್ಲಿ ಸರಾಸರಿ 0.5ರಷ್ಟಿದೆ.
ಭಾರತವನ್ನು ಬೆಚ್ಚಿಬೀಳಿಸಿದ 3 ದಾಳಿಗಳು
ಪುಲ್ವಾಮಾ ದಾಳಿ
2019 ಫೆಬ್ರವರಿ 14ರಂದು ಭಯೋತ್ಪಾದಕ ಸಂಘಟನೆಯಾದ ಜೈಶ್-ಇ-ಮೊಹಮ್ಮದ್ ಪುಲ್ವಾಮಾ ದಾಳಿ ನಡೆಸಿದ್ದರಿಂದ, ಜಮ್ಮು ಮತ್ತು ಕಾಶ್ಮೀರದಲ್ಲಿ 40 ಕೇಂದ್ರ ಮೀಸಲು ಪೊಲೀಸ್ ಪಡೆ ಪ್ರಾಣ ಕಳೆದುಕೊಂಡಿತು. ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಜಮ್ಮುವಿನಿಂದ ಶ್ರೀನಗರಕ್ಕೆ 78 ವಾಹನಗಳಲ್ಲಿ ಒಟ್ಟು 2,500 ಪೊಲೀಸ್ ಸಿಬ್ಬಂದಿ ಸಂಚರಿಸುತ್ತಿದ್ದರು. ಈ ವೇಳೆ ಹೊಂಚು ಹಾಕಿದ ಪುಲ್ವಾಮಾ ಭಯೋತ್ಪಾದನಾ ಸಂಘಟನೆ ದಾಳಿ ನಡೆಸಿದರ ಪರಿಣಾಮ ಪೊಲೀಸ್ ಸಿಬ್ಬಂದಿ ಸಾವಿಗೀಡಾದರು. ಈ ದಾಳಿಯಲ್ಲಿ 22 ವರ್ಷದ ಆದಿಲ್ ಅಹ್ಮದ್ ದಾರ್ ಕೂಡಾ ಭಯೋತ್ಪಾದಕ ಜೈಶ್-ಇ-ಮೊಹಮ್ಮದ್ ಜೊತೆ ಸೇರಿರುತ್ತಾರೆ. ಈ ಪುಲ್ವಾಮಾ ದಾಳಿಯ 14 ದಿನದ ನಂತರ ಭಾರತ, ಪಾಕಿಸ್ತಾನದ ಬಾಲಕೋಟ್ನಲ್ಲಿರುವ ಜೈಶ್-ಇ-ಮೊಹಮ್ಮದ್ನ ತರಬೇತಿ ಕೆಂದ್ರವನ್ನು ನಾಶಪಡಿಸಿತು.
26/11 ದಾಳಿಗಳು
2008 ನವೆಂಬರ್ 20ರ ರಾತ್ರಿ ಲಷ್ಕರ್-ಇ-ತೈಬಾ 10 ಭಯೋತ್ಪಾದಕರು ಮುಂಬೈನ 6 ಸ್ಥಳಗಳ ಮೇಲೆ ದಾಳಿ ನಡೆಸಿದರು. ಛತ್ರಪತಿ ಶಿವಾಜಿ ಟರ್ಮಿನಸ್ ರೈಲ್ವೇ ನಿಲ್ದಾಣ, ನಾರಿಮನ್ ಹೌಸ್, ಕಾಮಾ ಆಸ್ಪತ್ರೆ, ಲಿಯೋಪೋಲ್ಡ್ ಕೆಫೆ, ದಿ ಒಬೆರಾಯ್ ಟ್ರೈಡೆಂಟ್ ಹೊಟೆಲ್ ಮತ್ತು ತಾಜ್ ಹೊಟೆಲ್ ಮೇಲೆ ದಾಳಿಯಾದವು. ಭಾರತೀಯರ ಮೇಲೆ ಗುಂಡಿನ ದಾಳಿ ನಡೆಸಿ ಮುಗ್ದ ಜನರನ್ನು ಕೊಂದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.
ರಾತ್ರಿ 9.20ರಾತ್ರಿ ಭಯೋತ್ಪಾದಕರು ಛತ್ರಪತಿ ಶಿವಾಜಿ ರೈಲ್ವೇ ನಿಲ್ದಾಣದಿಂದ ದಾಳಿ ಪ್ರಾರಂಭಿಸುತ್ತಾರೆ. ಅಲ್ಲಿ 58 ಜನರು ಸಾವಿಗೀಡಾಗುತ್ತಾರೆ. ಆ ಬಳಿಕ ನಾರಿಮನ್ ಹೌಸ್ ಮೇಲೆ ದಾಳಿ ನಡೆಸುತ್ತಾರೆ. ನಂತರ ಲಿಯೋಪೋಲ್ಡ್ ಕೆಫೆ ಮೇಲೆ 4 ಭಯೋತ್ಪಾದಕರು ದಾಳಿ ನಡೆಸಿ 10 ಜನರನ್ನು ಹತ್ಯೆ ಮಾಡಿತ್ತಾರೆ. ಆ ಬಳಿಕ ತಾಜ್ ಹೊಟೆಲ್ ಮೇಲೆ ದಾಳಿ ನಡೆಸುತ್ತಾರೆ. ನಾಲ್ಕು ದಿನಗಳಲ್ಲಿ 31 ಜನರನ್ನು ಹತ್ಯೆ ಮಾಡುತ್ತಾರೆ. ಮತ್ತು ತಾಜ್ ಮಹಲ್ನಲ್ಲಿ ಬಾಂಬ್ ದಾಳಿ ನಡೆಸುತ್ತಾರೆ. ಎರಡು ಭಯೋತ್ಪಾದಕರು ಒಬೆರಾಯ್ ಹೊಟೆಲ್ ಮೇಲೆ ದಾಳಿ ನಡೆಸಿ 30 ಜನರನ್ನು ಹತ್ಯೆ ಮಾಡುತ್ತಾರೆ. ದಾಳಿ ನಡೆಯುತ್ತಿದ್ದಂತೆ ಭಾರತೀಯ ಪೊಲೀಸ್ ಪಡೆ ಭಯೋತ್ಪಾದಕರನ್ನು ಹಿಂಬಾಲಿಸಿ ಓರ್ವ ಭಯೋತ್ಪಾದಕನ್ನು ಸೆರೆಹಿಡಿಯಲಾಗುತ್ತದೆ. ಭಯೋತ್ಪಾದಕ ಕಸಬ್ ಸಾವಿಗೀಡಾಗುತ್ತಾನೆ.
2021ರ ಪಾರ್ಲಿಮೆಂಟ್ ದಾಳಿ
2001 ಡಿಸೆಂಬರ್ 13ರಂದು ಲೋಕಸಭೆ ಅಧಿವೇಶನ ನಡೆಯುತ್ತಿರುತ್ತದೆ. ಭಯೋತ್ಪಾದಕರು ಸಂಸತ್ ಭವನದೊಳಗೆ ಪ್ರವೇಶಿಸಿದ್ದರು. ಲಷ್ಕರ್-ಇ-ತೈಬಾ ಮತ್ತು ಜೈಶ್-ಇ-ಮೊಹಮ್ಮದ್ ಸೇರಿದಂತೆ 5 ಭಯೋತ್ಪಾದಕರು ದಾಳಿ ನಡೆಸುತ್ತಾರೆ. ಅದೇ ಸಂದರ್ಭದಲ್ಲಿ ರಾಷ್ಟ್ರಪತಿ ಕೃಷ್ಣಕಾಂತ್ ಅವರ ಕಾರನ್ನು ನಿಲ್ಲಿಸಿ, ಭಯೋತ್ಪಾದಕರು ಗುಂಡಿನ ದಾಳಿ ನಡೆಸುತ್ತಾರೆ. ಆ 30 ನಿಮಿಷದ ದಾಳಿಯ ಸಂದರ್ಭದಲ್ಲಿ ದೆಹಲಿಯ ಪೊಲೀಸ್ ಭದ್ರತಾ ಪಡೆ, ಎರಡು ಪಾರ್ಲಿಮೆಂಟ್ ಭದ್ರತಾ ಸಿಬ್ಬಂದಿ ಸಾವಿಗೀಡಾಗುತ್ತಾರೆ. ತೋಟದ ಮಾಲೀಕ ಮತ್ತು ಛಾಯಾ ಚಿತ್ರಗ್ರಾಹಕ ಕೂಡಾ ಸಾವಿಗೀಡಾಗುತ್ತಾರೆ.
ಈ ಮೂರು ಕರಾಳ ದಾಳಿಗಳು ಭಾರತವನ್ನು ನಡುಗಿಸಿತ್ತು. ಅದೆಷ್ಟೋ ಅಮಾಯಕ ಜನರ ಪ್ರಾಣ ಕಸಿದುಕೊಂಡಿದೆ. ಭಾರತೀಯ ಪ್ರಜೆಗಳಾದ ನಾವು ನಮ್ಮ ದೇಶದ ಶಾಂತಿ ಮತ್ತು ಐಕ್ಯತೆಯನ್ನು ಎತ್ತಿ ಹಿಡಿದಿದ್ದೇವೆ. ಹಾಗೂ ಭಯೋತ್ಪಾದನಾ ಚಟುವಟಿಕೆ ಮತ್ತು ಹಿಂಸಾತ್ಮಕ ಕೃತ್ಯಗಳನ್ನು ಅಷ್ಟೇ ಬಲವಾಗಿ ವಿರೋಧಿಸುತ್ತೇವೆ.
ಇದನ್ನೂ ಓದಿ: Anti Terrorism Day 2021 May 21: ನಾಳೆಯೇ ಭಯೋತ್ಪಾದನಾ ವಿರೋಧಿ ದಿನ: ಏನಿದರ ಮಹತ್ವ, ಆಚರಣೆಯ ಹಿಂದಿನ ಕಾರಣವೇನು?
Published On - 11:47 am, Fri, 21 May 21