Viral News: ನಿನ್ನೆ ವಿವಾಹ ಇಂದು ಆತ್ಮಹತ್ಯೆಗೆ ಯತ್ನ; ಪೊಲೀಸ್ ಠಾಣೆಯಲ್ಲೇ ಸ್ಯಾನಿಟೈಜರ್ ಕುಡಿದ ನವಜೋಡಿ

| Updated By: Digi Tech Desk

Updated on: May 21, 2021 | 3:30 PM

Bizarre News: ನಿನ್ನಯಷ್ಟೇ (ಮೇ 20) ಪ್ರೇಮ‌ ವಿವಾಹವಾಗಿದ್ದ ಗಾಯತ್ರಿ(18) ಮತ್ತು ಸುರೇಶ(20), ಬನ್ನೂರ ಗ್ರಾಮ ಮೂಲದ ಜೀಡಿ ಎಮ್ಮಿಗನೂರಿನ ಸಂಬಂಧಿಗಳ‌ ಮನೆಯಲ್ಲಿ ರಹಸ್ಯವಾಗಿ ಉಳಿದುಕೊಂಡಿದ್ದರು. ವಿಷಯ ತಿಳಿದ ಪೊಲೀಸರು ಇಬ್ಬರನ್ನು ಠಾಣೆಗೆ ಎಳೆದು ತಂದಿದ್ದಾರೆ.

Viral News: ನಿನ್ನೆ ವಿವಾಹ ಇಂದು ಆತ್ಮಹತ್ಯೆಗೆ ಯತ್ನ; ಪೊಲೀಸ್ ಠಾಣೆಯಲ್ಲೇ ಸ್ಯಾನಿಟೈಜರ್ ಕುಡಿದ ನವಜೋಡಿ
ಕರ್ನೂಲ‌ ಜಿಲ್ಲೆಯ ಎಮ್ಮಿಗನೂರ ಪೊಲೀಸ್ ಠಾಣೆ
Follow us on

ಆಂಧ್ರ ಪ್ರದೇಶ: ಪ್ರೀತಿಸಿ ವಿವಾಹವಾಗಿದ್ದ ಜೋಡಿ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಆಂಧ್ರ ಪ್ರದೇಶದ ಕರ್ನೂಲ‌ ಜಿಲ್ಲೆಯ ಎಮ್ಮಿಗನೂರ ಠಾಣೆಯಲ್ಲಿ ನಡೆದಿದೆ. ನಿನ್ನಯಷ್ಟೇ (ಮೇ 20) ಪ್ರೇಮ‌ ವಿವಾಹವಾಗಿದ್ದ ಗಾಯತ್ರಿ(18) ಮತ್ತು ಸುರೇಶ(20), ಬನ್ನೂರ ಗ್ರಾಮ ಮೂಲದ ಜೀಡಿ ಎಮ್ಮಿಗನೂರಿನ ಸಂಬಂಧಿಗಳ‌ ಮನೆಯಲ್ಲಿ ರಹಸ್ಯವಾಗಿ ಉಳಿದುಕೊಂಡಿದ್ದರು. ವಿಷಯ ತಿಳಿದ ಪೊಲೀಸರು ಇಬ್ಬರನ್ನು ಠಾಣೆಗೆ ಎಳೆದು ತಂದಿದ್ದಾರೆ.

ಎಮ್ಮಿಗನೂರು ಪೊಲೀಸರ ಈ ವರ್ತನೆಯಿಂದ ಹೆದರಿದ್ದ ನವ ಜೋಡಿ, ತಮ್ಮನ್ನು ದೂರ ಮಾಡುವರೆಂದು ಹತಾಶರಾಗಿ ಠಾಣೆ ಆವರಣದಲ್ಲೇ ಸ್ಯಾನಿಟೈಜರ್ ಸೇವಿಸಿ ಆತ್ಮಹತ್ಯೆ ಯತ್ನಿಸಿದ್ದಾರೆ. ಸದ್ಯ ಚಿಂತಾಜನಕ‌ ಸ್ಥಿತಿಯಲ್ಲಿದ್ದ ಈ ಜೋಡಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಹದಿಹರೆಯದ ಪ್ರೀತಿಗೆ ಯುವತಿ ಬಲಿ
ಬೆಂಗಳೂರಿನಲ್ಲಿ ಹದಿಹರೆಯದ ವಯಸ್ಸಿನಲ್ಲಿ ಪ್ರೀತಿಯ ಗೀಳಿಗೆ ಬಿದ್ದು ಯುವತಿ ಜೀವನವನ್ನೇ ಅಂತ್ಯಗೊಳಿಸಿದ್ದಾಳೆ. ನೇಣು ಬಿಗಿದುಕೊಂಡು ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆರ್‌ಎಂಸಿ ಯಾರ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಜೆಮಿನಿ (19) ಆತ್ಮಹತ್ಯೆ ಮಾಡಿಕೊಂಡ ಯುವತಿ. ತಾಯಿ ಆತ್ಮಹತ್ಯೆ ಮಾಡಿಕೊಂಡ ಎರಡೇ ತಿಂಗಳಿಗೆ ಜೆಮಿನಿ ಕೂಡ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಬೆಂಗಳೂರಿನ ಖಾಸಗಿ ಕಾಲೇಜು ವಿದ್ಯಾರ್ಥಿನಿಯಾಗಿದ್ದ ಜೆಮಿನಿ, ಕಾಲೇಜಿನಲ್ಲಿದ್ದಾಗಲೇ ಭರತ್ ಎಂಬಾತನನ್ನ ಪ್ರೀತಿಸುತ್ತಿದ್ದಳು. ಗಾಂಜಾ ವ್ಯಸನಿಯಾಗಿದ್ದ ಭರತ್ ಸಹವಾಸ ಬೇಡವೆಂದು ಪೋಷಕರು ಬುದ್ಧಿವಾದ ಹೇಳಿದ್ದರು. ಆದ್ರೆ ಪೋಷಕರ ಮಾತನ್ನ ಧಿಕ್ಕರಿಸಿ ಭರತ್​ನನ್ನ ಪ್ರೀತಿಸುತ್ತಿದ್ದ ಮಗಳ ವರ್ತನೆಗೆ ಬೇಸತ್ತು ಎರಡು ತಿಂಗಳ ಹಿಂದೆ ತಾಯಿ ಶಶಿಕಲಾ ಆತ್ಮಹತ್ಯೆಗೆ ಶರಣಾಗಿದ್ದರು.

ತಾಯಿಯ ಸಾವಿನ ನಂತರವೂ ಜೆಮಿನಿ, ಭರತ್ ಸಹವಾಸ ಮುಂದುವರೆಸಿದ್ದಳು. ಜನವರಿ 1 ರಂದು ಭರತ್, ಜೆಮಿನಿಯ ತಂದೆ ನಾಗರಾಜ್​ಗೆ ಕರೆ ಮಾಡಿ ಜೆಮಿನಿಗೆ ವಿಶ್ ಮಾಡಲು‌ ಫೋನ್ ಕೊಡುವಂತೆ ಕೇಳಿಕೊಂಡಿದ್ದ. ಆ ವೇಳೆ ನಾಗರಾಜ್, ಭರತ್​ಗೆ ಬೈದು ಬುದ್ಧಿವಾದ ಹೇಳಿದ್ದರು. ಆದ್ರೆ ಜನವರಿ 5 ರಂದು ಜೆಮಿನಿ ನೇಣಿಗೆ ಶರಣಾಗಿದ್ದಾಳೆ. ತಂದೆ ನಾಗರಾಜ್ ದೂರಿನನ್ವಯ ಪ್ರಕರಣ ದಾಖಲಾಗಿದ್ದು ಆರೋಪಿ ಭರತ್​ನನ್ನ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.

ಇದನ್ನೂ ಓದಿ:

ಸೋಂಕಿನ ಭಯಕ್ಕೆ ವೃದ್ಧೆ ಆತ್ಮಹತ್ಯೆ, ತುಮಕೂರಿನಲ್ಲಿ ಮೃತ ಸೋಂಕಿತರ ಅಂತ್ಯಸಂಸ್ಕಾರ ಮಾಡಿ ಭಾವೈಕ್ಯತೆಯ ಸಂದೇಶ ಸಾರುತ್ತಿರುವ ಮುಸ್ಲಿಂ ಯುವಕರು

ಹದಿಹರೆಯದ ವಯಸ್ಸಿನಲ್ಲಿ ಹುಟ್ತು ಪ್ರೀತಿ.. ತಾಯಿಯನ್ನು ಕಳೆದುಕೊಂಡು ತಾನೂ ಆತ್ಮಹತ್ಯೆ ಮಾಡಿಕೊಂಡ ಯುವತಿ

Published On - 1:02 pm, Fri, 21 May 21