ತಮಿಳುನಾಡಿದಲ್ಲಿ ಕೊರೊನಾ ದೇವರಿಗೆ ವಿಶೇಷ ಪೂಜೆ; ಆಶ್ಚರ್ಯವೆನಿಸಿದರೂ ನಂಬಲೇ ಬೇಕಾದ ಸತ್ಯ!

|

Updated on: May 21, 2021 | 11:31 AM

ಕೊರೊನಾವನ್ನು ದೇವಿ ಎಂಬ ನಂಬಿಕೆಯೊಂದಿಗೆ ಪೂಜಿಸಿ ಸೋಂಕು ಹರಡುವಿಕೆಯನ್ನು ಕಡಿಮೆ ಮಾಡು ಎಂದು ತಮಿಳು ನಾಡು ಜನರು ಭಕ್ತಿಯಿಂದ ಪೂಜಿಸುತ್ತಿದ್ದಾರೆ.

ತಮಿಳುನಾಡಿದಲ್ಲಿ ಕೊರೊನಾ ದೇವರಿಗೆ ವಿಶೇಷ ಪೂಜೆ; ಆಶ್ಚರ್ಯವೆನಿಸಿದರೂ ನಂಬಲೇ ಬೇಕಾದ ಸತ್ಯ!
ತಮಿಳುನಾಡಿದಲ್ಲಿ ಕೊರೊನಾ ದೇವರಿಗೆ ವಿಶೇಷ ಪೂಜೆ
Follow us on

ತಮಿಳುನಾಡು: ದೇವರ ಆರಾಧನೆ ಮಾಡುವುದರಲ್ಲಿ ತಮಿಳು ನಾಡಿಗೆ ವಿಶೇಷ ಹೆಸರಿದೆ. ವಿಶೇಷವೆಂದರೆ, ಇದೀಗ ಕೊರೊನಾ ಎಂಬ ದೇವರು ಸೃಷ್ಟಿಯಾಗಿದ್ದು ತಮಿಳುನಾಡಿನಲ್ಲಿ. ಭಕ್ತಿ, ನಂಬಿಕೆಯಲ್ಲಿ ತೊಡಗಿರುವ ಜನರು ಇದೀಗ ಕೊರೊನಾ ವೈರಸ್​ಗೆ ದೇವರ ಸ್ವರೂಪ ನೀಡಿದ್ದಾರೆ. ಕೇಳಲು ಆಶ್ಚರ್ಯವೆನಿಸಬಹುದು ಆದರೂ ನಂಬಲೇ ಬೇಕಾದ ಸತ್ಯ. ಕೊಯಿಮತ್ತೂರಿನ ಜನರು ‘ಕೊರೊನಾ ದೇವಿ’ ಎಂಬ ದೇಗುಲವನ್ನು ನಿರ್ಮಿಸಿ ಸೋಂಕು ಹರಡುವಿಕೆಯನ್ನು ಕಡಿಮೆ ಮಾಡು ಎಂದು ಭಕ್ತಿಯಿಂದ ಪೂಜಿಸುತ್ತಿದ್ದಾರೆ.

ಕೊರೊನಾ ಸೋಂಕು ಹರಡುವಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸೋಂಕಿನ ಭೀಕರತೆ ಜನರನ್ನು ಭಯಗೊಳಿಸಿದೆ. ಸೋಂಕು ಹರಡದಂತೆ ವಿಶೇಷ ಪೂಜೆ ಕೈಗೊಳ್ಳುವ ಮೂಲಕ ತಮಿಳು ನಾಡಿನ ಕೊಯಿಮತ್ತೂರು ಜನರು ದೇವಿಯ ಮೊರೆ ಹೋಗಿದ್ದಾರೆ. ಆಶ್ಚರ್ಯವೇನೆಂದರೆ ‘ಕೊರೊನಾ ದೇವಿ’ ಎಂಬ ದೇಗುಲವನ್ನು ನಿರ್ಮಿಸಿ ವಿಶೇಷ ಪೂಜೆ ಜತೆಗೆ ಕೊರೊನಾ ಸೋಂಕು ಬಹುಬೇಗ ನಿಲ್ಲುವಂತೆ ಪ್ರಾರ್ಥಿಸಿದ್ದಾರೆ.

ಕೊಯಿಮತ್ತೂರಿನ ಹೆಸರಾಂತ ಕಾಮಾಚಿಪುರ ಅಧೀನಂ ಪೀಠ ಕೊವಿಡ್​ ಸೋಂಕಿಗಾಗಿ ವಿಶೇಷವಾದಂತಹ ದೇವಾಲಯವೊಂದನ್ನು ನಿರ್ಮಿಸಿದೆ. ಕೊರೊನಾ ನಿವಾರಣೆಗೆಂದು ಪ್ರತಿನಿತ್ಯವೂ ವಿಶೇಷವಾದ ಪೂಜೆ ಕೈಗೊಳ್ಳಲಾಗುತ್ತಿದೆ. ಈಗಾಗಲೇ ಕೊರೊನಾ ದೇವಿಗೆ ವಿಶೇಷ ಪೂಜೆ ನೆರವೇರಿಸಲಾಗಿದೆ.

ಈ ಹಿಂದೆ ಪ್ಲೇಗ್​ ಜನರನ್ನು ಕಾಡತೊಡಗಿದ್ದಾಗ ಪ್ಲೇಗ್​ ಮಾರಿಯಮ್ಮ ದೇವಾಲಯವನ್ನು ನಿರ್ಮಿಸಿ ಪೂಜೆ-ಪುನಸ್ಕಾರಗಳನ್ನು ನೆರವೇರಿಸಲಾಗಿತ್ತು. ಇದೀಗ ಕೊವಿಡ್​ -19 ಸಾಂಕ್ರಾಮಿಕ ಬಹುಬೇಗ ನಿವಾರಣೆಯಾಗಲಿ ಎಂಬ ಕಾರಣಕ್ಕೆ ಕೊಯಿಮತ್ತೂರಿನ ಜನ ದೇವಿಯ ಮೊರೆ ಹೋಗಿದ್ದಾರೆ.

ಇದನ್ನೂ ಓದಿ: Rajiv Gandhi Death Anniversary 2021: ರಾಜೀವ್ ಗಾಂಧಿ ಹಂತಕರನ್ನು ತಕ್ಷಣವೇ ಬಿಡುಗಡೆಗೊಳಿಸುವಂತೆ ಕೋರಿ ರಾಷ್ಟ್ರಪತಿಗೆ ಪತ್ರ ಬರೆದ ತಮಿಳುನಾಡು ಸಿಎಂ ಸ್ಟಾಲಿನ್

Published On - 11:14 am, Fri, 21 May 21