Anti Terrorism Day 2021 May 21: ನಾಳೆಯೇ ಭಯೋತ್ಪಾದನಾ ವಿರೋಧಿ ದಿನ: ಏನಿದರ ಮಹತ್ವ, ಆಚರಣೆಯ ಹಿಂದಿನ ಕಾರಣವೇನು?

Rajiv Gandhi Death Anniversary 2021: ಭಾರತ ಎಂದರೇ ಅದೊಂದು ವೈವಿಧ್ಯತೆಯ ತೊಟ್ಟಿಲು. ಒಮದೇ ದೇಶದಲ್ಲಿ ನಾವು ಅನುಸರಿಸುವ ಸಂಸ್ಕೃತಿ, ಆಡುವ ಭಾಷೆ, ಊಟ ಉಪಹಾರ, ಬಟ್ಟೆ ಬರೆ.. ಹೀಗೆ ಒಂದೊಂದು ವಿಷಯದಲ್ಲೂ ಭಿನ್ನತೆಯಿದೆ. ವೈವಿಧ್ಯತೆಯಿದೆ. ಇಷ್ಟು ವೈವಿಧ್ಯತೆಯಿದ್ದರೂ ನಾವೆಲ್ಲರೂ ಒಂದೇ ಎಂಬ ಭಾವ ನಮ್ಮದು.

Anti Terrorism Day 2021 May 21: ನಾಳೆಯೇ ಭಯೋತ್ಪಾದನಾ ವಿರೋಧಿ ದಿನ: ಏನಿದರ ಮಹತ್ವ, ಆಚರಣೆಯ ಹಿಂದಿನ ಕಾರಣವೇನು?
ಭಯೋತ್ಪಾದನಾ ವಿರೋಧಿ ದಿನ
Follow us
|

Updated on:May 20, 2021 | 7:00 PM

ಪ್ರತಿವರ್ಷವೂ ಮೇ 21ರಂದು ಭಯೋತ್ಪಾದನಾ ವಿರೋಧಿ ದಿನವನ್ನಾಗಿ ಆಚರಿಸುತ್ತಾರೆ. ಅಂದರೆ ನಾಳೆಯೇ. ಆದರೆ ನಾಳೆಯೇ ಏಕೆ ಭಯೋತ್ಪಾದನಾ ವಿರೋಧಿ ದಿನವನ್ನು ಆಚರಿಸುತ್ತಾರೆ ಎಂಬುದು ನಿಮಗೆ ಗೊತ್ತೇ? ನಾಳೆಯೇ ಈ ದಿನವನ್ನು ಆಚರಿಸಲು ಒಂದು ಮಹತ್ತರ ಕಾರಣವಿದೆ. ಭಾರತದ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರಿಗೂ ನಾಳೆಯ ಭಯೋತ್ಪಾದನಾ ನಿಗ್ರಹ ದಿನಕ್ಕೂ ಒಂದಕ್ಕೊಂದು ಗಾಢ ಸಂಬಂಧವಿದೆ. ನಾಳೆ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹುತಾತ್ಮರಾದ ದಿನ. 1991ರ ಇದೇ ದಿನ ಎಲ್​ಟಿಟಿಇ ಸಂಘಟನೆಯ ಸದಸ್ಯರು ರಾಜೀವ್ ಗಾಂಧಿಯವರನ್ನು ಹತ್ಯೆ ಮಾಡಿದ್ದರು. ರಾಜೀವ್ ಗಾಂಧಿ ಇನ್ನಿಲ್ಲ ಎಂಬ ಸುದ್ದಿಯನ್ನು ಭಾರತೀಯರು ಅರಗಿಸಿಕೊಳ್ಳಲು ನಿಜಕ್ಕೂ ಕಷ್ಟಪಟ್ಟರು. ಅವರ ಸ್ಮರಣೆಗಾಗಿ ಮೇ 21ರಂದು ಭಯೋತ್ಪಾದನಾ ವಿರೋಧಿ ದಿನವನ್ನಾಗಿ ಆಚರಿಸಲಾಗುತ್ತದೆ. ಈ ದಿನದ ಆಚರಣೆಯ ಮಹತ್ವವೇನು? ಏಕೆ ಭಯೋತ್ಪಾದನಾ ವಿರೋಧಿ ದಿನವನ್ನು ಆಚರಿಸಬೇಕು? ಸದ್ಯ ಭಾರತ ಮತ್ತು ಇನ್ನಿತರ ದೇಶಗಳನ್ನು ಭಯೋತ್ಪಾದನಾ ಕೃತ್ಯಗಳು ನಡೆಯುತ್ತಿವೆಯೇ? ನಡೆಯುತ್ತಿದೆ ಎಂದಾದರೆ ಯಾವ ಭಯೋತ್ಪಾದಕರು ಇದರೆ ಹಿಂದಿದ್ದಾರೆ. ಅಷ್ಟಕ್ಕೂ ರಾಜೀವ್ ಗಾಂಧಿಯವರನ್ನು ಹತ್ಯೆಗೈದ ಕಾರಣವಾದರೂ ಏನು ಎಂಬಿತ್ಯಾದಿ ಮಾಹಿತಿಗಳನ್ನು ಟಿವಿ9 ಕನ್ನಡ ಡಿಜಿಟಲ್ ನಿಮಗಾಗಿ ತೆರೆದಿಡುತ್ತಿದೆ.

ಭಯೋತ್ಪಾದನಾ ವಿರೋಧಿ ದಿನವನ್ನು ಸಮಾಜದಲ್ಲಿ ಶಾಂತಿ ಮತ್ತು ಮಾನವೀಯತೆಯ ಮಹತ್ವವನ್ನು ಸಾರುವ ಮಹತ್ ಕಾರ್ಯದ ಉದ್ದೇಶದಿಂದ ಪ್ರತಿವರ್ಷವೂ ಆಚರಿಸಲಾಗುತ್ತದೆ. ಭಾರತ ಎಂದರೇ ಅದೊಂದು ವೈವಿಧ್ಯತೆಯ ತೊಟ್ಟಿಲು. ಒಂದೇ ದೇಶದಲ್ಲಿ ನಾವು ಅನುಸರಿಸುವ ಸಂಸ್ಕೃತಿ, ಆಡುವ ಭಾಷೆ, ಊಟ ಉಪಹಾರ, ಬಟ್ಟೆ ಬರೆ.. ಹೀಗೆ ಒಂದೊಂದು ವಿಷಯದಲ್ಲೂ ಭಿನ್ನತೆಯಿದೆ. ವೈವಿಧ್ಯತೆಯಿದೆ. ಇಷ್ಟು ವೈವಿಧ್ಯತೆಯಿದ್ದರೂ ನಾವೆಲ್ಲರೂ ಒಂದೇ ಎಂಬ ಭಾವ ನಮ್ಮದು. ಜಾತಿ,ಧರ್ಮ ಮತ್ತು ವರ್ಗಗಳಾಚೆ ನಿಂತು ನಾವೆಲ್ಲರೂ ಒಂದೇ ಎಂಬ ಭಾವವನ್ನು ಇನ್ನಷ್ಟು ಬಲಪಡಿಸಲು ಭಯೋತ್ಪಾದನಾ ವಿರೋಧಿ ದಿನವನ್ನು ಆಚರಿಸಲಾಗುತ್ತದೆ. ಭಯೋತ್ಪಾದನೆಯಿಂದ ಹತರಾದದವರ ಸ್ಮರಣೆಗೋಸ್ಕರ, ಅಮಾಯಕ -ಮುಗ್ಧ ಜೀವಿಗಳ ನೆನಪಿಗೋಸ್ಕರ ಮೇ 21ರಂದು ಭಾರತದಲ್ಲಿ ಭಯೋತ್ಪಾದನಾ ವಿರೋಧಿ ದಿನವನ್ನು ಆಚರಿಸಲಾಗುತ್ತದೆ.

ಮಾನವ ಬಾಂಬ್ ದಾಳಿಗೆ ಬಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಎಲ್​ಟಿಟಿಇ ಉಗ್ರರಿಂದ ಹತರಾಗಿ 2021ಕ್ಕೆ  30 ನೇ ವರ್ಷ. ತಮಿಳುನಾಡು ರಾಜಧಾನಿ ಚೆನ್ನೈ ಸಮೀಪದ ಪೆರಂಬದೂರು ಬಳಿ ಕಾಂಗ್ರೆಸ್​ ಪರ ಪ್ರಚಾರದಲ್ಲಿ ನಿರತರಾಗಿದ್ದ ರಾಜೀವ್ ಗಾಂಧಿ ತಮಗರಿವಿಲ್ಲದೇ ಉಗ್ರರಿಂದ ಮೃತರಾದರು. ಅತ್ಯಂತ ವೈವಿಧ್ಯಮಯ ವ್ಯಕ್ತಿತ್ವ ಹೊಂದಿದ್ದ ಅವರಿಗೆ ಪೈಲಟ್ ಆಗಬೇಕೆಂಬ ಅತೀವ ಇಚ್ಛೆಯಿತ್ತು. ವಿಮಾನಯಾನ ಕ್ಷೇತ್ರದಲ್ಲಿ ತಕ್ಕಮಟ್ಟಿಗೆ ಪರಿಣತಿಯನ್ನು ಗಳಿಸಿದ್ದರು.

ಶ್ರೀಲಂಕಾಕ್ಕೆ ಎಲ್​ಟಿಟಿಇ ಉಗ್ರಪಡೆಯ ನಿವಾರಣೆಗೋಸ್ಕರ ಭಾರತದ ಸೇನೆಯನ್ನು ಕಳಿಸುವ ನಿರ್ಧಾರವೇ ರಾಜೀವ್ ಗಾಂಧಿಯವರ ಬಲಿ ಪಡೆದಿತ್ತು.  ಪೆರಂಬದೂರ್​ನಲ್ಲಿ ಎಲ್​ಟಿಟಿಇ ಉಗ್ರರ ಮಾನವ ಬಾಂಬ್ ದಾಳಿಗೆ ರಾಜೀವ್ ಗಾಂಧಿಯವರ ದೇಹ ಛಿದ್ರವಾಗಿತ್ತು. 40ನೇ ವಯಸ್ಸಿನಲ್ಲೀ ಭಾರತದ ಪ್ರಧಾನಿ ಪಟ್ಟ ಅಲಂಕರಿಸಿದ್ದ ಅವರು ದೇಶದ ಬೆಳವಣಿಗೆ ಬಗ್ಗೆ ಅತೀವ ಮಹತ್ವಾಕಾಂಕ್ಷೆ ಹೊಂದಿದ್ದರು.

ಸ್ವಯಂ ಪ್ರಮಾಣ ಮಾಡೋಣವೇ ಭಾರತೀಯ ಪ್ರಜೆಗಳಾದ ನಾವು.. ನಮ್ಮ ದೇಶದ ಪಾರಂಪರಿಕ ಸಂಪ್ರದಾಯವಾದ ಶಾಂತಿ ಮತ್ತು ಸಹಿಷ್ಣುತೆಯಲ್ಲಿ ಬಲವಾದ ನಂಬಿಕೆಯಿಟ್ಟಿದ್ದೇವೆ. ಎಲ್ಲಾ ಬಗೆಯ ಭಯೋತ್ಪಾದನಾ ಚಟುವಟಿಕೆ ಮತ್ತು ಹಿಂಸಾತ್ಮಕ ಕೃತ್ಯಗಳನ್ನು ಅಷ್ಟೇ ಬಲವಾಗಿ ವಿರೋಧಿಸುತ್ತೇವೆ. ಮಾನವ ಜನಾಂಗವನ್ನು ಶಾಂತಿಯಿಂದ ನಡೆಸಿಕೊಂಡು ಹೋಗಬಹುದಾದ ಸಹಿಷ್ಣುತಾ ತತ್ವಗಳನ್ನು ಅಳವಿಡಿಸಲು ಪ್ರಯತ್ನಿಸುತ್ತೇವೆ. ಉದಾತ್ತ ಮಾನವೀಯ ಮೌಲ್ಯಗಳಿಗೆ ಭಂಗ ತರುವ ಕೃತ್ಯಗಳು ನಡೆಯ ಅವಕಾಶ ನೀಡುವುದಿಲ್ಲ ಎನ್ನುತ್ತದೆ ಭಯೋತ್ಪಾದನಾ ವಿರೋಧಿ ದಿನದಂದು ನಾವೆಲ್ಲರೂ ಸ್ವಯಂ ಪ್ರಮಾಣ ತೆಗೆದುಕೊಳ್ಳಬೇಕಿದೆ. ಕೊವಿಡ್​ನಂತಹ ಮಾರಣಾಂತಿಕ ಸೋಂಕು ಹರಡುತ್ತಿರುವ ಇಂದಿನ ಕಾಲಮಾನದಲ್ಲಿ ಮಾನವೀಯ ಮೌಲ್ಯಗಳನ್ನು ದಿನನಿತ್ಯದ ಜೀವನದಲ್ಲಿ ಪಾಲಿಸುವುದು ಅನಿವಾರ್ಯವೂ ಹೌದಲ್ಲವೇ..

ಇದನ್ನೂ ಓದಿ: Bigg Boss: ಕೊವಿಡ್​ ನಿಯಮ ಉಲ್ಲಂಘನೆ; ಬಿಗ್​ ಬಾಸ್​ ಮನೆ ಸೀಜ್​, 1 ಲಕ್ಷ ರೂಪಾಯಿ ದಂಡ

ದೇಶದಲ್ಲಿ ಈಗಲೂ ಶೇ.50ರಷ್ಟು ಜನರು ಮಾಸ್ಕ್ ಧರಿಸುತ್ತಿಲ್ಲ, ಜೂನ್ ಅಂತ್ಯದೊಳಗೆ ಪ್ರತಿದಿನ 45 ಲಕ್ಷ ಕೊವಿಡ್ ಟೆಸ್ಟ್ (Anti Terrorism Day 2021 Date history and significance all you need to know in Kannada)

Published On - 6:48 pm, Thu, 20 May 21

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ