ದೇಶದಲ್ಲಿ ಈಗಲೂ ಶೇ.50ರಷ್ಟು ಜನರು ಮಾಸ್ಕ್ ಧರಿಸುತ್ತಿಲ್ಲ, ಜೂನ್ ಅಂತ್ಯದೊಳಗೆ ಪ್ರತಿದಿನ 45 ಲಕ್ಷ ಕೊವಿಡ್ ಟೆಸ್ಟ್

ಇದೇ ವೇಳೆ ಮಾತನಾಡಿದ ಕೇಂದ್ರ ಆರೋಗ್ಯ ಇಲಾಖೆಯ ಜಂಟಿ ಕಾರ್ಯದರ್ಶಿ ಲವ್ ಅಗರವಾಲ್, ಕರ್ನಾಟಕದಲ್ಲಿ ನಿಧಾನವಾಗಿ ಕೊವಿಡ್ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿದೆ. ಆದರೂ ಕರ್ನಾಟದಲ್ಲಿ ಈಗಲೂ ಶೇಕಡಾ 29.9 ರಷ್ಟು ಕೊವಿಡ್ ಪಾಸಿಟಿವಿಟಿ ದರ ಇರುವ ಕಾರಣ ಹೆಚ್ಚಿನ ಗಮನ ನೀಡಬೇಕಿದೆ ಎಂದು ಸುದ್ದಿಗೋಷ್ಠಿ ನಡೆಸಿ ತಿಳಿಸಿದರು.

ದೇಶದಲ್ಲಿ ಈಗಲೂ ಶೇ.50ರಷ್ಟು ಜನರು ಮಾಸ್ಕ್ ಧರಿಸುತ್ತಿಲ್ಲ, ಜೂನ್ ಅಂತ್ಯದೊಳಗೆ ಪ್ರತಿದಿನ 45 ಲಕ್ಷ ಕೊವಿಡ್ ಟೆಸ್ಟ್
ಬಲರಾಮ್ ಭಾರ್ಗವ್
Follow us
guruganesh bhat
|

Updated on:May 20, 2021 | 5:52 PM

ದೆಹಲಿ: ದೇಶದಲ್ಲಿ ಈಗಲೂ ಶೇ.50 ರಷ್ಟು ಜನರು ಮಾಸ್ಕ್ ಧರಿಸುತ್ತಿಲ್ಲ. ಉಳಿದ ಶೇ.50ರಷ್ಟು ಜನರು ಮಾತ್ರ ಮಾಸ್ಕ್ ಧರಿಸುತ್ತಿದ್ದಾರೆ. ಆದರೆ ಸಮರ್ಪಕ ವಿಧಾನದಲ್ಲಿ ಮಾಸ್ಕ್ ಧರಿಸುವವರ ಪ್ರಮಾಣ ಶೇ.15 ಮಾತ್ರ ಎಂದು ಐಸಿಎಂಆರ್‌ ಡಿಜಿ ಬಲರಾಮ ಭಾರ್ಗವ್ ಅಧ್ಯಯನವೊಂದ್ನು ಬಹಿರಂಗಪಡಿಸಿದರು.

ರಾಪಿಡ್ ಆ್ಯಂಟಿಜೆನ್ ಟೆಸ್ಟ್, ಹೋಮ್ ಟೆಸ್ಟಿಂಗ್​ಗಳ ಮೂಲಕ ಜೂನ್ ಅಂತ್ಯದೊಳಗೆ ‌ನಿತ್ಯ 45 ಲಕ್ಷ ಕೊರೊನಾ ಸ್ಯಾಂಪಲ್ ಪರೀಕ್ಷೆ ಗುರಿ ಇಟ್ಟುಕೊಳ್ಳಲಾಗಿದೆ. 3-ಮುಂದಿನ 4 ದಿನಗಳಲ್ಲಿ ಹೋಮ್ ಟೆಸ್ಟಿಂಗ್ ಕಿಟ್ ಬಿಡುಗಡೆ ಮಾಡಲಿದ್ದೇವೆ. ಅಲ್ಲದೇ ಒಂದು ವಾರದಲ್ಲಿ 3 ಕಂಪನಿಗಳಿಂದ ಹೋಮ್ ಟೆಸ್ಟಿಂಗ್ ಕಿಟ್ ಬಿಡುಗಡೆಯಾಗಲಿದೆ.  ಶೇ.‌10 ಕ್ಕಿಂತ ಹೆಚ್ಚು ಕೊರೊನಾ ಟೆಸ್ಟಿಂಗ್ ಪಾಸಿಟಿವಿಟಿ ದರ ಇರುವ ಕಡೆ ಹೆಚ್ಚಿನ‌ ಸ್ಥಳೀಯ ಕಾರ್ಯತಂತ್ರವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ದೇಶದಲ್ಲಿ ಮೇ 12-18 ರವರೆಗೆ 430 ಜಿಲ್ಲೆಯಲ್ಲಿ ಪ್ರತಿದಿನ ನೂರಕ್ಕಿಂತ ಹೆಚ್ಚು ಕೊರೊನಾ ಸೊಂಕಿತರು ಪತ್ತೆಯಾಗುತ್ತಿದ್ದಾರೆ ಎಂದು ಐಸಿಎಂಆರ್‌ ಡಿಜಿ ಬಲರಾಮ ಭಾರ್ಗವ್ ತಿಳಿಸಿದರು.

ಕರ್ನಾಟಕಕ್ಕೆ ಕೊಡಬೇಕಿದೆ ಹೆಚ್ಚಿನ ಗಮನ ಇದೇ ವೇಳೆ ಮಾತನಾಡಿದ ಕೇಂದ್ರ ಆರೋಗ್ಯ ಇಲಾಖೆಯ ಜಂಟಿ ಕಾರ್ಯದರ್ಶಿ ಲವ್ ಅಗರವಾಲ್, ಕರ್ನಾಟಕದಲ್ಲಿ ನಿಧಾನವಾಗಿ ಕೊವಿಡ್ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿದೆ. ಆದರೂ ಕರ್ನಾಟದಲ್ಲಿ ಈಗಲೂ ಶೇಕಡಾ 29.9 ರಷ್ಟು ಕೊವಿಡ್ ಪಾಸಿಟಿವಿಟಿ ದರ ಇರುವ ಕಾರಣ ಹೆಚ್ಚಿನ ಗಮನ ನೀಡಬೇಕಿದೆ ಎಂದು ಆರೋಗ್ಯ ಇಲಾಖೆ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್​​ ಸುದ್ದಿಗೋಷ್ಠಿ ನಡೆಸಿ ತಿಳಿಸಿದರು.

ಬ್ಲ್ಯಾಕ್ ಫಂಗಸ್ ಸೋಂಕನ್ನು ಅಧಿಸೂಚಿತ ಸೋಂಕು ಎಂದು ಕೇಂದ್ರದ ಆರೋಗ್ಯ ಇಲಾಖೆಯ ಸುದ್ದಿಗೋಷ್ಠಿ ವೇಳೆ ಘೋಷಣೆ ಮಾಡಲಾಯಿತು. ಸಾಂಕ್ರಾಮಿಕ ರೋಗ ತಡೆ ಕಾಯ್ದೆಯಡಿ ಈ ಘೋಷಣೆ ಮಾಡಲಾಗಿದ್ದು, ಬ್ಲ್ಯಾಕ್ ಫಂಗಸ್ ಪತ್ತೆಯಾದಾಗ ಜಿಲ್ಲಾ ಆರೋಗ್ಯಾಧಿಕಾರಿಗೆ ತಿಳಿಸಬೇಕು ಎಂದು ಲವ್ ಅಗರ್ವಾಲ್ ನಿರ್ದೇಶನ ನೀಡಿದರು.

ಇದನ್ನೂ ಓದಿ: ಕೊವಿಡ್​ ನಿಯಮ ಉಲ್ಲಂಘನೆ; ಬಿಗ್​ ಬಾಸ್​ ಮನೆ ಸೀಜ್​, 1 ಲಕ್ಷ ರೂಪಾಯಿ ದಂಡ

ರಾಜ್​ಕುಮಾರ್​ಗೆ ಯೋಗಾಸನ ಹೇಳಿಕೊಟ್ಟ ಹೊನ್ನಪ್ಪ ನಾಯ್ಕರ್​ ಕೊವಿಡ್​​ನಿಂದ ನಿಧನ

(By June end 45 lakh covid tests per day says ICMR DG Balram Bhargava)

Published On - 5:40 pm, Thu, 20 May 21

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್