ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ: ಇಂದಿನಿಂದ 3 ದಿನ 4 ರಾಜ್ಯಗಳಲ್ಲಿ ಭಾರಿ ಮಳೆ
ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಹಿನ್ನೆಲೆ 4 ರಾಜ್ಯಗಳ ಕರಾವಳಿ ಭಾಗದಲ್ಲಿ ಇಂದಿನಿಂದ ಮೂರು ದಿನ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ನವದೆಹಲಿ: ಅರಬ್ಬಿ ಸಮುದ್ರದಲ್ಲಿ (Arabian sea) ವಾಯುಭಾರ ಕುಸಿತ ಹಿನ್ನೆಲೆ ಇಂದಿನಿಂದ ಮೂರು ದಿನ 4 ರಾಜ್ಯಗಳ (States) ಕರಾವಳಿ (Coastal) ಭಾಗದಲ್ಲಿ ಭಾರಿ ಮಳೆಯಾಗುವ (Rain) ಸಾಧ್ಯತೆ ಇದೆ. ಕರ್ನಾಟಕ (Karnataka), ಕೇರಳ (Kerala), ಮಹಾರಾಷ್ಟ್ರ (Maharashtra) ಗುಜರಾತ್ನಲ್ಲಿ (Gujarat) ಭಾರಿ ಮಳೆಯಾಗುವ ಸಂಭವ ಇದೆ ಎಂದು ಹವಾಮಾನ ಇಲಾಖೆ (Meteorological Department) ಮುನ್ಸೂಚನೆ ನೀಡಿದೆ. ಕರಾವಳಿಯಲ್ಲಿ ಬೀಪೋರ್ಜೊಯ್ ಎಂಬ ಹೆಸರಿನ ಚಂಡಮಾರುತದ ಅಬ್ಬರ ಜೋರಾಗಿದೆ. ಹೀಗಾಗಿ ಮುಂಗಾರುಮಳೆಗೂ ಅಡ್ಡಿಯಾಗುವ ಸಾಧ್ಯತೆ ಇದ್ದು, ಮುಂಗಾರು ಪ್ರವೇಶ ಮತ್ತಷ್ಟು ವಿಳಂಬವಾಗಲಿದೆ. ಅಲ್ಲದೆ ಬೀಪೋರ್ಜೊಯ್ ಚಂಡಮಾರುತದಿಂದ ಸಮುದ್ರದಲ್ಲಿ ಭಾರಿ ಅಲೆಗಳು ಸೃಷ್ಟಿಯಾಗುವ ಸಾಧ್ಯತೆ ಇದ್ದು, ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ರಾಷ್ಟ್ರೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇದನ್ನೂ ಓದಿ: ಅರಬ್ಬಿ ಸಮುದ್ರದಲ್ಲಿ ರೂಪುಗೊಂಡ ಬಿಪರ್ಜಾಯ್ ಚಂಡಮಾರುತ, ಪ್ರಭಾವ ಹೇಗಿರುತ್ತೆ? ಸಂಪುರ್ಣ ಮಾಹಿತಿ ಇಲ್ಲಿದೆ
ಜೂನ್ 6ರಂದು 55 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದ್ದರೆ, 7ರಿಂದ 9ರವರೆಗೆ ಗಂಟೆಗೆ 65 ಕಿ.ಮೀ. ವೇಗದ ಗಾಳಿ ಬೀಸುವ ಸಾಧ್ಯತೆ ಇದೆ. ಆದರೂ ಇದು ಮುನ್ಸೂಚನೆ ಮಾತ್ರವಾಗಿದ್ದು, ಬದಲಾವಣೆ ಇದ್ದೇ ಇರುತ್ತದೆ. ಇದರಿಂದಾಗಿ ಸಮುದ್ರದ ಅಲೆಗಳು ಜಾಸ್ತಿ ಇರುವ ಸಂಭವನೀಯತೆಯೂ ಇದ್ದು, ಸಮುದ್ರವಿಹಾರಿಗಳು ಸಂಚರಿಸದೇ ಇರುವುದು ಒಳಿತು. ವೇಗವಾದ ಅಲೆಗಳು ಅಪ್ಪಳಿಸುವ ಸಾಧ್ಯತೆಯೂ ಇದೆ.
Cyclonic storm “Biparjoy” over eastcentral and adjoining southeast Arabian Sea at 2330 IST of 06 June near lat 12.5°N and lon 66.0°E, about 900km WSW of Goa. Likely to move nearly northwards and intensify into SCS during next 06 hour.@WMO @ndmaindia @DDNewslive @airnewsalerts pic.twitter.com/o9fL388Rlb
— India Meteorological Department (@Indiametdept) June 6, 2023
ಇನ್ನು ಕೇರಳ ಪ್ರವೇಶಿಸುವ ಮುಂಗಾರು ಸಾಮಾನ್ಯವಾಗಿ ಒಂದು ಆಥವಾ ಎರಡು ದಿನದಲ್ಲಿ ರಾಜ್ಯ ಕರಾವಳಿಗೆ ತಲುಪುವುದು ವಾಡಿಕೆ. ಆದರೆ ಕೇರಳಕ್ಕೆ ಪ್ರವೇಶಿಸುತ್ತಿದ್ದಂತೆ ಅರಬಿ ಸಮುದ್ರದಲ್ಲಿ ಚಂಡಮಾರುತ ಸೃಷ್ಟಿಯಾಗಿ ಕರಾವಳಿ ಕರ್ನಾಟಕಕ್ಕೆ ಪ್ರವೇಶಿಸಬೇಕಿದ್ದ ಮುಂಗಾರಿಗೆ ತಡೆಯಾಗಿದೆ. ಮುಂಗಾರು ಮತ್ತಷ್ಟು ವಿಳಂಬವಾಗಲಿದೆ ಎಂದು ಹೇಳಲಾಗುತ್ತಿದ್ದು, ನಿಖರ ದಿನಾಂಕವನ್ನು ಹವಾಮಾನ ಇಲಾಖೆ ಸ್ಪಷ್ಟವಾಗಿ ಹೇಳಿಲ್ಲ.
ಆಗ್ನೇಯ ಮಾನ್ಸೂನ್ ಕಳೆದ ವರ್ಷ ಮೇ 29 ರಂದು, 2021 ರಲ್ಲಿ ಜೂನ್ 3 ರಂದು, 2020 ರಲ್ಲಿ ಜೂನ್ 1 ರಂದು, 2019 ರಲ್ಲಿ ಜೂನ್ 8 ಮತ್ತು 2018 ರಲ್ಲಿ ಮೇ 29 ರಂದು ದಕ್ಷಿಣ ರಾಜ್ಯಕ್ಕೆ ಆಗಮಿಸಿತ್ತು.
ರಾಷ್ಟ್ರೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:51 am, Wed, 7 June 23