ಚಲಿಸುತ್ತಿದ್ದ ರಾಜಧಾನಿ ಎಕ್ಸ್‌ಪ್ರೆಸ್ ರೈಲಿನಿಂದ ಸೈನಿಕರೊಬ್ಬರನ್ನು ಟಿಟಿಇ ತಳ್ಳಿದ ಘಟನೆ ವರದಿಯಾಗಿದೆ. ಈ ಘಟನೆಯಲ್ಲಿ ಸೈನಿಕ ತಮ್ಮ ಕಾಲುಗಳನ್ನು ಕಳೆದುಕೊಂಡಿದ್ದಾರೆ. ರಜಪೂತ್ ರೈಫಲ್ಸ್ಗೆ ಸೇರಿದ ಸೈನಿಕ ಸೋನುಕುಮಾರ್ ಸಿಂಗ್ ತನ್ನ ಎರಡೂ ಕಾಲುಗಳನ್ನು ಕಳೆದುಕೊಂಡಿದ್ದು, ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದಾರೆ.
ಘಟನೆಯ ಬಳಿಕ, ಯೋಧನ ಸಹ ಸೈನಿಕರು ಟಿಟಿಇಯನ್ನು ಥಳಿಸಿ ರೈಲನ್ನು ನಿಲ್ಲಿಸಿದ್ದಾರೆ. ಅಧಿಕೃತ ಮೂಲಗಳ ಪ್ರಕಾರ ಯೋಧನು ಬರೇಲಿ ರೈಲು ನಿಲ್ದಾಣದಲ್ಲಿ ದಿಬ್ರುಗಢದಿಂದ ನವದೆಹಲಿಗೆ ಹೊರಟಿದ್ದ ರಾಜಧಾನಿ ಎಕ್ಸ್‌ಪ್ರೆಸ್ ಅನ್ನು ಹತ್ತಲು ಬಂದಿದ್ದಾರೆ. ಚಲಿಸುತ್ತಿದ್ದ ರೈಲನ್ನೇ ಹತ್ತಲು ಯತ್ನಿಸಿದ್ದಾರೆ. ಈ ವೇಳೆ ಟಿಟಿಇ ಯೋಧನನ್ನು ಹತ್ತಲು ಬಿಡದೆ ದೂಕಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಬರೇಲಿ ಜಂಕ್ಷನ್ ನ ಪ್ಲಾಟ್ ಫಾರಂ ನಂಬರ್ 2ರಲ್ಲಿ ನಡೆದ ಈ ಘಟನೆಯಲ್ಲಿ ಸಿಟ್ಟಿಗೆದ್ದ ಯೋಧರು ಟಿಟಿಇಗೆ ಥಳಿಸಿದ್ದಾರೆ. ಘಟನೆ ಬಳಿಕ ರೈಲಿನಲ್ಲಿ ನಿಯೋಜನೆಗೊಂಡಿದ್ದ ದೆಹಲಿಯ ಟಿಟಿಇ ಮೊಬೈಲ್ ಸ್ವಿಚ್ ಮಾಡಿ ಪರಾರಿಯಾಗಿದ್ದಾರೆ.
ಘಟನೆಯಲ್ಲಿ ಸೈನಿಕನ ಒಂದು ಕಾಲು ಸಂಪೂರ್ಣವಾಗಿ ಕತ್ತರಿಸಲ್ಪಟ್ಟಿದೆ, ಅವರ ಇನ್ನೊಂದು ಕಾಲು ಪ್ಲಾಟ್‌ಫಾರ್ಮ್ ಸಂಖ್ಯೆ ಎರಡು ಮತ್ತು ರೈಲಿನ ನಡುವಿನ ಅಂತರದಲ್ಲಿ ಸಿಲುಕಿಕೊಂಡು ಗಂಭೀರ ಹಾನಿಯಾಗಿದೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಅವರು ಲಕ್ನೋದಿಂದ ದೆಹಲಿಗೆ ಮೂರನೇ ಎಸಿ ಕೋಚ್ ಹತ್ತಿದ್ದರು. ಸೋನುಕುಮಾರ್ ನೀರು ಪಡೆಯಲು ಬರೇಲಿ ಜಂಕ್ಷನ್‌ನಲ್ಲಿ ಇಳಿದಿದ್ದರು. ಸ್ವಲ್ಪ ಸಮಯದ ನಂತರ ರೈಲು ಹೊರಟೇ ಬಿಟ್ಟಿತ್ತು, ಓಡಿ ಬಂದು ರೈಲನ್ನು ಹತ್ತಲು ಮುಂದಾಗಿದ್ದರು ಆಗ ಕೋಚ್ ಸೂನುಕುಮಾರ್ ಅವರನ್ನು ತಳ್ಳಿದ್ದರು.
ದೇಶದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ