Gujarat Election: ಕರೆನ್ಸಿ ನೋಟಿನಲ್ಲಿ ಗಣೇಶ, ಲಕ್ಷ್ಮೀ ಚಿತ್ರವಿರಲಿ: ಅರವಿಂದ್ ಕೇಜ್ರಿವಾಲ್

| Updated By: ಅಕ್ಷಯ್​ ಪಲ್ಲಮಜಲು​​

Updated on: Oct 26, 2022 | 12:03 PM

ಕರೆನ್ಸಿ ನೋಟಿನಲ್ಲಿ ಗಾಂಧೀಜಿ ಫೋಟೋ ಜತೆ ಗಣೇಶ, ಲಕ್ಷ್ಮೀ ಫೋಟೋ ಹಾಕಬೇಕೆಂಬುದು ನನ್ನ ಬಯಕೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ

Gujarat Election: ಕರೆನ್ಸಿ ನೋಟಿನಲ್ಲಿ ಗಣೇಶ, ಲಕ್ಷ್ಮೀ ಚಿತ್ರವಿರಲಿ: ಅರವಿಂದ್ ಕೇಜ್ರಿವಾಲ್
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್
Follow us on

ಗುಜರಾತ್​ ಚುನಾವಣೆ ಮೇಲೆ ಕಣ್ಣಿಟ್ಟಿರುವ ಎಎಪಿ ಹಿಂದುತ್ವ ಕಾರ್ಡ್​​ ಪ್ಲೇ ಮಾಡಲು ಹೋರಟಿದೆ. ಕರೆನ್ಸಿ ನೋಟಿನಲ್ಲಿ ಗಾಂಧೀಜಿ ಫೋಟೋ ಜತೆ ಗಣೇಶ, ಲಕ್ಷ್ಮೀ ಫೋಟೋ ಹಾಕಬೇಕೆಂಬುದು ನನ್ನ ಬಯಕೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ಈ ಬಗ್ಗೆ ಪ್ರಧಾನಿಗೆ ಪತ್ರ ಬರೆಯುತ್ತೇನೆ ಎಂದು ಅವರು ಹೇಳಿದ್ದಾರೆ.

 

ಮಹಾತ್ಮಾ ಗಾಂಧಿಯವರ ಫೋಟೋದ ಜತೆಗೆ ಗಣೇಶ ಮತ್ತು ಲಕ್ಷ್ಮಿ ದೇವರ ಫೋಟೋಗಳಿರುವ ಕರೆನ್ಸಿ ನೋಟುಗಳಲ್ಲಿ ಹಾಕುವಂತೆ ಕೇಂದ್ರಕ್ಕೆ ಮನವಿ ಮಾಡುವೇ ಎಂದು ಹೇಳಿದ್ದಾರೆ.

ನಮ್ಮ ದೇಶದಲ್ಲಿ ರೂಪಾಯಿ ಮೌಲ್ಯ ನಿರಂತರವಾಗಿ ಕುಸಿಯುತ್ತಿರುವುದರಿಂದ ಭಾರತದ ಆರ್ಥಿಕತೆಯು ಬಿಕ್ಕಟ್ಟಿನಲ್ಲಿದೆ ಎಂದು ಹೇಳಿದ್ದಾರೆ. ಆರ್ಥಿಕತೆಯನ್ನು ಸುಧಾರಿಸಲು ಹಲವಾರು ಹಂತಗಳಿವೆ, ಇದರಲ್ಲಿ ಹೆಚ್ಚಿನ ಶಾಲೆಗಳು, ಆಸ್ಪತ್ರೆಗಳನ್ನು ನಿರ್ಮಿಸುವುದು ಮತ್ತು ದೇಶದಲ್ಲಿ ಮೂಲಸೌಕರ್ಯವನ್ನು ಸುಧಾರಿಸುವುದು ಸೇರಿವೆ ಎಂದು ಅವರು ಹೇಳಿದರು.

ಆದರೆ, ನಾವು ಎಷ್ಟೇ ಪ್ರಯತ್ನ ಪಟ್ಟರೂ ಕೆಲವೊಮ್ಮೆ ಉತ್ತಮ ಫಲಿತಾಂಶ ದೊರೆಯದೇ ಇರುವುದರಿಂದ ದೇವರ ಆಶೀರ್ವಾದ ಬೇಕು, ಅದಕ್ಕೆ ಗಣೇಶ ಮತ್ತು ಲಕ್ಷ್ಮಿ ದೇವರ ಫೋಟೋಗಳಿರುವ ಕರೆನ್ಸಿ ನೋಟುಗಳನ್ನು ಮುದ್ರಣ ಮಾಡಿ ಎಂದು ಹೇಳಿದ್ದಾರೆ.

Published On - 11:48 am, Wed, 26 October 22