ದೆಹಲಿಯಲ್ಲಿ ಕಟ್ಟುನಿಟ್ಟಿನ ಲಾಕ್​ಡೌನ್ ಇನ್ನೊಂದು ವಾರ ವಿಸ್ತರಣೆ: ಅರವಿಂದ್ ಕೇಜ್ರಿವಾಲ್

|

Updated on: May 09, 2021 | 1:55 PM

Delhi Lockdown: ಲಾಕ್​ಡೌನ್ ವಿಸ್ತರಣೆ ನಿರ್ಧಾರ ಪ್ರಕಟಿಸಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ರಾಜ್ಯದಲ್ಲಿ ಕೊವಿಡ್ ಪಾಸಿಟಿವಿಟಿ ದರ ಕಡಿಮೆ ಆದರೂ ನಾವು ಕ್ರಮಗಳನ್ನು ಸಡಿಲಗೊಳಿಸಬಾರದು. ನಾವು ಲಾಕ್​ಡೌನ್ ವಿಸ್ತರಣೆ ಮಾಡಬೇಕಿದೆ ಎಂದಿದ್ದಾರೆ.

ದೆಹಲಿಯಲ್ಲಿ ಕಟ್ಟುನಿಟ್ಟಿನ ಲಾಕ್​ಡೌನ್ ಇನ್ನೊಂದು ವಾರ ವಿಸ್ತರಣೆ: ಅರವಿಂದ್ ಕೇಜ್ರಿವಾಲ್
ಅರವಿಂದ್ ಕೇಜ್ರಿವಾಲ್
Follow us on

ನವದೆಹಲಿ: ದೆಹಲಿಯಲ್ಲಿ ಲಾಕ್​ಡೌನ್ ಇನ್ನೊಂದು ವಾರ ವಿಸ್ತರಣೆ ಮಾಡಲಾಗಿದೆ. ಕಟ್ಟುನಿಟ್ಟಿನ ಲಾಕ್​ಡೌನ್ ಇದಾಗಲಿದೆ. ಮೆಟ್ರೊ ರೈಲು ಸಂಚಾರ ಸ್ಥಗಿತಗೊಳ್ಳಲಿದ್ದು ಮೇ 17 ಬೆಳಗ್ಗೆ 5 ಗಂಟೆಯವರೆಗೆ ಲಾಕ್​ಡೌನ್ ಇರಲಿದೆ. ಲಾಕ್​ಡೌನ್ ವಿಸ್ತರಣೆ ನಿರ್ಧಾರ ಪ್ರಕಟಿಸಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ರಾಜ್ಯದಲ್ಲಿ ಕೊವಿಡ್ ಪಾಸಿಟಿವಿಟಿ ದರ ಕಡಿಮೆ ಆದರೂ ನಾವು ಕ್ರಮಗಳನ್ನು ಸಡಿಲಗೊಳಿಸಬಾರದು. ನಾವು ಲಾಕ್​ಡೌನ್ ವಿಸ್ತರಣೆ ಮಾಡಬೇಕಿದೆ ಎಂದಿದ್ದಾರೆ.

ಏಪ್ರಿಲ್ ಮಧ್ಯದಲ್ಲಿ ಶೇಕಡಾ 35 ರಷ್ಟಿದ್ದ ಕೊವಿಡ್ ಪಾಸಿಟಿವಿಟಿ ದರವು ಶೇಕಡಾ 23 ಕ್ಕೆ ಇಳಿದಿದೆ. ಆದರೆ ಇದೂ ಇದು ಕೂಡ ತುಂಬಾ ಹೆಚ್ಚು. ಪ್ರಸರಣ ಸರಪಳಿಯನ್ನು ಸಂಪೂರ್ಣವಾಗಿ ಮುರಿಯುವ ಅವಶ್ಯಕತೆಯಿದೆ ಎಂದು ವೈದ್ಯರು ಹೇಳುತ್ತಾರೆ.

ರಾಷ್ಟ್ರ ರಾಜಧಾನಿಯಲ್ಲಿ ಇದು ನಾಲ್ಕನೇ ವಾರ ಲಾಕ್​ಡೌನ್ ನಡೆಯುತ್ತಿದೆ. ಇಲ್ಲಿ ರೋಗಿಗಳ ಸಂಖ್ಯೆ ಅತ್ಯಧಿಕವಾಗಿದ್ದು ಆಸ್ಪತ್ರೆಗಳು ರೋಗಿಗಳಿಂದ ತುಂಬಿದೆ. ಆಕ್ಸಿಜನ್, ಬೆಡ್, ಔಷಧಿಗಾಗಿ ರೋಗಿಗಳು ಮತ್ತು ವೈದ್ಯರು ಕೂಡಾ ಸಹಾಯ ಬೇಡಿ ಸಾಮಾಜಿಕ ಮಾಧ್ಯಮಗಳ ಮೊರೆ ಹೋಗಬೇಕಾಗಿ ಬಂದಿದೆ .

ಲಾಕ್​ಡೌನ್ ಸಮಯದಲ್ಲಿ ನಾವು ನಮ್ಮ ಆರೋಗ್ಯ ಮೂಲಸೌಕರ್ಯಗಳನ್ನು ಹೆಚ್ಚಿಸಲು ಸಮಯವನ್ನು ಬಳಸಿಕೊಂಡಿದ್ದೇವೆ. ದೆಹಲಿಯ ಮುಖ್ಯ ವಿಷಯವೆಂದರೆ ಆಮ್ಲಜನಕದ ಕೊರತೆ. ಕೇಂದ್ರದ ಸಹಾಯದಿಂದ ಈಗ ಪರಿಸ್ಥಿತಿ ಉತ್ತಮವಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.

ದೆಹಲಿ ಹೈಕೋರ್ಟ್‌ನಲ್ಲಿ ಆಮ್ಲಜನಕದ ಲಭ್ಯತೆ ಕುರಿತು ಕೇಂದ್ರದೊಂದಿಗೆ ಜಗಳವಾಡಿದ ನಂತರ ಈ ವಿಷಯವನ್ನು ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್, ವೈದ್ಯಕೀಯ ಆಮ್ಲಜನಕದ ಲಭ್ಯತೆ ಮತ್ತು ವಿತರಣೆಯನ್ನು ನಿರ್ಣಯಿಸಲು 12 ಸದಸ್ಯರ ರಾಷ್ಟ್ರೀಯ ಕಾರ್ಯಪಡೆ ರಚಿಸುವಂತೆ ಆದೇಶಿಸಿದೆ.


ದೇಶದ ಪ್ರಮುಖ ತಜ್ಞರು ಕಾರ್ಯಪಡೆಯೊಂದಿಗೆ ಸದಸ್ಯರು ಮತ್ತು ಸಂಪನ್ಮೂಲ ವ್ಯಕ್ತಿಗಳಾಗಿ ಸಂಬಂಧ ಹೊಂದುತ್ತಾರೆ ಎಂದು ನಾವು ನಿರೀಕ್ಷಿಸುತ್ತೇವೆ ಎಂದು ನ್ಯಾಯಾಲಯವು ಶುಕ್ರವಾರ ತನ್ನ ಅಂತಿಮ ಆದೇಶದಲ್ಲಿ ತಿಳಿಸಿದೆ.

ಆಮ್ಲಜನಕದ ಕೊರತೆಯನ್ನು ದೆಹಲಿಯಿಂದ ಮಾತ್ರವಲ್ಲದೆ ಇತರ ಹಲವಾರು ರಾಜ್ಯಗಳು ಮತ್ತು ಆರು ಹೈಕೋರ್ಟ್‌ಗಳಲ್ಲಿ ವಿಚಾರಣೆಯಲ್ಲಿದೆ. ಲಸಿಕೆಗಳ ಕೊರತೆಯಿಂದಾಗಿ ಅನೇಕ ರಾಜ್ಯಗಳು ಅಸಹಾಯಕವಾಗಿದ್ದು ಕೊವಿಡ್ ಎರಡನೇ ಅಲೆಯಿಂದ ಭಾರೀ ಪರಿಣಾಮ ಎದುರಿಸುವಂತಾಗಿದೆ.


ಲಸಿಕೆ ಕೊರತೆಯನ್ನು ನಿಭಾಯಿಸಲು ಕೇಂದ್ರವು ನಮಗೆ ಸಹಾಯ ಮಾಡುವ ನಿರೀಕ್ಷೆ ಇದೆ ಎಂದು ಮುಖ್ಯಮಂತ್ರಿ ಕೇಜ್ರಿವಾಲ್ ಹೇಳಿದರು.

ಹಲವಾರು ರೂಪಾಂತರಕ್ಕೊಳಗಾದ ಕೊರೊನಾವೈರಸ್ ಅನ್ನು ಲಸಿಕೆ ಮೂಲಕ ಸಂಪೂರ್ಣವಾಗಿ ದೂರವಿಡಲು ಸಾಧ್ಯವಿಲ್ಲ. ಆದರೆ ಲಸಿಕೆಗಳು ರೋಗದ ತೀವ್ರತೆಯನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ಇದರ ಪರಿಣಾಮವಾಗಿ ಆಸ್ಪತ್ರೆಗಳ ಮೇಲಿನ ಒತ್ತಡ ಮತ್ತು ಮರಣ ಪ್ರಮಾಣವನ್ನು ಕಡಿಮೆ ಆಗುತ್ತದೆ ಅಂತಾರೆ ವೈದ್ಯರು.
ಕಳೆದ 24ಗಂಟೆಗಳಲ್ಲಿ ದೇಶದಲ್ಲಿ 4,03,738 ಹೊಸ ಕೊವಿಡ್ ಪ್ರಕರಣಗಳು ಪತ್ತೆಯಾಗಿದ್ದು ಒಟ್ಟು ಸೋಂಕಿತರ ಸಂಖ್ಯೆ 2.22 ಕೋಟಿ ಆಗಿದೆ. ಒಂದೇ ವಾರದಲ್ಲಿ 4ಲಕ್ಷ ಕೊವಿಡ್ ಪ್ರಕರಣಗಳು ವರದಿಯಾಗಿರುವುದು ಇದು ಇದನೇ ಬಾರಿ.

(Arvind Kejriwal extended the lockdown in the Delhi by another week making the restrictions stricter)

ಇದನ್ನೂ ಓದಿ:  Coronavirus: ಗಾಳಿಯ ಮೂಲಕ ಕೊವಿಡ್-19 ಹರಡುವುದು ಹೇಗೆ? ತಜ್ಞರು ಏನಂತಾರೆ?

ಕೊರೊನಾ-ಕೊವಿಡ್​ 19 ಸ್ಪೆಲ್ಲಿಂಗ್ ಬದಲಿಸಿದರೆ ಸೋಂಕು ನಿರ್ಮೂಲನ ಖಚಿತ; ವೈರಲ್ ಆಗುತ್ತಿದೆ ಸಂಖ್ಯಾಶಾಸ್ತ್ರಜ್ಞನ ಜಾಹೀರಾತು

Published On - 1:50 pm, Sun, 9 May 21