ಮೋದಿ ಸರ್ಕಾರ ಜನರ ತೆರಿಗೆ ಹಣವನ್ನು ಶ್ರೀಮಂತ ಸ್ನೇಹಿತರ ಸಾಲ ಮನ್ನಾ ಮಾಡಲು ಬಳಸುತ್ತಿದೆ: ಅರವಿಂದ ಕೇಜ್ರಿವಾಲ್

| Updated By: ರಶ್ಮಿ ಕಲ್ಲಕಟ್ಟ

Updated on: Aug 11, 2022 | 5:58 PM

ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆ ₹1000 ಕೋಟಿ ಮೀರಿದೆ. ಅವರು ಈಗ ಸರ್ಕಾರದ ಎಲ್ಲಾ ಉಚಿತ ಕೊಡುಗೆಗಳನ್ನು ಕೊನೆಗೊಳಿಸಬೇಕು ಎಂದು ಹೇಳುತ್ತಿದ್ದಾರೆ. ಸರ್ಕಾರಿ ಶಾಲೆಗಳು ಮತ್ತು ಆಸ್ಪತ್ರೆಗಳಲ್ಲಿ ಶುಲ್ಕ ವಿಧಿಸಬೇಕು.

ಮೋದಿ ಸರ್ಕಾರ ಜನರ ತೆರಿಗೆ ಹಣವನ್ನು ಶ್ರೀಮಂತ ಸ್ನೇಹಿತರ ಸಾಲ ಮನ್ನಾ ಮಾಡಲು ಬಳಸುತ್ತಿದೆ: ಅರವಿಂದ ಕೇಜ್ರಿವಾಲ್
ಅರವಿಂದ ಕೇಜ್ರಿವಾಲ್
Follow us on

ದೆಹಲಿ: ಅಗತ್ಯ ಆಹಾರ ಪದಾರ್ಥಗಳ ಮೇಲೆ ಜಿಎಸ್‌ಟಿ (GST) ಹೇರಿಕೆ ಖಂಡಿಸಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ (Arvind Kejriwal) ಅವರು ಗುರುವಾರ ಪ್ರಧಾನಿ ನರೇಂದ್ರ ಮೋದಿಯವರ (Narendra Modi) ವಿರುದ್ಧ ವಾಗ್ದಾಳಿ ನಡೆಸಿದರು. ತೆರಿಗೆ ಹಣವನ್ನು “ಶ್ರೀಮಂತ ಸ್ನೇಹಿತರ” ಸಾಲವನ್ನು ಮನ್ನಾ ಮಾಡಲು ಬಳಸುವ ಮೂಲಕ ಮೋದಿ ತೆರಿಗೆದಾರರಿಗೆ ದ್ರೋಹವೆಸಗಿದ್ದಾರೆ ಎಂದು ಕೇಜ್ರಿವಾಲ್ ಹೇಳಿದ್ದಾರೆ. ವಿಡಿಯೊ ಕಾನ್ಫರೆನ್ಸ್ ಮೂಲಕ ಮಾತನಾಡಿದ ಕೇಜ್ರಿವಾಲ್ ನನಗೆ ಸೌಲಭ್ಯಗಳನ್ನು ನೀಡುವ ಭರವಸೆಯ ಮೇಲೆ ಸರ್ಕಾರ ನನ್ನಿಂದ ತೆರಿಗೆಯನ್ನು ತೆಗೆದುಕೊಂಡಿದೆ ಎಂದು ತೆರಿಗೆದಾರರು ಭಾವಿಸುತ್ತಾರೆ. ಆದರೆ ಸರ್ಕಾರ ನಮ್ಮ ಶ್ರೀಮಂತ ಸ್ನೇಹಿತರ ಸಾಲವನ್ನು ಮನ್ನಾ ಮಾಡಲು ನನ್ನ ತೆರಿಗೆ ಹಣವನ್ನು ಬಳಸುತ್ತಿದ್ದಾರೆ ಎಂದು ಹೇಳಿದರು.  ಕಳೆದ 75 ವರ್ಷಗಳಲ್ಲಿ ಸರ್ಕಾರವು ಮೂಲ ಆಹಾರ ಧಾನ್ಯಗಳ ಮೇಲೆ ತೆರಿಗೆ ವಿಧಿಸಿಲ್ಲ. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆ ₹1000 ಕೋಟಿ ಮೀರಿದೆ. ಅವರು ಈಗ ಸರ್ಕಾರದ ಎಲ್ಲಾ ಉಚಿತ ಕೊಡುಗೆಗಳನ್ನು ಕೊನೆಗೊಳಿಸಬೇಕು ಎಂದು ಹೇಳುತ್ತಿದ್ದಾರೆ. ಸರ್ಕಾರಿ ಶಾಲೆಗಳು ಮತ್ತು ಆಸ್ಪತ್ರೆಗಳಲ್ಲಿ ಶುಲ್ಕ ವಿಧಿಸಬೇಕು. ಉಚಿತ ಪಡಿತರ ನಿಲ್ಲಿಸಬೇಕು ಎಂದು ಹೇಳುತ್ತಿದ್ದಾರೆ ಎಂದು ಕೇಜ್ರಿವಾಲ್ ಆರೋಪಿಸಿದ್ದಾರೆ.

ಕೇಜ್ರಿವಾಲ್ ಕೂಡ ಎಲ್ಲ ಹಣ ಎಲ್ಲಿ ಹೋಯಿತು? ಈ ಸರ್ಕಾರದ ಹಣದಿಂದ ಅವರು ತಮ್ಮ ಸ್ನೇಹಿತರ ಸಾಲವನ್ನು ಮನ್ನಾ ಮಾಡುತ್ತಿದ್ದಾರೆ. ಅವರು ಸೂಪರ್ ಶ್ರೀಮಂತರ ₹ 5 ಲಕ್ಷ ಕೋಟಿ ಮೌಲ್ಯದ ತೆರಿಗೆಯನ್ನು ಮನ್ನಾ ಮಾಡಿದ್ದಾರೆ ಎಂದು ಅವರು ಹೇಳಿದರು.

ಕೇಂದ್ರದ ಅಗ್ನಿಪಥ ಯೋಜನೆಯ ಬಗ್ಗೆ ಮಾತನಾಡಿದ ದೆಹಲಿ ಮುಖ್ಯಮಂತ್ರಿ ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ಸರ್ಕಾರವು ತಮ್ಮ ಅಗ್ನಿಪಥ್ ಯೋಜನೆಯನ್ನು ಸಮರ್ಥಿಸುತ್ತಿದೆ. ಇನ್ನು ಮುಂದೆ ರಕ್ಷಣಾ ಸಿಬ್ಬಂದಿಗೆ ಸರ್ಕಾರವು ಪಿಂಚಣಿಗಳನ್ನು ಪಾವತಿಸಬೇಕಾಗಿಲ್ಲ ಎಂದು ಇದನ್ನು ಮಾಡಲಾಗುತ್ತಿದೆ ಎಂದು ಅದು ಹೇಳಿದೆ.
ಉಚಿತ ಕೊಡುಗೆಗಳ ಕುರಿತು ಮೋದಿ ಹೇಳಿಕೆಯ ನಂತರ ಕೇಜ್ರಿವಾಲ್ ಪ್ರತಿಕ್ರಿಯೆ ಬಂದಿದೆ. ಉಚಿತ ಕೊಡುಗೆಗಳು ಭಾರತವನ್ನು ಸ್ವಾವಲಂಬಿಯಾಗದಂತೆ ನಿರ್ಬಂಧಿಸುತ್ತದೆ ಮತ್ತು ತೆರಿಗೆದಾರರ ಮೇಲಿನ ಹೊರೆಯನ್ನು ಹೆಚ್ಚಿಸುತ್ತದೆ ಎಂದು ಮೋದಿ ಹೇಳಿದ್ದರು.

ಮೊನ್ನೆ ಬುಧವಾರದಂದು 2ಜಿ ಎಥೆನಾಲ್ ಸ್ಥಾವರ ಉದ್ಘಾಟನೆ ಸಂದರ್ಭದಲ್ಲಿ ಮಾಡಿದ ಭಾಷಣದಲ್ಲಿಯೂ ಪ್ರಧಾನಿಯವರು ಉಚಿತ ಕೊಡುಗೆ ಸಂಸ್ಕೃತಿಯ ವಿರುದ್ಧ ವಾಗ್ದಾಳಿ ನಡೆಸಿದ್ದರು.

ಮತ್ತಷ್ಟು  ರಾಷ್ಟ್ರೀಯ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ