ದೆಹಲಿ: ದೇಶದಲ್ಲಿ ಅತೀ ಹೆಚ್ಚು ಕೊವಿಡ್ ಪ್ರಕರಣಗಳಿರುವ 10 ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಇಂದು ಸಭೆ ನಡೆಸಿದ್ದಾರೆ. ರಾಜ್ಯಗಳಲ್ಲಿನ ಕೊವಿಡ್ ಸ್ಥಿತಿಗತಿಗಳ ಬಗ್ಗೆ ಅರಿಯುವುದಕ್ಕಾಗಿ ಮೋದಿ ಈ ಸಭೆ ಕರೆದಿದ್ದಾರೆ. ಸಭೆಯಲ್ಲಿ ಮೋದಿ ಜತೆ ವಿಡಿಯೊ ಸಂವಾದ ನಡೆಸಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರಾಷ್ಟ್ರ ರಾಜಧಾನಿಯಲ್ಲಿ ಆಕ್ಸಿಜನ್ ಕೊರತೆ ಬಗ್ಗೆ ವಿವರಿಸಿದ್ದಾರೆ.
ಸರ್ ನಿಮ್ಮ ನಿರ್ದೇಶನ ಬೇಕಿದೆ ಎಂದು ಕೇಜ್ರಿವಾಲ್ ಮೋದಿಯವರಲ್ಲಿ ಮನವಿ ಮಾಡಿದ್ದಾರೆ. ದೆಹಲಿಯಲ್ಲಿ ಆಕ್ಸಿಜನ್ ಕೊರತೆ ಇದೆ. ಇಲ್ಲಿ ಆಕ್ಸಿಜನ್ ಸ್ಥಾವರ ಇಲ್ಲದೇ ಇರುವುದರಿಂದ ದೆಹಲಿಯ ಜನರಿಗೆ ಆಕ್ಸಿಜನ್ ಸಿಗುವುದಿಲ್ಲವೇ? ದೆಹಲಿಗೆ ಆಕ್ಸಿಜನ್ ತರುವ ಟ್ಯಾಂಕರ್ ಗಳನ್ನು ಇತರ ರಾಜ್ಯದಲ್ಲಿ ತಡೆಹಿಡಿದರೆ ಕೇಂದ್ರ ಸರ್ಕಾರದ ಯಾವ ವ್ಯಕ್ತಿ ಜತೆ ನಾನು ಮಾತನಾಡಬೇಕು ಎಂಬುದನ್ನು ಹೇಳಿ. ಪಶ್ಚಿಮ ಬಂಗಾಳ ಮತ್ತು ಒಡಿಶಾದಿಂದ ಆಕ್ಸಿಜನ್ ನ್ನು ಏರ್ ಲಿಫ್ಟ್ ಮಾಡಿ ದೆಹಲಿಯ ಆಸ್ಪತ್ರೆಗಳಿಗೆ ಒದಗಿಸಿ ಎಂದು ಕೇಜ್ರಿವಾಲ್ ಮನವಿ ಮಾಡಿದ್ದಾರೆ .
ಪಿಎಂ ಸರ್, ದಯವಿಟ್ಟು ದೆಹಲಿಗೆ ಬರುವ ಗರಿಷ್ಠ ಟ್ರಕ್‌ಗಳನ್ನು (ಆಮ್ಲಜನಕವನ್ನು ಸಾಗಿಸುವ ಟ್ಯಾಂಕರ್‌ಗಳು) ತಡೆಯುತ್ತಿರುವ ರಾಜ್ಯದ ಮುಖ್ಯಮಂತ್ರಿಗೆ ದೂರವಾಣಿ ಕರೆ ಮಾಡಿ. ಈ ಬಿಕ್ಕಟ್ಟನ್ನು ನಿಭಾಯಿಸಲು ರಾಷ್ಟ್ರೀಯ ನೀತಿ ರೂಪಿಸಿ ಎಂದಿದ್ದಾರೆ ಕೇಜ್ರಿವಾಲ್.
ಆದಾಗ್ಯೂ, ಮೋದಿ ಜತೆ ಕೇಜ್ರಿವಾಲ್ ಮಾತನಾಡಿದ್ದು ವಾಹಿನಿಗಳಲ್ಲಿ ಪ್ರಸಾರವಾಗಿದೆ. ಇದಕ್ಕೆ ಆಕ್ಷೇಪ ವ್ಯಕ್ತ ಪಡಿಸಿದ ಕೇಂದ್ರ ಸರ್ಕಾರದ ಮೂಲಗಳು ಈ ಸಂವಹನವನ್ನು ದೂರದರ್ಶನದಲ್ಲಿ ಪ್ರಸಾರ ಮಾಡಲು ಉದ್ದೇಶಿಸಿಲ್ಲ. ಕೇಜ್ರಿವಾಲ್ ಈ ಮಟ್ಟಕ್ಕೆ ಇಳಿಯಬಾರದಿತ್ತು ಎಂದಿವೆ.
Govt Sources say Delhi CM Kejriwal used the PM-CM conference on Covid as a platform to play politics. Govt sources say he “chose to spread lies on vaccine prices despite knowing that Centre does not keep one vaccine dose with itself and shares with states only.”
— ANI (@ANI) April 23, 2021
Govt sources added, “Kejriwal has descended to a new low. For the first time, private conversations of PMs meeting with CM was televised. His entire speech was not meant for any solution but for playing politics and evade responsibility.”
— ANI (@ANI) April 23, 2021
ಮೊದಲ ಬಾರಿ ಮುಖ್ಯಮಂತ್ರಿಗಳ ಜತೆ ಪ್ರಧಾನಿಯವರ ಭೇಟಿಯ ಖಾಸಗಿ ಸಂಭಾಷಣೆಗಳನ್ನು ಪ್ರಸಾರ ಮಾಡಲಾಗಿದೆ. ಕೇಜ್ರಿವಾಲ್ ಅವರ ಸಂಪೂರ್ಣ ಭಾಷಣ ಯಾವುದೇ ಪರಿಹಾರಕ್ಕಾಗಿ ಅಲ್ಲ, ಇದು ರಾಜಕೀಯ ಆಟ ಮತ್ತು ಜವಾಬ್ದಾರಿಯಿಂದ ನುಣುಚಿಕೊಳ್ಳುವುದಾಗಿದೆ . ಪ್ರಧಾನಿ ಮೋದಿಯವರೊಂದಿಗೆ ಕೊವಿಡ್ ಕುರಿತು ಈ ಹಿಂದೆ ನಡೆದ ಸಭೆಯಲ್ಲಿ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಆಕಳಿಸಿದ್ದರು, ನಗುತ್ತಾ ಕುಳಿತಿದ್ದರು ಎಂದು ಕೇಂದ್ರದ ಮೂಲಗಳು ಆರೋಪಿಸಿವೆ.
ದೇಶದಲ್ಲಿನ ಕೊವಿಡ್ ಪರಿಸ್ಥಿತಿ ಬಗ್ಗೆ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸಮಾಲೋಚನೆ
(Arvind Kejriwal Televised PM Narendra Modi meeting with CM Playing Politics Says Centre)