ದೆಹಲಿ: ಸ್ವಾತಂತ್ರ್ಯದ ಅಮೃತ ಮಹೋತ್ಸವದ (Azadi ka Amrit Mahotsav) ಅಂಗವಾಗಿ ಫಿಟ್ ಇಂಡಿಯಾ ಫ್ರೀಡಮ್ ರನ್ (Fit India Freedom Run) ಅನ್ನು ಆಯೋಜಿಸಲಾಗಿದೆ. ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಅನುರಾಗ್ ಸಿಂಗ್ ಠಾಕೂರ್ ಅವರು ಶುಕ್ರವಾರ ಫಿಟ್ ಇಂಡಿಯಾ ಫ್ರೀಡಂ ರನ್ 2.0 ನ ರಾಷ್ಟ್ರವ್ಯಾಪಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಯುವ ವ್ಯವಹಾರಗಳು ಮತ್ತು ಕ್ರೀಡಾ ಖಾತೆ ರಾಜ್ಯ ಸಚಿವ ನಿಸಿತ್ ಪ್ರಮಾಣಿಕ್ ಕೂಡ ಈ ಸಮಾರಂಭದಲ್ಲಿ ಭಾಗವಹಿಸಲಿದ್ದು, ಬಿಎಸ್‌ಎಫ್, ಸಿಐಎಸ್‌ಎಫ್, ಸಿಆರ್‌ಪಿಎಫ್, ರೈಲ್ವೇಸ್, ಎನ್‌ವೈಕೆಎಸ್, ಐಟಿಬಿಪಿ, ಎನ್‌ಎಸ್‌ಜಿ, ಎಸ್‌ಎಸ್‌ಬಿ ಸಂಸ್ಥೆಗಳು ಕೂಡ ಭಾಗಿಯಾಗಲಿವೆ.
ದೆಹಲಿ, ನ್ಯಾಷನಲ್ ಸ್ಟೇಡಿಯಂ, ಚಂದ್ರಶೇಖರ್ ಆಜಾದ್ ಪಾರ್ಕ್ ಅಲಹಾಬಾದ್, ಸೆಲ್ಯುಲರ್ ಜೈಲ್ ಪೋರ್ಟ್ ಬ್ಲೇರ್, ಹಿಮಾಚಲ ಪ್ರದೇಶದ ಕಾಜಾ ಪೋಸ್ಟ್ ಮತ್ತು ಮುಂಬೈನಲ್ಲಿ ಗೇಟ್ ವೇಯಲ್ಲಿ ಈ ಕಾರ್ಯಕ್ರಮದ ಸ್ಥಳಗಳಾಗಿದ್ದು, ವಿವಿಧ ಐತಿಹಾಸಿಕ ಸ್ಥಳಗಳಲ್ಲಿ 75 ಕಾರ್ಯಕ್ರಮಗಳು ನಡೆಯಲಿವೆ. ಅದೇ ವೇಳೆ ಪ್ರತಿ ವಾರ ಕಾರ್ಯಕ್ರಮಗಳು 75 ಜಿಲ್ಲೆಗಳಲ್ಲಿ ಕಾರ್ಯಕ್ರಮ ನಡೆಯಲಿದ್ದು ಪ್ರತಿ ಜಿಲ್ಲೆಯ 75 ಹಳ್ಳಿಗಳಲ್ಲಿ 2 ನೇ ಅಕ್ಟೋಬರ್ 2021 ರವರೆಗೆ ಕಾರ್ಯಕ್ರಮ ಮುಂದುವರಿಯಲಿದೆ. ಹೀಗಾಗಿ, ಫಿಟ್ ಇಂಡಿಯಾ ಫ್ರೀಡಮ್ ರನ್ ಗಳನ್ನು ದೇಶದಾದ್ಯಂತ 744 ಜಿಲ್ಲೆಗಳಲ್ಲಿ, 75 ಗ್ರಾಮಗಳಲ್ಲಿ 744 ಜಿಲ್ಲೆಗಳಲ್ಲಿ ಮತ್ತು 30 ಸಾವಿರ ಶಿಕ್ಷಣ ಸಂಸ್ಥೆಗಳಲ್ಲಿ ಆಯೋಜಿಸಲಾಗುತ್ತದೆ. ಈ ಉಪಕ್ರಮದ ಮೂಲಕ 7.50 ಕೋಟಿಗೂ ಹೆಚ್ಚು ಯುವಕರು ಮತ್ತು ನಾಗರಿಕರು ಓಟದಲ್ಲಿ ಭಾಗವಹಿಸಲಿದ್ದಾರೆ.
ಜನರನ್ನು ಸದೃಢ ಮತ್ತು ಆರೋಗ್ಯಕರ ಭಾರತಕ್ಕಾಗಿ ಶ್ರಮಿಸುವಂತೆ ಸಚಿವರು ಒತ್ತಾಯಿಸಿದ್ದಾರೆ. ಏಕೆಂದರೆ ಫಿಟ್ ಮತ್ತು ಆರೋಗ್ಯಕರ ಭಾರತ ಮಾತ್ರ ಬಲಿಷ್ಠ ಭಾರತವಾಗಲು ಸಾಧ್ಯವಿದೆ. ರಾಷ್ಟ್ರವ್ಯಾಪಿ ಫಿಟ್ ಇಂಡಿಯಾ ಫ್ರೀಡಂ ರನ್ 2.0 ನಲ್ಲಿ ಭಾಗವಹಿಸಿ ಮತ್ತು ಇದನ್ನು ಜನರ ಚಳುವಳಿಯನ್ನಾಗಿಸಬೇಕು ಎಂದು ಅವರು ಮನವಿ ಮಾಡಿದರು.
ಈ ರಾಷ್ಟ್ರವ್ಯಾಪಿ ಉಪಕ್ರಮದ ಉದ್ದೇಶವು ಜನರು ತಮ್ಮ ದೈನಂದಿನ ಜೀವನದಲ್ಲಿ ಓಟ ಮತ್ತು ಕ್ರೀಡೆಗಳಂತಹ ಫಿಟ್ನೆಸ್ ಚಟುವಟಿಕೆಗಳನ್ನು ತೆಗೆದುಕೊಳ್ಳಲು ಪ್ರೋತ್ಸಾಹಿಸುವುದು ಮತ್ತು ಬೊಜ್ಜು, ಸೋಮಾರಿತನ, ಒತ್ತಡ, ಆತಂಕ, ರೋಗಗಳು ಇತ್ಯಾದಿಗಳಿಂದ ಸ್ವಾತಂತ್ರ್ಯವನ್ನು ಪಡೆಯುವುದು. ತಮ್ಮ ಜೀವನದಲ್ಲಿ ಪ್ರತಿದಿನ ಕನಿಷ್ಠ 30 ನಿಮಿಷಗಳ ದೈಹಿಕ ಚಟುವಟಿಕೆಯನ್ನು ಸೇರಿಸುವ ಸಂಕಲ್ಪ “ಫಿಟ್ನೆಸ್ ಕಿ ಡೋಸ್, ಆಧಾ ಘಂಟಾ ರೋಜ್ (ಫಿಟ್ನೆಸ್ ನ ಡೋಸ್, ಪ್ರತೀದಿನ ಅರ್ಧ ಗಂಟೆ) ಎಂಬುದುಈ ಅಭಿಯಾನದ ಉದ್ದೇಶವಾಗಿದೆ.
ಫಿಟ್ ಇಂಡಿಯಾ ಫ್ರೀಡಂ ರನ್ 2.0 ನ ಪ್ರಮುಖ ಚಟುವಟಿಕೆಗಳಲ್ಲಿ ಪ್ರತಿಜ್ಞೆ, ರಾಷ್ಟ್ರಗೀತೆ, ಸ್ವಾತಂತ್ರ್ಯದ ಓಟ, ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಭಾಗವಹಿಸಲು ಯುವ ಸ್ವಯಂಸೇವಕರಲ್ಲಿ ಜಾಗೃತಿ ಮತ್ತು ಅವರ ಗ್ರಾಮಗಳಲ್ಲಿ ಇದೇ ರೀತಿಯ ಸ್ವಾತಂತ್ರ್ಯ ಓಟ ಆಯೋಜಿಸುವುದು ಸೇರಿವೆ. ಜನರು ತಮ್ಮ ಓಟವನ್ನು ಫಿಟ್ ಇಂಡಿಯಾ ಪೋರ್ಟಲ್ fitindia.gov.in ನಲ್ಲಿ ನೋಂದಾಯಿಸಬಹುದು ಮತ್ತು ಅಪ್ಲೋಡ್ ಮಾಡಬಹುದು. #Run4India ಮತ್ತು #AzadikaAmritMahotsav ಮೂಲಕ ಸಾಮಾಜಿಕ ಮಾಧ್ಯಮಗಳಲ್ಲಿ ಸ್ವಾತಂತ್ರ್ಯದ ಓಟವನ್ನು ಪ್ರಚಾರ ಮಾಡಬಹುದು.
Get, Set, #Run4India! Only 1 day left for the Physical/Virtual Fit India Freedom Run 2.0 ?
Register Now ?https://t.co/WVjOmb5Hoe#AzadiKaAmritMahotsav #NewIndiaFitIndia@ianuragthakur @NisithPramanik pic.twitter.com/Hu6f6MqyGR
— Fit India Movement (@FitIndiaOff) August 12, 2021
ಪ್ರಮುಖ ವ್ಯಕ್ತಿಗಳು, ಸಾರ್ವಜನಿಕ ಪ್ರತಿನಿಧಿಗಳು, ಪಿಆರ್‌ಐ ನಾಯಕರು, ಸಾಮಾಜಿಕ ಕಾರ್ಯಕರ್ತರು, ಕ್ರೀಡಾಪಟುಗಳು, ಮಾಧ್ಯಮ ವ್ಯಕ್ತಿಗಳು, ವೈದ್ಯರು, ರೈತರು ಮತ್ತು ಸೇನಾ ಸಿಬ್ಬಂದಿ ಭಾಗವಹಿಸಲು, ಪ್ರೋತ್ಸಾಹಿಸಲು ಮತ್ತು ಜನರನ್ನು ಪ್ರೇರೇಪಿಸಲು ವಿನಂತಿಸಲಾಗುತ್ತಿದೆ. ಕೊವಿಡ್ ಮಾರ್ಗಸೂಚಿಗಳನ್ನು ಅನುಸರಿಸುವ ಮೂಲಕ ದೇಶಾದ್ಯಂತ ಭೌತಿಕವಾಗಿ ಮತ್ತು ವಾಸ್ತವಿಕವಾಗಿ ಈವೆಂಟ್‌ಗಳನ್ನು ಆಯೋಜಿಸಲಾಗುವುದು.
ಕೇಂದ್ರ ಸರ್ಕಾರದ ಸಚಿವಾಲಯಗಳು, ರಾಜ್ಯ ಸರ್ಕಾರಗಳು ಮತ್ತು ಇತರ ಸಂಸ್ಥೆಗಳು 2 ನೇ ಅಕ್ಟೋಬರ್ 2021 ರವರೆಗೂ ಅಭಿಯಾನದುದ್ದಕ್ಕೂ ದೈಹಿಕ/ವಾಸ್ತವ ಸ್ವಾತಂತ್ರ್ಯದ ಕಾರ್ಯಕ್ರಮಗಳನ್ನು ನಡೆಸುವಂತೆ ವಿನಂತಿಸಲಾಗಿದೆ. ಪ್ರಚಾರವನ್ನು ಜನರು ನಡೆಸುವಂತೆ ಮಾಡಲು, ಸ್ನೇಹಿತರು, ಕುಟುಂಬಗಳು ಮತ್ತು ಗೆಳೆಯರ ಗುಂಪುಗಳು ಭಾಗವಹಿಸಲು ಪ್ರೋತ್ಸಾಹಿಸಲು ಪ್ರಯತ್ನಿಸಲಾಗುತ್ತಿದೆ.
ಇದನ್ನೂ ಓದಿ: ಆನ್ಲೈನ್ ಸೇವೆ ಆರಂಭ; ದೆಹಲಿ ಆರ್ಟಿಒ ಕಚೇರಿಗೆ ಬೀಗ ಹಾಕಿದ ಅರವಿಂದ ಕೇಜ್ರಿವಾಲ್
ಇದನ್ನೂ ಓದಿ: World Elephant Day 2021: ದೈತ್ಯ ಗಾತ್ರದ ಆನೆಯ ಬಗ್ಗೆ ಸಣ್ಣ ಪುಟ್ಟ ಸಂಗತಿಗಳು
(As part of Azadi ka Amrit Mahotsav Union Minister Anurag Thakur to launch Fit India Freedom Runs 2.0 on Friday)