ಸಂಪರ್ಕ್ ಸೇ ಸಮರ್ಥನ್: ಬಾಕ್ಸರ್​​ ರೋಹಿತ್ ಟೋಕಾಸ್​​ನ್ನು ಭೇಟಿಯಾದ ಕೇಂದ್ರ ಸಚಿವ ಅನುರಾಗ್ ಠಾಕೂರ್

ಈ ಭೇಟಿಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಕೇಂದ್ರ ಸಚಿವರು, ಮೋದಿ ಸರ್ಕಾರದಲ್ಲಿ ಕ್ರೀಡೆ ಮತ್ತು ಕ್ರೀಡಾಪಟುಗಳಿಗೆ ಉತ್ತೇಜನ ನೀಡಲಾಗಿದೆ. ಮುನಿರ್ಕಾ ಗ್ರಾಮವು ಕ್ರೀಡಾಪಟುಗಳು ಮತ್ತು ಕ್ರೀಡೆಗೆ ಹೆಸರುವಾಸಿಯಾಗಿದೆ. ಬಾಕ್ಸರ್ ರೋಹಿತ್ ಟೋಕಾಸ್ ದೇಶಕ್ಕಾಗಿ ಪದಕ ಗೆಲ್ಲುವ ಮೂಲಕ ನಮಗೆಲ್ಲ ಹೆಮ್ಮೆ ತಂದಿದ್ದಾರೆ.

ಸಂಪರ್ಕ್ ಸೇ ಸಮರ್ಥನ್: ಬಾಕ್ಸರ್​​ ರೋಹಿತ್ ಟೋಕಾಸ್​​ನ್ನು ಭೇಟಿಯಾದ ಕೇಂದ್ರ ಸಚಿವ ಅನುರಾಗ್ ಠಾಕೂರ್
ಅನುರಾಗ್ ಠಾಕೂರ್
Follow us
ರಶ್ಮಿ ಕಲ್ಲಕಟ್ಟ
|

Updated on:Jun 29, 2023 | 5:49 PM

‘ಸಂಪರ್ಕ್ ಸೇ ಸಮರ್ಥನ್’ ಎಂಬ ಬಿಜೆಪಿ (BJP) ಅಭಿಯಾನದ ಅಂಗವಾಗಿ ಪಕ್ಷದ ಮುಖಂಡರು ವಿವಿಧ ಕ್ಷೇತ್ರಗಳಲ್ಲಿನ ಪ್ರಮುಖ ವ್ಯಕ್ತಿಗಳನ್ನು ಭೇಟಿ ಮಾಡಿ, ಮೋದಿ ಸರ್ಕಾರದ 9 ವರ್ಷಗಳ ಆಡಳಿತದ ಸಾಧನೆಗಳನ್ನು ವಿವರಿಸುತ್ತಿದ್ದಾರೆ. ಈ ಕಾರ್ಯಕ್ರಮದ ಭಾಗವಾಗಿ ಇಂದು (ಗುರುವಾರ)  ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ (Anurag Thakur) ಪ್ರಸಿದ್ಧ ಬಾಕ್ಸರ್ ರೋಹಿತ್ ಟೋಕಾಸ್ (Rohit Tokas) ಅವರನ್ನು ಭೇಟಿಯಾದರು. ನವದೆಹಲಿ ಸಮೀಪದ ಮುನಿರ್ಕಾ ಗ್ರಾಮದಲ್ಲಿರುವ ರೋಹಿತ್ ಮನೆಗೆ ಭೇಟಿ ನೀಡಿದ ಸಚಿವರು ಕುಟುಂಬ ಸದಸ್ಯರೊಂದಿಗೆ ಮಾತನಾಡಿದ್ದಾರೆ.

ಈ ಭೇಟಿಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಕೇಂದ್ರ ಸಚಿವರು, ಮೋದಿ ಸರ್ಕಾರದಲ್ಲಿ ಕ್ರೀಡೆ ಮತ್ತು ಕ್ರೀಡಾಪಟುಗಳಿಗೆ ಉತ್ತೇಜನ ನೀಡಲಾಗಿದೆ. ಮುನಿರ್ಕಾ ಗ್ರಾಮವು ಕ್ರೀಡಾಪಟುಗಳು ಮತ್ತು ಕ್ರೀಡೆಗೆ ಹೆಸರುವಾಸಿಯಾಗಿದೆ. ಬಾಕ್ಸರ್ ರೋಹಿತ್ ಟೋಕಾಸ್ ದೇಶಕ್ಕಾಗಿ ಪದಕ ಗೆಲ್ಲುವ ಮೂಲಕ ನಮಗೆಲ್ಲ ಹೆಮ್ಮೆ ತಂದಿದ್ದಾರೆ. ಅವರು ರೈಲ್ವೇಗಾಗಿ ಕೆಲಸ ಮಾಡುವುದಲ್ಲದೆ, ಉದಯೋನ್ಮುಖ ಕ್ರೀಡಾಪಟುಗಳಿಗೆ ತರಬೇತಿ ನೀಡುತ್ತಾರೆ. ಅವರ ಬದುಕಿನಿಂದ ಕಲಿಯುವುದು ಬಹಳಷ್ಟಿದೆ ಎಂದು ಹೇಳಿದ್ದಾರೆ.

ಯಾರು ಈ ರೋಹಿತ್ ಟೋಕಾಸ್?

ದೆಹಲಿ ಮೂಲದ ಬಾಕ್ಸರ್ ರೋಹಿತ್ ಟೋಕಾಸ್ ಯುನೈಟೆಡ್ ಕಿಂಗ್‌ಡಂನ ಬರ್ಮಿಂಗ್‌ಹ್ಯಾಮ್‌ನಲ್ಲಿ 2022 ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಸ್ಪರ್ಧಿಸಿದ್ದು, ಪುರುಷರ 67 ಕೆಜಿ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದರು. ಮೊಣಕಾಲು ಗಾಯದಿಂದಾಗಿ ಎರಡು ವರ್ಷಗಳಿಗಿಂತ ಹೆಚ್ಚು ಕಾಲ ಕ್ರೀಡೆಯಿಂದ ಹೊರಗುಳಿದಿದ್ದ ರೋಹಿತ್​​ಗೆ ತನ್ನ ಮೊದಲ ಪಂದ್ಯಕ್ಕೆ ಹತ್ತು ದಿನಗಳ ಮೊದಲು ಅದೇ ನೋವು ಮರುಕಳಿಸಿತ್ತು. ಆದರೆ ಅವರು ಹಿಂದೆ ಸರಿಯಲು ಒಪ್ಪಲಿಲ್ಲ .ಉತ್ತರ ಐರ್ಲೆಂಡ್‌ನ ತರಬೇತಿ ಸೌಲಭ್ಯದಲ್ಲಿ ಪಡೆದ ತರಬೇತಿ ಅವರನ್ನು ಮತ್ತಷ್ಟು ಹುರಿದುಂಬಿಸಿತು. ಈ ಬಗ್ಗೆ ದಿ ಬೆಟರ್ ಇಂಡಿಯಾದೊಂದಿಗೆ ಮಾತನಾಡಿದ್ದ  29ರ ಹರೆಯದ ಬಾಕ್ಸರ್, ಸ್ಕ್ವಾಟಿಂಗ್ ಮತ್ತು ಜಂಪಿಂಗ್ ಒಳಗೊಂಡಿರುವ ವ್ಯಾಯಾಮವನ್ನು ಮಾಡುವಾಗ ನಾನು ನನ್ನ ಮೊಣಕಾಲು ತಿರುಚಿದೆ. ಈ ನೋವಿನ ಗಾಯದ ನಂತರ, ನಾನು ನನ್ನ ಮೊಣಕಾಲು ಬಗ್ಗಿಸಲು ಸಾಧ್ಯವಾಗಲಿಲ್ಲ. ಎದ್ದು ನಿಲ್ಲಲು ಹೆಣಗಾಡಿದೆ.ನನ್ನ ತರಬೇತುದಾರರು ಉತ್ಸುಕರಾಗಿದ್ದರು.

ಇದನ್ನೂ ಓದಿ: Opposition Party Meet: ಪ್ರತಿಪಕ್ಷಗಳ ಮುಂದಿನ ಸಮಾವೇಶ ಬೆಂಗಳೂರಿನಲ್ಲಿ; ಶರದ್ ಪವಾರ್ ಘೋಷಣೆ

ಈ ಪರಿಸ್ಥಿತಿಗೆ ಪ್ರತಿಕ್ರಿಯಿಸಿದ ನನ್ನ ಫಿಸಿಯೋ ತನ್ನ ಮೇಲೆ ಮತ್ತು ಅವರ ಮೇಲೆ ನಂಬಿಕೆ ಇಡುವಂತೆ ಹೇಳಿದರು. ನಾನು ಎದ್ದು ನಿಲ್ಲಲು ಮತ್ತು ಕಣಕ್ಕೆ ಇಳಿಯಲು ತನ್ನಿಂದಾದ ಎಲ್ಲವನ್ನೂ ಮಾಡುತ್ತೇನೆ ಎಂದು ಹೇಳಿದ್ದರ..ರಿಂಗ್‌ನೊಳಗೆ ಸ್ಪರ್ಧಿಸುವುದು ನನಗೆ ಬಿಟ್ಟದ್ದು ಎಂದಿದ್ದರು. ನಾವು ಮೊಣಕಾಲು ನೋವು ಶಮನವಾಗಲು ಎಲ್ಲ ರೀತಿಯ ಶ್ರಮವಹಿಸಿದೆವು. ಗಟ್ಟಿಯಾದ ಮನಸ್ಸಿನಿಂದ ನಾನು ಸ್ಪರ್ಧಿಸಿದೆ. ಚಿನ್ನದ ಪದಕವೇ ಅಂತಿಮ ಗುರಿಯಾಗಿದ್ದರೂ ಬರಿಗೈಯಲ್ಲಿ ಮನೆಗೆ ಬರಬಾರದೆಂದು ನಿರ್ಧರಿಸಿದ್ದೆ.

ಇದು ನನಗೆ ಒಂದು ಆಯ್ಕೆಯಾಗಿರಲಿಲ್ಲ. ಅಂದಹಾಗೆ ಅವಕಾಶಗಳು ಆಗಾಗ್ಗೆ ಬರುವುದಿಲ್ಲ. ಭಾರತಕ್ಕಾಗಿ ಆಡುವುದೇ ದೊಡ್ಡ ಪ್ರೇರಣೆ. ಉನ್ನತ ಮಟ್ಟದಲ್ಲಿ ಸ್ಪರ್ಧಿಸುವ ಕ್ರೀಡಾಪಟುವಾಗಿ, ಗಾಯಗಳು ಇದ್ದೇ ಇರುತ್ತವೆ. ಆದರೆ ಈ ಗಾಯಗಳು ನಿಮ್ಮನ್ನು ಬಾಧಿಸದಂತೆ ಮಾಡುವುದು ಉದ್ದೇಶವಾಗಿದೆ. ಕತ್ತಲ ಕೊನೆಯಲ್ಲಿ ಬೆಳಕು ಇದ್ದೇ ಎಂದು ನಾನು ನಂಬುತ್ತೇನೆ ಎಂದು ಅವರು ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:24 pm, Thu, 29 June 23