ಶಾಲೆ ತೆರೆಯಲು ಸಿದ್ಧವಾಗಿರುವ ರಾಜ್ಯಗಳಿಗೆ ಮುನ್ನೆಚ್ಚರಿಕೆ, ಸಲಹೆ ನೀಡಿದ ವಿಶ್ವ ಆರೋಗ್ಯ ಸಂಸ್ಥೆಯ ವಿಜ್ಞಾನಿ ಸೌಮ್ಯ ಸ್ವಾಮಿನಾಥನ್

| Updated By: ರಶ್ಮಿ ಕಲ್ಲಕಟ್ಟ

Updated on: Aug 11, 2021 | 1:55 PM

ಶಾಲೆ ಆರಂಭವಾದರೆ ಮಾಸ್ಕ್ ಹಾಕುವುದು, ಒಳಾಂಗಣದಲ್ಲಿ ಹಾಡುಗಾರಿಕೆ ಮತ್ತು ಕೂಟಗಳನ್ನು ತಪ್ಪಿಸುವುದು, ಕೈ ನೈರ್ಮಲ್ಯ, ಅಂತರ ಕಾಪಾಡುವುದನ್ನು ಪಾಲಿಸಬೇಕು ಮತ್ತು ಎಲ್ಲಾ ವಯಸ್ಕರು ಲಸಿಕೆಗಳನ್ನು ಪಡೆದಿರಬೇಕು ಎಂದು ಸೌಮ್ಯ ಸ್ವಾಮಿನಾಥನ್ ಸಲಹೆ ನೀಡಿದ್ದಾರೆ.

ಶಾಲೆ ತೆರೆಯಲು ಸಿದ್ಧವಾಗಿರುವ ರಾಜ್ಯಗಳಿಗೆ ಮುನ್ನೆಚ್ಚರಿಕೆ, ಸಲಹೆ ನೀಡಿದ ವಿಶ್ವ ಆರೋಗ್ಯ ಸಂಸ್ಥೆಯ ವಿಜ್ಞಾನಿ ಸೌಮ್ಯ ಸ್ವಾಮಿನಾಥನ್
ಪ್ರಾತಿನಿಧಿಕ ಚಿತ್ರ
Follow us on

ದೆಹಲಿ: ದೇಶಾದ್ಯಂತ ಶಾಲೆಗಳು ಮತ್ತೆ ತೆರೆಯಲು ತಯಾರಿ ನಡೆಸುತ್ತಿರುವಾಗ ವಿಶ್ವ ಆರೋಗ್ಯ ಸಂಸ್ಥೆ (WHO) ಮುಖ್ಯ ವಿಜ್ಞಾನಿ ಸೌಮ್ಯ ಸ್ವಾಮಿನಾಥನ್ ಮಕ್ಕಳ ಮಾನಸಿಕ, ದೈಹಿಕ ಮತ್ತು ಅರಿವಿನ ಯೋಗಕ್ಷೇಮದ ಮೇಲೆ ದೀರ್ಘಕಾಲೀನ ಪರಿಣಾಮವನ್ನು ತಪ್ಪಿಸಲು ಕೆಲವು ಮಾರ್ಗಸೂಚಿಗಳನ್ನು ಹೊರಡಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿದ ಸೌಮ್ಯ, ಶಾಲೆ ಆರಂಭವಾದರೆ ಮಾಸ್ಕ್ ಹಾಕುವುದು, ಒಳಾಂಗಣದಲ್ಲಿ ಹಾಡುಗಾರಿಕೆ ಮತ್ತು ಕೂಟಗಳನ್ನು ತಪ್ಪಿಸುವುದು, ಕೈ ನೈರ್ಮಲ್ಯ, ಅಂತರ ಕಾಪಾಡುವುದನ್ನು ಪಾಲಿಸಬೇಕು ಮತ್ತು ಎಲ್ಲಾ ವಯಸ್ಕರು ಲಸಿಕೆಗಳನ್ನು ಪಡೆದಿರಬೇಕು ಎಂದು ಸಲಹೆ ನೀಡಿದ್ದಾರೆ.


ಸ್ವಾಮಿನಾಥನ್ ಈ ಹಿಂದೆ ನ್ಯೂಸ್ 18 ಗೆ ನೀಡಿದ ಸಂದರ್ಶನದಲ್ಲಿ ಮಕ್ಕಳಿಗೆ ಲಸಿಕೆ ಲಭ್ಯವಿಲ್ಲದವರೆಗೆ ಶಿಕ್ಷಕರಿಗೆ ಲಸಿಕೆ ಹಾಕುವುದು ಅವರನ್ನು ರಕ್ಷಿಸುವಲ್ಲಿ “ದೊಡ್ಡ ಹೆಜ್ಜೆ” ಎಂದು ಹೇಳಿದ್ದಾರೆ. ವಯಸ್ಕರಿಗೆ  ವಿಶೇಷವಾಗಿ ಶಿಕ್ಷಕರಿಗೆ ಲಸಿಕೆ ಹಾಕಬೇಕು ಮತ್ತು ಸಮುದಾಯ ಪ್ರಸರಣ ಕಡಿಮೆ ಇದ್ದಸಂದರ್ಭದಲ್ಲಿ ಮಾತ್ರ ಶಾಲೆಗಳನ್ನು ತೆರೆಯಬೇಕು ಎಂದು ಅವರು ಒತ್ತಾಯಿಸಿದ್ದರು.

ಅಂತಿಮವಾಗಿ ನಾವು ಮಕ್ಕಳಿಗೆ ಲಸಿಕೆ ಹಾಕುತ್ತೇವೆ ಎಂದು ನನಗೆ ತುಂಬಾ ಭರವಸೆ ಇದೆ. ಆದರೆ ಈ ವರ್ಷ ಅದು ಆಗುವುದಿಲ್ಲ, ಮತ್ತು ಸಮುದಾಯ ಪ್ರಸರಣ ಕಡಿಮೆಯಾದಾಗ ನಾವು ಶಾಲೆಗಳನ್ನು ತೆರೆಯಬೇಕು. ಇತರ ಮುನ್ನೆಚ್ಚರಿಕೆಗಳೊಂದಿಗೆ ಉಳಿದ ದೇಶಗಳು ಅದನ್ನೇ ಮಾಡಿವೆ. ಮತ್ತು ಶಿಕ್ಷಕರಿಗೆ ಲಸಿಕೆ ಹಾಕಿದರೆ, ಅದು ಒಂದು ದೊಡ್ಡ ಹೆಜ್ಜೆಯಾಗಿದೆ ಎಂದು ವಿಶ್ವ ಆರೋಗ್ಯಸಂಸ್ಥೆಯ ಉನ್ನತ ವಿಜ್ಞಾನಿ ಸಂದರ್ಶನವೊಂದರಲ್ಲಿ ನ್ಯೂಸ್ 18 ಗೆ ತಿಳಿಸಿದರು.

ಎಂಟು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ (UTs) ಶಾಲೆಗಳನ್ನು ಮತ್ತೆ ತೆರೆಯಲಾಗಿದೆ ಅಥವಾ ಯೋಜನೆಯೊಂದಿಗೆ ಮುಂದುವರಿಯಲು ಯೋಚಿಸುತ್ತಿವೆ ಎಂದು ಕೇಂದ್ರ ಸರ್ಕಾರ ಸಂಸತ್ ನಲ್ಲಿ ಹೇಳಿದ ಎರಡು ದಿನಗಳ ನಂತರ ‘ಅನುಸರಿಸಬೇಕಾದ ಕ್ರಮಗಳು’ನ್ನು ಸೌಮ್ಯ ಹೇಳಿದ್ದಾರೆ.

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಲಕ್ಷದ್ವೀಪ, ಪುದುಚೇರಿ, ನಾಗಾಲ್ಯಾಂಡ್, ಪಂಜಾಬ್, ಉತ್ತರಾಖಂಡ, ಹರಿಯಾಣ ಮತ್ತು ಹಿಮಾಚಲ ಪ್ರದೇಶಗಳು ಆಗಸ್ಟ್ 2 ರಿಂದ ಶಾಲೆಗಳನ್ನು ಪುನರಾರಂಭಿಸಿವೆ. ಆಂಧ್ರಪ್ರದೇಶವು ಆಗಸ್ಟ್ 16 ರೊಳಗೆ ಶಾಲೆಗಳನ್ನು ಮತ್ತೆ ತೆರೆಯುವ ಸಾಧ್ಯತೆಯಿದೆ ಎಂದು ಲೋಕಸಭೆಯಲ್ಲಿ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಕೇಂದ್ರಾಡಳಿತ ಪ್ರದೇಶಗಳ ಪೈಕಿ ಲಕ್ಷದೀಪ ಮತ್ತು ಪುದುಚೇರಿ ಮಾತ್ರ ಎಲ್ಲಾ ತರಗತಿಗಳನ್ನು ಪುನಾರಂಭಿಸಿದೆ . ಉಳಿದವರು 9 ನೇ ತರಗತಿ ಮತ್ತು ಅದಕ್ಕಿಂತ ಹೆಚ್ಚಿನ ತರಗತಿ ತೆರೆಯಲು ಮಾತ್ರ ಅನುಮತಿಸಿದ್ದಾರೆ. ಗೋವಾ, ಗುಜರಾತ್, ಜಮ್ಮು ಮತ್ತು ಕಾಶ್ಮೀರ, ಜಾರ್ಖಂಡ್, ಕರ್ನಾಟಕ, ಕೇರಳ, ಲಡಾಖ್, ಮಧ್ಯಪ್ರದೇಶ, ಮಹಾರಾಷ್ಟ್ರ, ಮೇಘಾಲಯ, ಮಣಿಪುರ, ಮಿಜೋರಾಂ, ಒಡಿಶಾ, ರಾಜಸ್ಥಾನ, ಸಿಕ್ಕಿಂ, ತಮಿಳುನಾಡು, ತೆಲಂಗಾಣ, ತ್ರಿಪುರ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ ಆಗಸ್ಟ್ 2 ರಿಂದ ಶಾಲೆಗಳನ್ನು ತೆರೆಯದ ರಾಜ್ಯಗಳಾಗಿವೆ.

ಇದನ್ನೂ ಓದಿ:  ಕೇಂದ್ರ ಸರ್ಕಾರ ಕೃಷಿ ಕ್ಷೇತ್ರಕ್ಕೆ ₹1 ಲಕ್ಷ ಕೋಟಿ ಇಟ್ಟಿದೆ, ತೆಂಗು ವಿದೇಶಕ್ಕೆ ರಫ್ತು ಮಾಡಲು ಅವಕಾಶ ನೀಡಿದೆ-ಸಚಿವೆ ಶೋಭಾ ಕರಂದ್ಲಾಜೆ

ಇದನ್ನೂ ಓದಿ:  Corona 3rd Wave: ಕೇರಳಕ್ಕೆ ಆಘಾತ ನೀಡುತ್ತಿದೆ ಕೊರೊನಾ; ಎರಡು ಡೋಸ್​ ನಡುವಿನ ಅಂತರದಲ್ಲಿ ಬದಲಾವಣೆಯೇ ಪರಿಹಾರ?

(As Schools across the country prepare to reopen WHO chief scientist Soumya Swaminathan issued a few guidelines)