ಬಾರಾಬಂಕಿ: ಮಸೀದಿಗೆ ಸಂಬಂಧಪಟ್ಟಂತೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಇಂದು ಹೊಸ ವಿವಾದವನ್ನು ಸೃಷ್ಟಿಸಿದ್ದಾರೆ. ಉತ್ತರಪ್ರದೇಶದಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿರುವ ಅವರು ಬಾರಾಬಂಕಿಯಲ್ಲಿ ರ್ಯಾಲಿ ನಡೆಸಿದರು. ಈ ವೇಳೆ ಮಾತನಾಡಿ, ಒಬ್ಬ ಅಧಿಕಾರಿಗೆ ಆಜಾನ್ (ಮುಸ್ಲಿಮರ ಪ್ರಾರ್ಥನೆ)ನಿಂದ ತುಂಬ ತೊಂದರೆಯಾಗುತ್ತದೆ ಎಂಬ ಒಂದೇ ಕಾರಣಕ್ಕೆ ಆ ಮಸೀದಿಯನ್ನೇ ಧ್ವಂಸಗೊಳಿಸಲಾಯಿತು ಎಂದು ಓವೈಸಿ ಹೇಳಿದರು. ಹಾಗೇ, ಯೋಗಿ ಆದಿತ್ಯನಾಥ್ರನ್ನು ಉಲ್ಲೇಖಿಸಿ, ‘ಅವರಪ್ಪನ ಮಸೀದಿ’ ಎಂದು ವ್ಯಂಗ್ಯವಾಡಿದರು.
ಮೇ ತಿಂಗಳಲ್ಲಿ ಬಾರಾಬಂಕಿ ಜಿಲ್ಲೆಯಲ್ಲಿರುವ ಗರೀಬ್ ನವಾಜ್ ಅಲ್ ಮರೂಫ್ ಎಂಬ ಮಸೀದಿಯನ್ನು ಅಕ್ರಮ ಕಟ್ಟಡದ ಹೆಸರಲ್ಲಿ ನೆಲಸಮ ಮಾಡಲಾಗಿತ್ತು. ಅದನ್ನು ಸ್ಥಳೀಯ ಜಿಲ್ಲಾಡಳಿತವೇ ಮುಂದಾಗಿ ಮಾಡಿತ್ತು. ಆದರೆ ಆ ಮಸೀದಿ ನೆಲಸಮವಾದ ಬೆನ್ನಲ್ಲೇ ಆಕ್ರೋಶವೂ ವ್ಯಕ್ತವಾಗಿ ಈ ಓವೈಸಿ ಕೂಡ ಅದನ್ನು ಖಂಡಿಸಿದ್ದರು. ಆದರೆ ಅದನ್ನೀಗ ಮತ್ತೆ ಉಲ್ಲೇಖಿಸಿ ಮಾತನಾಡಿದ್ದಾರೆ.
ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಸದ್ಯ ಮೂರು ದಿನಗಳ ಉತ್ತರಪ್ರದೇಶ ಪ್ರವಾಸದಲ್ಲಿದ್ದಾರೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಕೂಡ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 2014ರಲ್ಲಿ ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗಿನಿಂದಲೂ ಜಾತ್ಯತೀತತೆ ಎಂಬುದು ದುರ್ಬಲವಾಗಿದೆ ಎಂದು ಆರೋಪಿಸಿದ್ದಾರೆ.
ಅಫ್ಘಾನಿಸ್ತಾನ ಅಕ್ಕಪಕ್ಕದ ದೇಶಗಳಿಗೆ ಆತಂಕ ತರಬಾರದು: ಬ್ರಿಕ್ಸ್ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ
Published On - 7:14 pm, Thu, 9 September 21