T20 World Cup: ಟಿ 20 ವಿಶ್ವಕಪ್​ಗೆ ದಕ್ಷಿಣ ಆಫ್ರಿಕಾ ತಂಡ ಪ್ರಕಟ; ಕ್ರಿಸ್ ಮೋರಿಸ್, ಫಾಫ್ ಡು ಪ್ಲೆಸಿಸ್​ಗೆ ತಂಡದಲ್ಲಿಲ್ಲ ಸ್ಥಾನ!

T20 World Cup: ಈ ಬಾರಿ ಮೋರಿಸ್ ಅವರನ್ನು ರಾಜಸ್ಥಾನ ರಾಯಲ್ಸ್ 16.25 ಕೋಟಿ ಬಿಡ್ ನಲ್ಲಿ ಖರೀದಿಸಿತು. ಈ ಆಲ್ ರೌಂಡರ್ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿಲ್ಲ. ಅದೇ ಸಮಯದಲ್ಲಿ, ಮಾಜಿ ನಾಯಕ ಡು ಪ್ಲೆಸಿಸ್ ಕೂಡ ತಂಡದಲ್ಲಿ ಸ್ಥಾನ ಪಡೆದಿಲ್ಲ.

T20 World Cup: ಟಿ 20 ವಿಶ್ವಕಪ್​ಗೆ ದಕ್ಷಿಣ ಆಫ್ರಿಕಾ ತಂಡ ಪ್ರಕಟ; ಕ್ರಿಸ್ ಮೋರಿಸ್, ಫಾಫ್ ಡು ಪ್ಲೆಸಿಸ್​ಗೆ ತಂಡದಲ್ಲಿಲ್ಲ ಸ್ಥಾನ!
ದಕ್ಷಿಣ ಆಫ್ರಿಕಾ ತಂಡ
Follow us
TV9 Web
| Updated By: ಪೃಥ್ವಿಶಂಕರ

Updated on: Sep 09, 2021 | 6:33 PM

ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಒಮಾನ್‌ನಲ್ಲಿ ನಡೆಯಲಿರುವ ಟಿ 20 ವಿಶ್ವಕಪ್ ಪಂದ್ಯಾವಳಿಗೆ ಈಗ ಸಮಯ ಹತ್ತಿರ ಬಂದಿದೆ. ಇಂತಹ ಪರಿಸ್ಥಿತಿಯಲ್ಲಿ, ಎಲ್ಲಾ ದೇಶಗಳು ತಮ್ಮ ವಿಶ್ವಕಪ್ ತಂಡಗಳನ್ನು ಘೋಷಿಸುತ್ತಿವೆ. ದಕ್ಷಿಣ ಆಫ್ರಿಕಾ ಕೂಡ ಈ ವಿಶ್ವಕಪ್‌ಗಾಗಿ ತಂಡವನ್ನು ಗುರುವಾರ ಪ್ರಕಟಿಸಿದೆ. ಎರಡು ದೊಡ್ಡ ಹೆಸರುಗಳನ್ನು ತಂಡದಲ್ಲಿ ಸೇರಿಸಲಾಗಿಲ್ಲ. ಈ ಇಬ್ಬರೂ ಆಟಗಾರರು ಐಪಿಎಲ್‌ನಲ್ಲಿ ಸದ್ದು ಮಾಡಿದ್ದಾರೆ. ಈ ಇಬ್ಬರು ಆಟಗಾರರ ಹೆಸರು ಕ್ರಿಸ್ ಮೋರಿಸ್ ಮತ್ತು ಫಾಫ್ ಡು ಪ್ಲೆಸಿಸ್. ಅಕ್ಟೋಬರ್ 17 ರಿಂದ ವಿಶ್ವಕಪ್ ಆರಂಭವಾಗಲಿದ್ದು, ಎರಡನೇ ಹಂತದ ಐಪಿಎಲ್ -2021 ಅಕ್ಟೋಬರ್ 15 ರಂದು ಮುಕ್ತಾಯಗೊಳ್ಳಲಿದೆ.

ಈ ಬಾರಿ ಮೋರಿಸ್ ಅವರನ್ನು ರಾಜಸ್ಥಾನ ರಾಯಲ್ಸ್ 16.25 ಕೋಟಿ ಬಿಡ್ ನಲ್ಲಿ ಖರೀದಿಸಿತು. ಈ ಆಲ್ ರೌಂಡರ್ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿಲ್ಲ. ಅದೇ ಸಮಯದಲ್ಲಿ, ಮಾಜಿ ನಾಯಕ ಡು ಪ್ಲೆಸಿಸ್ ಕೂಡ ತಂಡದಲ್ಲಿ ಸ್ಥಾನ ಪಡೆದಿಲ್ಲ. ಡು ಪ್ಲೆಸಿಸ್ ಈ ವರ್ಷ ಟೆಸ್ಟ್‌ಗೆ ಗುಡ್‌ಬೈ ಹೇಳಿದ್ದು ಕಡಿಮೆ ಫಾರ್ಮ್ಯಾಟ್‌ನಲ್ಲಿ ಗಮನಹರಿಸಲು. ಆದರೆ ಅವರು ಟಿ 20 ವಿಶ್ವಕಪ್‌ನಲ್ಲಿ ಕಾಣಿಸಿಕೊಳ್ಳುವುದಿಲ್ಲ. ಲೆಗ್ ಸ್ಪಿನ್ನರ್ ಇಮ್ರಾನ್ ತಾಹಿರ್ ಅವರನ್ನು ಕೂಡ ತಂಡದಲ್ಲಿ ಸೇರಿಸಲಾಗಿಲ್ಲ. ಅವರು ಐಪಿಎಲ್‌ನಲ್ಲಿ ಸಿಎಸ್‌ಕೆ ಪರ ಆಡುತ್ತಾರೆ. ಡು ಪ್ಲೆಸಿಸ್ ಮತ್ತು ತಾಹಿರ್ ಧೋನಿ ತಂಡದ ಪ್ರಮುಖ ಆಟಗಾರರು. ತೆಂಬಾ ಬಾವುಮಾ ತಂಡದ ನಾಯಕತ್ವವನ್ನು ವಹಿಸಿಕೊಂಡಿದ್ದಾರೆ. ಕ್ರಿಕೆಟ್ ದಕ್ಷಿಣ ಆಫ್ರಿಕಾ 18 ಸದಸ್ಯರ ತಂಡವನ್ನು ಘೋಷಿಸಿದ್ದು, ಇದರಲ್ಲಿ ಮೂವರು ಮೀಸಲು ಆಟಗಾರರೂ ಸೇರಿದ್ದಾರೆ.

ಮೂವರು ಸ್ಪಿನ್ನರ್‌ಗಳಿಗೆ ಸ್ಥಾನ ದಕ್ಷಿಣ ಆಫ್ರಿಕಾ ಈ ತಂಡದಲ್ಲಿ ಮೂವರು ಸ್ಪಿನ್ನರ್‌ಗಳಿಗೆ ಸ್ಥಾನ ನೀಡಿದೆ. ಕೇಶವ್ ಮಹಾರಾಜ್, ತಬ್ರೇಜ್ ಶಮ್ಸಿ ಮತ್ತು ಎಡಗೈ ಸ್ಪಿನ್ನರ್ ಫಾರ್ಚೂನ್ ಸ್ಥಾನ ಪಡೆದಿದ್ದಾರೆ. ಶಮ್ಸಿಯನ್ನು ಇತ್ತೀಚೆಗೆ ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ತಂಡ ಖರೀದಿ ಮಾಡಿದೆ. ವಿಶ್ವಕಪ್‌ಗೆ ಮುನ್ನ ಯುಎಇಯಲ್ಲಿ ಆಡುವುದು ಶಮ್ಸಿಗೆ ಅಲ್ಲಿನ ನಿಧಾನಗತಿಯ ಪಿಚ್‌ಗಳಿಗೆ ಒಗ್ಗಿಕೊಳ್ಳಲು ಸಹಾಯ ಮಾಡುತ್ತದೆ. ಇದು ಈ ಪಿಚ್‌ಗಳಲ್ಲಿ ಹೇಗೆ ಬೌಲ್ ಮಾಡಬೇಕೆಂದು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಕಾಗಿಸೊ ರಬಾಡಾ, ಲುಂಗಿ ನ್ಗಿಡಿ, ಮತ್ತು ಎನ್ರಿಕ್ ನಾರ್ಖಿಯಾ ತಂಡದ ಪ್ರಮುಖ ವೇಗದ ಬೌಲರ್‌ಗಳಲ್ಲಿ ಒಬ್ಬರು.

ಬ್ಯಾಟಿಂಗ್​ ವಿಭಾಗ ತಂಡದ ಪ್ರಮುಖ ಬ್ಯಾಟ್ಸ್‌ಮನ್ ಕ್ವಿಂಟನ್ ಡಿ ಕಾಕ್ ಬ್ಯಾಟಿಂಗ್ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಹೆನ್ರಿಕ್ ಕ್ಲಾಸೆನ್ ಟಿ 20 ಯಲ್ಲಿ ಬಿರುಗಾಳಿಯ ಇನ್ನಿಂಗ್ಸ್ ಆಡಬಲ್ಲ ಬ್ಯಾಟ್ಸ್‌ಮನ್. ತಂಡದ ಬ್ಯಾಟಿಂಗ್ ಮುಖ್ಯವಾಗಿ ಈ ಇಬ್ಬರ ಮೇಲೆ ಅವಲಂಬಿತವಾಗಿರುತ್ತದೆ.

ತಂಡ ಹೀಗಿದೆ ತೆಂಬಾ ಬಾವುಮಾ (ನಾಯಕ), ಕೇಶವ್ ಮಹಾರಾಜ್, ಕ್ವಿಂಟನ್ ಡಿ ಕಾಕ್, ಜಾರ್ನ್ ಫಾರ್ಚೂನ್, ರೀಜಾ ಹೆಂಡ್ರಿಕ್ಸ್, ಹೆನ್ರಿಕ್ ಕ್ಲಾಸೆನ್, ಎಡಿನ್ ಮಾರ್ಕ್ರಮ್, ಡೇವಿಡ್ ಮಿಲ್ಲರ್, ಡಬ್ಲ್ಯೂ ಮುಲ್ಡರ್, ಲುಂಗಿ ನ್ಗಿಡಿ, ಎನ್ರಿಕ್ ನಾರ್ಖಿಯಾ, ಡ್ವೇಯ್ನ್ ಪ್ರಿಡೋರಿಯಸ್, ಕಗಿಸೊ ರಬಾಡಿ ತಾಬಿ ವ್ಯಾನ್ ಡೆರ್ ಡಸ್ಸೆನ್

ಮೀಸಲು ಆಟಗಾರರು – ಜಾರ್ಜಿ ಲಿಂಡೆ, ಆಂಡಿಲೆ ಫೆಹುಲ್ಕ್ಯೊ, ಲಿಜಾದ್ ವಿಲಿಯಮ್ಸ್.

ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ