ಇನ್ನು ಭಾರತ-ಪಾಕ್ ನಡುವಣ ಮೊದಲ ಪಂದ್ಯವು ದುಬೈನಲ್ಲಿ ನಡೆಯಲಿದೆ. ಈ ಮೈದಾನದಲ್ಲಿ ಪಾಕಿಸ್ತಾನ್ ಇದುವರೆಗೆ 25 ಟಿ20 ಪಂದ್ಯಗಳನ್ನು ಆಡಿದೆ. ಇದರಲ್ಲಿ 14 ಪಂದ್ಯಗಳಲ್ಲಿ ಗೆದ್ದರೆ, 10 ರಲ್ಲಿ ಸೋತಿದೆ. ಇನ್ನು ದುಬೈ ಪಿಚ್ನಲ್ಲಿ ಅತಿಹೆಚ್ಚು ಅಂತಾರಾಷ್ಟ್ರೀಯ ಟಿ20 ಗಳನ್ನು ಆಡಿದ ತಂಡ ಪಾಕಿಸ್ತಾನ್. ಇದೇ ಕಾರಣದಿಂದ ಈ ಹಿಂದೆ ಪಾಕ್ ತಂಡದ ನಾಯಕ ಬಾಬರ್ ಆಜಂ ಯುಎಇ ನಮಗೆ ಎರಡನೇ ತವರು ಇದ್ದಂತೆ ಎಂಬ ಹೇಳಿಕೆ ನೀಡಿದ್ದರು. ಅಷ್ಟೇ ಅಲ್ಲದೆ ಇದೇ ಕಾರಣದಿಂದ ಟೀಮ್ ಇಂಡಿಯಾ ಒತ್ತಡದಲ್ಲಿರಲಿದೆ ಎಂದಿದ್ದರು.