- Kannada News Photo gallery Mumbai Indian has most Player in Team India Know all IPL teams players in Indian Team
T20 World Cup 2021:ಕೊಹ್ಲಿಗೆ ಸೆಡ್ಡು ಹೊಡೆದ ರೋಹಿತ್! ಟಿ20 ವಿಶ್ವಕಪ್ನಲ್ಲಿ ಅಂಬಾನಿ ಹುಡುಗರದ್ದೇ ಮೇಲುಗೈ
T20 World Cup 2021: ಈ ವಿಷಯದಲ್ಲಿ ಮುಂಚೂಣಿಯಲ್ಲಿರುವುದು ಮುಂಬೈ ಇಂಡಿಯನ್ಸ್, ನಾಯಕ ರೋಹಿತ್ ಶರ್ಮಾ. ಐದು ಬಾರಿಯ ಐಪಿಎಲ್ ಚಾಂಪಿಯನ್‌ನ ಆರು ಆಟಗಾರರು ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
Updated on: Sep 09, 2021 | 3:26 PM

ಐಸಿಸಿ ಟಿ 20 ವಿಶ್ವಕಪ್‌ಗಾಗಿ ಭಾರತೀಯ ತಂಡವನ್ನು ಘೋಷಿಸಿದ ನಂತರ,ಆ ವಿಚಾರದ ಬಗ್ಗೆಯೇ ಚರ್ಚೆ ಮುಂದುವರಿದಿದೆ. 15 ಸದಸ್ಯರ ತಂಡದಲ್ಲಿ, ಕೆಲವು ಮುಖಗಳು ಅಚ್ಚರಿಗೊಳಿಸಿದ್ದರೆ, ಕೆಲವು ಆಟಗಾರರು ಆಯ್ಕೆಯಾಗದೆ ಇನ್ನಷ್ಟು ಆಶ್ಚರ್ಯಚಕಿತರಾಗಿಸಿದ್ದಾರೆ. ವಿಶೇಷವೆಂದರೆ ತಂಡದಲ್ಲಿ ಸೇರಿಸಲಾಗಿರುವ ಎಲ್ಲಾ ಆಟಗಾರರು ವಿಶ್ವಕಪ್‌ಗೆ ಮುನ್ನವೇ ಐಪಿಎಲ್ 2021 ಮೂಲಕ ತಮ್ಮ ಸಿದ್ಧತೆಗಳನ್ನು ಮಾಡಿಕೊಳ್ಳಬಹುದು. ಏಕೆಂದರೆ ಅವರೆಲ್ಲರೂ ಈ ಟೂರ್ನಿಯಲ್ಲಿ ತಮ್ಮ ತಂಡಗಳ ಪ್ರಮುಖ ಆಟಗಾರರಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ಯಾವ ಫ್ರಾಂಚೈಸ್‌ನ ಎಷ್ಟು ಆಟಗಾರರನ್ನು ವಿಶ್ವಕಪ್‌ಗೆ ಆಯ್ಕೆ ಮಾಡಲಾಗಿದೆ ಎಂಬುದನ್ನು ನೋಡೋಣ

ಈ ವಿಷಯದಲ್ಲಿ ಮುಂಚೂಣಿಯಲ್ಲಿರುವುದು ಮುಂಬೈ ಇಂಡಿಯನ್ಸ್, ನಾಯಕ ರೋಹಿತ್ ಶರ್ಮಾ. ಐದು ಬಾರಿಯ ಐಪಿಎಲ್ ಚಾಂಪಿಯನ್‌ನ ಆರು ಆಟಗಾರರು ತಂಡದಲ್ಲಿ ಸ್ಥಾನ ಪಡೆದಿದ್ದಾರೆ - ರೋಹಿತ್ ಶರ್ಮಾ, ಜಸ್‌ಪ್ರೀತ್ ಬುಮ್ರಾ, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ರಾಹುಲ್ ಚಹಾರ್ ಮತ್ತು ಸೂರ್ಯಕುಮಾರ್ ಯಾದವ್. ಇದು ಟೂರ್ನಿಯಲ್ಲಿ ಮುಂಬೈನ ಶಕ್ತಿಯನ್ನು ಮಾತ್ರ ತೋರಿಸುತ್ತದೆ.

ಪಂತ್, ಅಕ್ಷರ್

ಕೆಎಲ್ ರಾಹುಲ್

ಅದೇ ಸಮಯದಲ್ಲಿ, ತಂಡದ ನಾಯಕ, ವಿರಾಟ್ ಕೊಹ್ಲಿ ಅವರ ಫ್ರಾಂಚೈಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಏಕೈಕ ಆಟಗಾರ. ಅವರನ್ನು ಹೊರತುಪಡಿಸಿ, ವಾಷಿಂಗ್ಟನ್ ಸುಂದರ್ ಆರ್ಸಿಬಿಯಿಂದ ಆಯ್ಕೆಯಾಗುವುದು ಖಚಿತವಾಗಿತ್ತು, ಆದರೆ ಸುಂದರ್ ಗಾಯಗೊಂಡರು. ಅದೇ ಸಮಯದಲ್ಲಿ, ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ಅವರ ಹೆಸರು ಇಲ್ಲದಿರುವುದು ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡಿದೆ. ಇವರಲ್ಲದೆ, ಕೆಕೆಆರ್‌ನಿಂದ ವರುಣ್ ಚಕ್ರವರ್ತಿ, ಎಸ್‌ಆರ್‌ಎಚ್‌ನಿಂದ ಭುವನೇಶ್ವರ್ ಕುಮಾರ್ ಮತ್ತು ಸಿಎಸ್‌ಕೆ ಯಿಂದ ರವೀಂದ್ರ ಜಡೇಜಾ 15 ಆಟಗಾರರಲ್ಲಿ ಸೇರಿದ್ದಾರೆ. ದೀಪಕ್ ಚಹಾರ್ ಮತ್ತು ಶಾರ್ದೂಲ್ ಠಾಕೂರ್ ಅವರನ್ನು ಸಿಎಸ್‌ಕೆ ಯಿಂದಲೇ ಮೀಸಲು ಆಟಗಾರರನ್ನಾಗಿ ಇರಿಸಿಕೊಳ್ಳಲಾಗಿದೆ.




