ಟಿ20 ವಿಶ್ವಕಪ್ಗೆ ಟೀಮ್ ಇಂಡಿಯಾ ಪ್ರಕಟಗೊಂಡಿದೆ. 15 ಸದಸ್ಯರ ಬಳಗದಲ್ಲಿ 7 ಬ್ಯಾಟ್ಸ್ಮನ್ಗಳಿದ್ದಾರೆ. ಇನ್ನು ಮೂವರು ವೇಗಿಗಳಿಗೆ ಸ್ಥಾನ ನೀಡಲಾಗಿದೆ. ಹಾಗೆಯೇ ಒಟ್ಟು ಐದು ಸ್ಪಿನ್ ಬೌಲರುಗಳನ್ನು ಆಯ್ಕೆ ಮಾಡಲಾಗಿದೆ. ಇಲ್ಲಿ ರಾಹುಲ್ ಚಹರ್, ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ವರುಣ್ ಚಕ್ರವರ್ತಿ ಪರಿಪೂರ್ಣ ಸ್ಪಿನ್ನರ್ಗಳಾದರೆ, ಸ್ಪಿನ್ ಆಲ್ರೌಂಡರ್ ಆಗಿ ರವೀಂದ್ರ ಜಡೇಜಾ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಅಂದರೆ ತಂಡದಲ್ಲಿ ಸ್ಪಿನ್ನರ್ಗಳಿಗೆ ಮಣೆ ಹಾಕಲಾಗಿದೆ. ಇದುವೇ ಟೀಮ್ ಇಂಡಿಯಾ ಪಾಲಿಗೆ ತಿರುಮಂತ್ರವಾಗಲಿದೆಯಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಏಕೆಂದರೆ ಯುಎಇ ಪಿಚ್ ಸ್ಪಿನ್ನರ್ಗಳಿಗೆ ಸಹಕಾರಿ ಎನ್ನಲಾಗುತ್ತದೆ. ಆದರೆ ಅಂಕಿ ಅಂಶಗಳನ್ನು ಗಮನಿಸಿದರೆ ಯುಎಇನಲ್ಲಿ ಅತ್ಯಂತ ಯಶಸ್ಸು ಸಾಧಿಸಿರುವುದು ವೇಗಿಗಳು ಎಂಬುದು ವಿಶೇಷ.