ಐಸಿಸಿ ಟಿ 20 ವಿಶ್ವಕಪ್ಗಾಗಿ ಟೀಮ್ ಇಂಡಿಯಾವನ್ನು (Team India) ಪ್ರಕಟಿಸಲಾಗಿದೆ. ವಿರಾಟ್ ಕೊಹ್ಲಿ (Virat kohli) ಮುನ್ನಡೆಸಲಿರುವ ಈ ಬಳಗದಲ್ಲಿ ಒಟ್ಟು 18 ಮಂದಿ ಸ್ಥಾನ ಪಡೆದಿದ್ದಾರೆ. ಅದರಲ್ಲಿ 15 ಮಂದಿ ತಂಡದಲ್ಲಿ ಕಾಣಿಸಿಕೊಳ್ಳಲಿದ್ದು, ಉಳಿದ 3 ಆಟಗಾರರು ಮೀಸಲು ಆಟಗಾರರ ಪಟ್ಟಿಯಲ್ಲಿರಲಿದ್ದಾರೆ.
ಕಳೆದ ಕೆಲ ವರ್ಷಗಳಿಂದ ಟಿ20 ತಂಡದಿಂದ ಹೊರಗುಳಿದಿದ್ದ ರವಿಚಂದ್ರನ್ ಅಶ್ವಿನ್ಗೆ ಸ್ಥಾನ ನೀಡಲಾಗಿದ್ದು, ಹಾಗೆಯೇ ಯುಜುವೇಂದ್ರ ಚಹಲ್ ಅವರನ್ನು ಕೈ ಬಿಡಲಾಗಿದೆ. ಆದರೆ ಈ ಬಾರಿ ಯುಎಇನಲ್ಲಿ ಟಿ20 ವಿಶ್ವಕಪ್ ನಡೆಯಲಿದ್ದು, ಇದಾಗ್ಯೂ ಚಹಲ್ರನ್ನು ಕೈ ಬಿಟ್ಟಿರುವುದು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಏಕೆಂದರೆ ಕಳೆದ ಬಾರಿ ಯುಎಇನಲ್ಲಿ ನಡೆದ ಐಪಿಎಲ್ನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಬೌಲರುಗಳಲ್ಲಿ ಚಹಲ್ ಕೂಡ ಒಬ್ಬರು. ಹಾಗೆಯೇ ಯುಎಇ ಐಪಿಎಲ್ನ ಟಾಪ್ 5 ವಿಕೆಟ್ ಟೇಕರ್ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಸ್ಪಿನ್ನರ್ ಎಂಬುದು ವಿಶೇಷ. ಹೌದು, ಯುಎಇನಲ್ಲಿ ನಡೆದ ಈ ಹಿಂದಿನ ಐಪಿಎಲ್ ಟೂರ್ನಿಯಲ್ಲಿ ಚಹಲ್ 15 ಪಂದ್ಯಗಳನ್ನು ಆಡಿದ್ದರು. ಈ ವೇಳೆ 343 ಬಾಲ್ಗಳನ್ನು ಎಸೆದಿದ್ದ ಬಲಗೈ ಸ್ಪಿನ್ನರ್ ಕೇವಲ 405 ರನ್ಗಳನ್ನು ಮಾತ್ರ ನೀಡಿದ್ದರು.
ಅಂದರೆ ಪ್ರತಿ ಓವರ್ಗೆ 7 ರನ್ಗಳ ಸರಾಸರಿಯಲ್ಲಿ ಮಾತ್ರ ರನ್ ಬಿಟ್ಟುಕೊಟ್ಟಿದ್ದರು. ಅಷ್ಟೇ ಅಲ್ಲದೆ 21 ವಿಕೆಟ್ ಪಡೆಯುವ ಮೂಲಕ ಆರ್ಸಿಬಿ 4 ವರ್ಷಗಳ ಬಳಿಕ ಮತ್ತೊಮ್ಮೆ ಪ್ಲೇ ಆಫ್ ಪ್ರವೇಶಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಆದರೆ ಯುಎಇ ಮೈದಾನದಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ಚಹಲ್ ಅವರನ್ನೇ ಇದೀಗ ತಂಡದಿಂದ ಕೈ ಬಿಡಲಾಗಿದೆ.
ಅಲ್ಲದೆ ಅನಾನುಭವಿ ರಾಹುಲ್ ಚಹರ್ ಹಾಗೂ ವರುಣ್ ಚಕ್ರವರ್ತಿಯನ್ನು ಸ್ಪಿನ್ನರ್ ಆಗಿ ಆಯ್ಕೆ ಮಾಡಲಾಗಿದೆ. ಇತ್ತ ಟೀಮ್ ಇಂಡಿಯಾದ ಖಾಯಂ ಸದಸ್ಯರಾಗಿದ್ದ ಚಹಲ್ ಹೊರಬೀಳುತ್ತಿದ್ದಂತೆ ಇತ್ತ ಅಭಿಮಾನಿಗಳು ಕೂಡ ಅಚ್ಚರಿ ವ್ಯಕ್ತಪಡಿಸಿದ್ದಾರೆ.
Published On - 10:42 pm, Thu, 9 September 21