AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Team India: 5 ಸ್ಪಿನ್ನರ್​ಗಳಿಗೆ ಸ್ಥಾನ: ತಲೆ ಕೆಳಗಾಗಲಿದೆಯಾ ಟೀಮ್ ಇಂಡಿಯಾ ಲೆಕ್ಕಾಚಾರ

T20 World Cup 2021 India's Squad: ವಿರಾಟ್ ಕೊಹ್ಲಿ (ಕ್ಯಾಪ್ಟನ್), ರೋಹಿತ್ ಶರ್ಮಾ , ಕೆಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಇಶಾನ್ ಕಿಶನ್ , ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರಾಹುಲ್ ಚಹರ್.

TV9 Web
| Edited By: |

Updated on: Sep 09, 2021 | 5:13 PM

Share
ಟಿ20 ವಿಶ್ವಕಪ್​ಗೆ ಟೀಮ್ ಇಂಡಿಯಾ ಪ್ರಕಟಗೊಂಡಿದೆ. 15 ಸದಸ್ಯರ ಬಳಗದಲ್ಲಿ 7 ಬ್ಯಾಟ್ಸ್​ಮನ್​ಗಳಿದ್ದಾರೆ. ಇನ್ನು ಮೂವರು ವೇಗಿಗಳಿಗೆ ಸ್ಥಾನ ನೀಡಲಾಗಿದೆ. ಹಾಗೆಯೇ ಒಟ್ಟು ಐದು ಸ್ಪಿನ್​ ಬೌಲರುಗಳನ್ನು ಆಯ್ಕೆ ಮಾಡಲಾಗಿದೆ. ಇಲ್ಲಿ  ರಾಹುಲ್ ಚಹರ್, ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ವರುಣ್ ಚಕ್ರವರ್ತಿ ಪರಿಪೂರ್ಣ ಸ್ಪಿನ್ನರ್​ಗಳಾದರೆ, ಸ್ಪಿನ್ ಆಲ್​ರೌಂಡರ್ ಆಗಿ ರವೀಂದ್ರ ಜಡೇಜಾ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಅಂದರೆ ತಂಡದಲ್ಲಿ ಸ್ಪಿನ್ನರ್​ಗಳಿಗೆ ಮಣೆ ಹಾಕಲಾಗಿದೆ. ಇದುವೇ ಟೀಮ್ ಇಂಡಿಯಾ ಪಾಲಿಗೆ ತಿರುಮಂತ್ರವಾಗಲಿದೆಯಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಏಕೆಂದರೆ ಯುಎಇ ಪಿಚ್​ ಸ್ಪಿನ್ನರ್​ಗಳಿಗೆ ಸಹಕಾರಿ ಎನ್ನಲಾಗುತ್ತದೆ. ಆದರೆ ಅಂಕಿ ಅಂಶಗಳನ್ನು ಗಮನಿಸಿದರೆ ಯುಎಇನಲ್ಲಿ ಅತ್ಯಂತ ಯಶಸ್ಸು ಸಾಧಿಸಿರುವುದು ವೇಗಿಗಳು ಎಂಬುದು ವಿಶೇಷ.

1 / 6
ಈ ಬಾರಿಯ ವಿಶ್ವಕಪ್ ಪಂದ್ಯಗಳು ದುಬೈ, ಶಾರ್ಜಾ ಮತ್ತು ಅಬುಧಾಬಿಯಲ್ಲಿ ನಡೆಯಲಿವೆ. ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ 62 ಟಿ20 ಅಂತರಾಷ್ಟ್ರೀಯ  ಪಂದ್ಯಗಳನ್ನು ಆಡಲಾಗಿದೆ. ಇಲ್ಲಿ ವೇಗದ ಬೌಲರ್‌ಗಳ ಸ್ಟ್ರೈಕ್ ರೇಟ್ 17.8. ಅಂದರೆ ಒಟ್ಟಾರೆ ಪಂದ್ಯದಲ್ಲಿ ವೇಗಿಗಳು ಪ್ರತಿ 18ನೇ ಎಸೆತದಲ್ಲಿ ಒಂದು ವಿಕೆಟ್ ಪಡೆದಿದ್ದಾರೆ ಎಂದರ್ಥ. ಅದರಂತೆ ವೇಗದ ಬೌಲರುಗಳು 62 ಪಂದ್ಯಗಳಲ್ಲಿ 22 ರ ಸರಾಸರಿಯಲ್ಲಿ 455 ವಿಕೆಟ್​ಗಳನ್ನು  ಪಡೆದಿದ್ದಾರೆ. ಇನ್ನು ಇದೇ ಪಿಚ್​ನಲ್ಲಿ ಸ್ಪಿನ್ ಬೌಲರ್‌ಗಳ ಸ್ಟ್ರೈಕ್ ರೇಟ್​ ಗಮನಿಸಿದರೆ ಅದು 19.3 ಆಗಿದೆ. ಅಂದರೆ, ಒಟ್ಟಾರೆ ಪಂದ್ಯದಲ್ಲಿ  ಪ್ರತಿ 20ನೇ ಎಸೆತಕ್ಕೆ ಒಂದು ವಿಕೆಟ್ ಲಭಿಸಿದೆ. ಅಲ್ಲದೆ ದುಬೈ ಮೈದಾನದಲ್ಲಿ ಇದುವರೆಗೆ ಸ್ಪಿನ್ನರ್​ಗಳು ಪಡೆದಿರುವುದು 303 ವಿಕೆಟ್ ಮಾತ್ರ. ಅಂದರೆ ದುಬೈ ಇಂಟರ್​ನ್ಯಾಷನಲ್​ ಮೈದಾನದಲ್ಲಿ ವೇಗಿಗಳು ಮೇಲುಗೈ ಸಾಧಿಸಿರುವುದು ಸ್ಪಷ್ಟ.

2 / 6
ಇನ್ನು ಅಬುಧಾಬಿಯ ಮೈದಾನದಲ್ಲಿನ ಒಟ್ಟಾರೆ ಅಂಕಿ ಅಂಶಗಳನ್ನು ಗಮನಿಸಿದರೆ, ಅಲ್ಲೂ ವೇಗದ ಬೌಲರುಗಳೇ ಹೆಚ್ಚಿನ ಯಶಸ್ಸು ಸಾಧಿಸಿದ್ದಾರೆ. ಅಬುಧಾಬಿಯಲ್ಲಿ ಒಟ್ಟು 48 ಟಿ20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಲಾಗಿದೆ. ಈ ವೇಳೆ ವೇಗದ ಬೌಲರ್‌ಗಳು 22 ರ ಸರಾಸರಿಯಲ್ಲಿ 333 ವಿಕೆಟ್ ಪಡೆದಿದ್ದಾರೆ. ಮತ್ತೊಂದೆಡೆ, ಸ್ಪಿನ್ ಬೌಲರುಗಳು 25ರ ಸರಾಸರಿಯಲ್ಲಿ 212 ವಿಕೆಟ್ ಪಡೆಯುವಲ್ಲಿ ಮಾತ್ರ ಯಶಸ್ವಿಯಾಗಿದ್ದಾರೆ.

3 / 6
ಶಾರ್ಜಾ ಮೈದಾನದಲ್ಲಿ ಇದುವರೆಗೆ 14 ಟಿ20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಲಾಗಿದೆ. ಇಲ್ಲಿ ವೇಗದ ಬೌಲರ್‌ಗಳು 21ರ ಸರಾಸರಿಯಲ್ಲಿ 98 ವಿಕೆಟ್ ಪಡೆದಿದ್ದಾರೆ. ಅತ್ತ ಸ್ಪಿನ್ ಬೌಲರ್‌ಗಳು 21 ರ ಸರಾಸರಿಯಲ್ಲಿ 78 ವಿಕೆಟ್ ಪಡೆಯುವಲ್ಲಿ ಮಾತ್ರ ಯಶಸ್ವಿಯಾಗಿದ್ದಾರೆ. ಭಾರತದ ಹೆಚ್ಚಿನ ಪಂದ್ಯಗಳು ದುಬೈನಲ್ಲಿ ನಡೆಯಲಿದೆ. ಈ ಮೈದಾನದಲ್ಲಿ ವೇಗಿಗಳು 455 ವಿಕೆಟ್ ಪಡೆದಿದ್ದಾರೆ. ಆದರೆ ಪ್ರಸ್ತುತ ತಂಡದಲ್ಲಿ ಜಸ್​ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ಹಾಗೂ ಭುವನೇಶ್ವರ್ ಕುಮಾರ್ ಹೊರತುಪಡಿಸಿ ನಾಲ್ಕನೇ ವೇಗದ ಬೌಲರ್ ಇಲ್ಲ. ತಂಡದ ವೇಗದ ಬೌಲರ್​ಗಳಲ್ಲಿ ಬದಲಾವಣೆ ತರಬೇಕಿದ್ದರೂ ಈ ಮೂವರಲ್ಲೇ ಬದಲಾವಣೆ ಮಾಡಬೇಕಿದೆ. ಹಾಗಾಗಿ ಐವರು ಸ್ಪಿನ್ನರ್​ಗಳ ಆಯ್ಕೆ ಟೀಮ್ ಇಂಡಿಯಾ ಪಾಲಿಗೆ ಮುಳುವಾಗಲಿದೆಯಾ ಎಂಬ ಚರ್ಚೆಯನ್ನು ಹುಟ್ಟಿಹಾಕಿದೆ.

4 / 6
 ಐಪಿಎಲ್ ದ್ವಿತಿಯಾರ್ಧ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಮೊದಲ ಪಂದ್ಯದಲ್ಲಿಮುಂಬೈ ಇಂಡಿಯನ್ಸ್ ಹಾಗೂ ಸಿಎಸ್​ಕೆ ಮುಖಾಮುಖಿಯಾಗಲಿದ್ದು, ಇದರೊಂದಿಗೆ ಉಳಿದ 31 ಪಂದ್ಯಗಳಿಗೆ ಚಾಲನೆ ದೊರೆಯಲಿದೆ.

5 / 6
ಟಿ20 ವಿಶ್ವಕಪ್​

ಟಿ20 ವಿಶ್ವಕಪ್​

6 / 6
Follow Us
ಮಧ್ಯ ರಾತ್ರಿ 2 ಗಂಟೆ ಮೇಲೆ ರಕ್ಷಿತಾ ಪ್ರೇಮ್ ಕರೆ ಮಾಡಿದ್ರು: ಧ್ರುವ ಸರ್ಜಾ

ಕೆರೂರು PSI ಲೋಕಾಯುಕ್ತ ಬಲೆಗೆ: ಪಟಾಕಿ ಸಿಡಿಸಿ ಸಂಭ್ರಮಿಸಿದ ಯುವಕರು

ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್

SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ

ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು

ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್

ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ

ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು

ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ

ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ