ಮಧ್ಯಪ್ರದೇಶ: ಭೋಜ್​ಶಾಲಾದಲ್ಲಿ ಎಎಸ್​ಐ ಸಮೀಕ್ಷೆ ಶುರು

|

Updated on: Mar 22, 2024 | 9:47 AM

ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI) ಮಧ್ಯಪ್ರದೇಶದ ಬುಡಕಟ್ಟು ಪ್ರಾಬಲ್ಯದ ಧಾರ್ ಜಿಲ್ಲೆಯಲ್ಲಿ ನೆಲೆಗೊಂಡಿರುವ ವಿವಾದಾತ್ಮಕ ಭೋಜಶಾಲಾ-ಕಮಲ್ ಮೌಲಾ ಮಸೀದಿ ಸಂಕೀರ್ಣದ ತನ್ನ ಸಮೀಕ್ಷೆಯನ್ನು ಇಂದಿನಿಂದ ಪ್ರಾರಂಭಿಸಿದೆ. ಹತ್ತಕ್ಕೂ ಹೆಚ್ಚು ಸದಸ್ಯರನ್ನು ಒಳಗೊಂಡ ಎಎಸ್‌ಐ ತಂಡ ಶುಕ್ರವಾರ ಬೆಳಗ್ಗೆ ಸಂಕೀರ್ಣವನ್ನು ತಲುಪಿತು. ತಂಡದೊಂದಿಗೆ ಹಿರಿಯ ಸ್ಥಳೀಯ ಪೊಲೀಸರು ಮತ್ತು ಜಿಲ್ಲಾಡಳಿತದ ಅಧಿಕಾರಿಗಳು ಇದ್ದರು.

ಮಧ್ಯಪ್ರದೇಶ: ಭೋಜ್​ಶಾಲಾದಲ್ಲಿ ಎಎಸ್​ಐ ಸಮೀಕ್ಷೆ ಶುರು
ಭೋಜ್​ಶಾಲಾ
Follow us on

ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು (ಎಎಸ್‌ಐ) ಇಂದು ದ ಬುಡಕಟ್ಟು ಪ್ರಾಬಲ್ಯದ ಧಾರ್ ಜಿಲ್ಲೆಯಲ್ಲಿರುವ ವಿವಾದಾತ್ಮಕ ಭೋಜ್​ಶಾಲಾ, ಕಮಲ್ ಮೌಲಾ ಮಸೀದಿ ಸಂಕೀರ್ಣದ ಸಮೀಕ್ಷೆಯನ್ನು ಪ್ರಾರಂಭಿಸಿದೆ. ಎಐಎಸ್‌ಎ ತಂಡ ಇಂದು ಬೆಳಗ್ಗೆಯೇ ಸ್ಥಳಕ್ಕೆ ತಲುಪಿದೆ. ಮಧ್ಯಪ್ರದೇಶ ಹೈಕೋರ್ಟ್​ನ ಆದೇಶದ ಬಳಿಕ ಎಎಸ್‌ಐ ಈ ಕ್ರಮ ಕೈಗೊಂಡಿದೆ. ಹೈಕೋರ್ಟ್‌ನ ಆದೇಶವನ್ನು ಮುಸ್ಲಿಂ ಸಮುದಾಯದವರು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.

ಎಐಎಸ್‌ಎ ತಂಡ ಇಂದು ಬೆಳಗ್ಗೆಯೇ ಸ್ಥಳಕ್ಕೆ ತಲುಪಿದೆ. ಎಂಪಿ ಹೈಕೋರ್ಟ್‌ನ ಆದೇಶದ ನಂತರ ಎಎಸ್‌ಐ ಈ ಕ್ರಮ ಕೈಗೊಂಡಿದೆ. ಹೈಕೋರ್ಟ್‌ನ ಆದೇಶವನ್ನು ಮುಸ್ಲಿಂ ಕಡೆಯವರು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.

ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿರುವ ಭೋಜ್​ಶಾಲಾದ ಸಮೀಕ್ಷೆಯನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಸಂಸ್ಥೆ ನಡೆಸಲಿದೆ ಎಂದು ಮಧ್ಯಪ್ರದೇಶ ಹೈಕೋರ್ಟ್‌ನ ಇಂದೋರ್ ಪೀಠ ಹೇಳಿತ್ತು.

ಮತ್ತಷ್ಟು ಓದಿ: Gyanvapi Mosque case: ಏ.14ಕ್ಕೆ ಜ್ಞಾನವಾಪಿ ಮಸೀದಿ ವಿಚಾರಣೆ, ಮಸೀದಿ ಆವರಣದೊಳಗೆ ಶುಚಿಗೊಳಿಸಲು ಅವಕಾಶ

ಉತ್ತರ ಪ್ರದೇಶದ ಜ್ಞಾನವಾಪಿ ಮಾದರಿಯಲ್ಲಿ ನಡೆಯಲಿರುವ ಈ ಸಮೀಕ್ಷೆಯ ವರದಿಯನ್ನು 6 ವಾರಗಳಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಬೇಕು. ಭೋಜ್​ಶಾಲಾ ಮಂಗಳವಾರ ಹಿಂದೂಗಳು ಪೂಜೆ ಮಾಡುವ ಸ್ಥಳವಾಗಿದೆ ಮತ್ತು ಮುಸ್ಲಿಂ ಸಮುದಾಯದ ಜನರು ಶುಕ್ರವಾರ ನಮಾಜ್ ಮಾಡುತ್ತಾರೆ.

ಉತ್ತರ ಪ್ರದೇಶದ ಜ್ಞಾನವಾಪಿ ಮಾದರಿಯಲ್ಲಿ ನಡೆಯಲಿರುವ ಈ ಸಮೀಕ್ಷೆಯ ವರದಿಯನ್ನು 6 ವಾರಗಳಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಬೇಕು. ಭೋಜಶಾಲಾ ಮಂಗಳವಾರದಂದು ಹಿಂದೂಗಳು ಪೂಜೆ ಮಾಡುವ ಸ್ಥಳವಾಗಿದೆ ಮತ್ತು ಮುಸ್ಲಿಂ ಸಮುದಾಯದ ಜನರು ಶುಕ್ರವಾರ ನಮಾಜ್ ಮಾಡುತ್ತಾರೆ.

ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಏಪ್ರಿಲ್ 29 ರಂದು ಪ್ರಸ್ತಾಪಿಸಲಾಗಿದೆ. ಈ ವಿಚಾರಣೆಗೂ ಮುನ್ನ ಸಮೀಕ್ಷಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ