ದಿಸ್ಪುರ್: ಅಸ್ಸಾಂನ (Assam) ಕಮ್ರೂಪ್‌ನಲ್ಲಿ 3.7 ತೀವ್ರತೆಯ ಭೂಕಂಪ (Earthquake) ಸಂಭವಿಸಿದೆ ಎಂದು ಭೂಕಂಪನದ ರಾಷ್ಟ್ರೀಯ ಕೇಂದ್ರ ತಿಳಿಸಿದೆ. ಇಂದು ಸಂಜೆ 4:52ಕ್ಕೆ ರಿಕ್ಟರ್ ಮಾಪಕದಲ್ಲಿ 3.7 ತೀವ್ರತೆಯ ಭೂಕಂಪ ಪತ್ತೆಯಾಗಿದೆ. ಗುವಾಹಟಿ ಸೇರಿದಂತೆ ಅಸ್ಸಾಂನ ಕೆಲವು ಭಾಗಗಳಲ್ಲಿ ಸೋಮವಾರ ಮಧ್ಯಾಹ್ನ 3.7 ತೀವ್ರತೆಯ ಭೂಕಂಪ ಸಂಭವಿಸಿದೆ. ಪ್ರಾಣ ಮತ್ತು ಆಸ್ತಿಪಾಸ್ತಿ ಹಾನಿಯ ಬಗ್ಗೆ ಇನ್ನೂ ಯಾವುದೇ ವರದಿ ಬಂದಿಲ್ಲ. ನ್ಯಾಷನಲ್ ಸೆಂಟರ್ ಫಾರ್ ಸಿಸ್ಮಾಲಜಿ ವೆಬ್‌ಸೈಟ್ ಪ್ರಕಾರ, 4.52 ಸಂಜೆ ಕಂಪನದ ಅನುಭವಾಗಿದೆ.
An earthquake with a magnitude of 3.7 on the Richter Scale hit Kamrup, Assam at 4:52 pm today: National Center for Seismology
— ANI (@ANI) April 17, 2023
ಅತಿದೊಡ್ಡ ನಗರವಾದ ಗುವಾಹಟಿ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಕಂಪನದ ಅನುಭವವಾಗಿದೆ. ಈಶಾನ್ಯ ಪ್ರದೇಶವು ಹೆಚ್ಚಿನ ಭೂಕಂಪನ ವಲಯವಾಗಿದ್ದು, ಇದರಿಂದಾಗಿ ಈ ಪ್ರದೇಶದಲ್ಲಿ ಭೂಕಂಪಗಳು ಆಗಾಗ್ಗೆ ಸಂಭವಿಸುತ್ತವೆ.
Published On - 5:44 pm, Mon, 17 April 23