Earthquake: ಜಮ್ಮು- ಕಾಶ್ಮೀರದಲ್ಲಿ 4.0 ತೀವ್ರತೆಯ ಭೂಕಂಪ
ಜಮ್ಮು ಮತ್ತು ಕಾಶ್ಮೀರದಲ್ಲಿ ಇಂದು ಬೆಳಿಗ್ಗೆ 10.10ಕ್ಕೆ 4.0 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ (jammu and kashmir) ಇಂದು ಬೆಳಿಗ್ಗೆ 10.10ಕ್ಕೆ 4.0 ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ. ಜಮ್ಮು ಮತ್ತು ಕಾಶ್ಮೀರವು ಹೆಚ್ಚಿನ ಭೂಕಂಪನ ವಲಯ ಎಂದು ತಿಳಿದು ಬಂದಿದೆ. ಭೂಕಂಪದ ಆಳ 10 ಕಿ.ಮೀ ಇತ್ತು ಎಂದು ಅದು ಹೇಳಿದೆ. ಯಾವುದೇ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿ ಹಾನಿಯಾದ ಬಗ್ಗೆ ಇದುವರೆಗೆ ವರದಿಯಾಗಿಲ್ಲ.
ಭೂಕಂಪದ ತೀವ್ರತೆ: 4.0, 12-04-2023 ರಂದು ಸಂಭವಿಸಿದೆ, 10:10:51 IST, ಲ್ಯಾಟ್: 34.44 ಮತ್ತು ಉದ್ದ: 73.60, ಆಳ: 10 ಕಿಮೀ, ಸ್ಥಳ: ಜಮ್ಮು ಮತ್ತು ಕಾಶ್ಮೀರ, ಭಾರತ, ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಟ್ವಿಟರ್‌ನಲ್ಲಿ ಬರೆದುಕೊಂಡಿದೆ.
ಬಿಹಾರದಲ್ಲಿ 4.3 ತೀವ್ರತೆ ಭೂಂಕಪ
ಬಿಹಾರದಲ್ಲಿ ಭೂಕಂಪ ಸಂಭವಿಸಿದ್ದು, 4.3 ತೀವ್ರತೆ ದಾಖಲಾಗಿದೆ. ಪುರ್ನಿಯಾ ಬಳಿ 10 ಕಿಮೀ ಆಳದಲ್ಲಿ ಭೂಕಂಪ ಸಂಭವಿಸಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಬಿಹಾರದ ಅರಾರಿಯಾ ಜಿಲ್ಲೆಯಲ್ಲಿ ಬುಧವಾರ ಬೆಳಗ್ಗೆ ಭೂಕಂಪನದ ಅನುಭವವಾಗಿದೆ. ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರದ ಪ್ರಕಾರ, ಬೆಳಿಗ್ಗೆ 5.35 ರ ಸುಮಾರಿಗೆ ಕಂಪನದ ಅನುಭವವಾಯಿತು. ಭೂಕಂಪದ ತೀವ್ರತೆಯನ್ನು ರಿಕ್ಟರ್ ಮಾಪಕದಲ್ಲಿ 4.3 ಎಂದು ಅಳೆಯಲಾಗಿದೆ. ಬಿಹಾರದ ಅರಾರಿಯಾದಲ್ಲಿ ಬುಧವಾರ ಬೆಳಗ್ಗೆ 5.35ರ ಸುಮಾರಿಗೆ 4.3 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಭಾರತದ ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ (ಎನ್‌ಸಿಎಸ್) ತಿಳಿಸಿದೆ. ಭೂಕಂಪದ ಕೇಂದ್ರಬಿಂದುವು ನೆಲದ ಮೇಲ್ಮೈಯಿಂದ ಸುಮಾರು 10 ಕಿಲೋಮೀಟರ್ ಆಳದಲ್ಲಿದೆ.
Published On - 11:21 am, Wed, 12 April 23