Rozgar Mela: 71,000 ಮಂದಿಗೆ ಪ್ರಧಾನಿ ನರೇಂದ್ರ ಮೋದಿಯಿಂದ ನೇಮಕಾತಿ ಪತ್ರ
ಯುವಜನತೆಗೆ ವಿವಿಧ ಅವಕಾಶಗಳು ಈ ಯೋಜನೆಯಡಿ ಲಭ್ಯವಾಗಲಿದೆ. ದೇಶದಲ್ಲಿ ವಿವಿಧ ರೀತಿಯ ಉದ್ಯೋಗಾವಕಾಶ ಸೃಷ್ಟಿಯ ಗುರಿ ಹೊಂದಿದೆ ರೋಜ್ಗಾರ್ ಮೇಳ, ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ.
ಪ್ರಧಾನ ಮಂತ್ರಿ ರೋಜ್ಗಾರ್ ಮೇಳ ಯೋಜನೆಯಡಿ ಹೊಸದಾಗಿ ನೇಮಕಗೊಂಡ 71,000 ಮಂದಿಗೆ ಪ್ರಧಾನಿ ನರೇಂದ್ರ ಮೋದಿಯವರು ನೇಮಕಾತಿ ಪತ್ರ ವಿತರಿಸಲಿದ್ದಾರೆ. ಏಪ್ರಿಲ್ 13ರಂದು ನಡೆಯುವ ವರ್ಚುವಲ್ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ನೇಮಕಗೊಂಡ ನೂತನ ಅಭ್ಯರ್ಥಿಗಳ ಜತೆಗೆ ವಿಡಿಯೊ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸುವರು. ದೇಶದಲ್ಲಿ ಹೆಚ್ಚಿನ ಉದ್ಯೋಗಾವಕಾಶ ಒದಗಿಸುವ ಉದ್ದೇಶವನ್ನು ಪ್ರಧಾನ ಮಂತ್ರಿ ರೋಜ್ಗಾರ್ ಮೇಳ ಹೊಂದಿದೆ. ಯುವಜನತೆಗೆ ವಿವಿಧ ಅವಕಾಶಗಳು ಈ ಯೋಜನೆಯಡಿ ಲಭ್ಯವಾಗಲಿದೆ. ದೇಶದಲ್ಲಿ ವಿವಿಧ ರೀತಿಯ ಉದ್ಯೋಗಾವಕಾಶ ಸೃಷ್ಟಿಯ ಗುರಿ ಹೊಂದಿದೆ ರೋಜ್ಗಾರ್ ಮೇಳ, ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ. ರೋಜ್ಗಾರ್ ಮೇಳ ಮೂಲಕ ನೇಮಕಗೊಂಡ 71,000 ಮಂದಿಗೆ ನೇಮಕಾತಿ ಪತ್ರ ವಿತರಿಸಲಿರುವ ಪ್ರಧಾನಿ ನರೇಂದ್ರ ಮೋದಿ, ಅವರ ಜತೆ ಸಂವಾದ ನಡೆಸಲಿದ್ದಾರೆ. ಏಪ್ರಿಲ್ 13ರಂದು ವರ್ಚುವಲ್ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿಯಿಂದ ನೇಮಕಾತಿ ಪತ್ರ ವಿತರಣೆಯಾಗಲಿದ್ದು, ವಿವಿಧ ಕ್ಷೇತ್ರಗಳಲ್ಲಿ ಯುವಜನತೆಗೆ ಉದ್ಯೋಗ ಒದಗಿಸುವ ಗುರಿಯನ್ನು ರೋಜ್ಗಾರ್ ಮೇಳ ಹೊಂದಿದೆ. ಜತೆಗೆ ಉದ್ಯೋಗಾವಕಾಶ ಒದಗಿಸಿ ಯುವ ಸಬಲೀಕರಣ ಗುರಿಯನ್ನು ಹೊಂದಿದೆ. ರೋಜ್ಗಾರ್ ಮೇಳದ ಮೂಲಕ ದೇಶದಾದ್ಯಂತ ಆಯ್ಕೆಯೊಂಡಿರುವ 71 ಸಾವಿರ ಉದ್ಯೋಗಿಗಳಿಗೆ ವಿವಿಧ ಇಲಾಖೆಯಲ್ಲಿ ಕೆಲಸ ಲಭ್ಯವಾಗಿದೆ. ಪ್ರಮುಖವಾಗಿ ರೈಲ್ವೆ, ಅಂಚೆ, ಆದಾಯ ತೆರಿಗೆ, ಶಿಕ್ಷಕ ಸಹಿತ ವಿವಿಧ ಸ್ಥರದ ಉದ್ಯೋಗ ಪಡೆದ ಯುವಜನತೆ, ಕರ್ಮಯೋಗಿ ಪ್ರಾರಂಭ್ ಆನ್ಲೈನ್ ಕೋರ್ಸ್ ಮೂಲಕ ವಿಶೇಷ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸುವರು.