ಅಸ್ಸಾಂ-ಮಿಜೋರಾಂ ಗಡಿ ವಿವಾದ; ಅಸ್ಸಾಂ ಮುಖ್ಯಮಂತ್ರಿ ಹಿಮಂತ್​ ಬಿಸ್ವಾ ಶರ್ಮಾ ವಿರುದ್ಧ ಎಫ್​ಐಆರ್​ ದಾಖಲು

| Updated By: Lakshmi Hegde

Updated on: Jul 31, 2021 | 10:48 AM

ಗಡಿ ವಿವಾದಕ್ಕೆ ಸಂಬಂಧಪಟ್ಟಂತೆ ಅಸ್ಸಾಂ ಪೊಲೀಸರು, ಮಿಜೋರಾಂನ ರಾಜ್ಯ ಸಭಾ ಸದಸ್ಯ ಸೇರಿ ಆರು ಮಂದಿ ಅಧಿಕಾರಿಗಳಿಗೆ ಸಮನ್ಸ್​ ನೀಡಿದ ಬೆನ್ನಲ್ಲೇ ಈ ಎಲ್ಲ ಬೆಳವಣಿಗೆಗಳೂ ನಡೆದಿವೆ.

ಅಸ್ಸಾಂ-ಮಿಜೋರಾಂ ಗಡಿ ವಿವಾದ; ಅಸ್ಸಾಂ ಮುಖ್ಯಮಂತ್ರಿ ಹಿಮಂತ್​ ಬಿಸ್ವಾ ಶರ್ಮಾ ವಿರುದ್ಧ ಎಫ್​ಐಆರ್​ ದಾಖಲು
ಹಿಮಂತ ಬಿಸ್ವಾ ಶರ್ಮಾ
Follow us on

ನವದೆಹಲಿ: ಜುಲೈ 26ರಂದು ಅಸ್ಸಾಂ-ಮಿಜೋರಾಂ ಗಡಿಯಲ್ಲಿ ನಡೆದ ಸಂಘರ್ಷ(Assam-Mizoram Border Dispute)ದಲ್ಲಿ 6 ಜನರು ಮೃತಪಟ್ಟು, ಎರಡೂ ರಾಜ್ಯಗಳ 100ಕ್ಕೂ ಹೆಚ್ಚು ಮಂದಿ ಗಾಯಗೊಂಡ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಿಝೋರಾಂ ಪೊಲೀಸರು, ಅಸ್ಸಾಂ ಮುಖ್ಯಮಂತ್ರಿ ಹಿಮಂತ್​ ಬಿಸ್ವಾ ಶರ್ಮಾ ಮತ್ತು ಅಸ್ಸಾಂನ ಐಜಿ, ಡಿಐಜಿ, ಡಿಸಿ ಸೇರಿ ಆರು ಅಧಿಕಾರಿಗಳ ವಿರುದ್ಧ ಎಫ್​ಐಆರ್​ (FIR) ದಾಖಲಿಸಿದ್ದಾರೆ. ಇದು ಕೊಲೆ ಯತ್ನ ಮತ್ತು ಕ್ರಿಮಿನಲ್ ಪಿತೂರಿ ಎಂದು ಆರೋಪಿಸಿರುವ ಮಿಜೋರಾಂ ಪೊಲೀಸರು, ಅಪರಿಚಿತ ಎರಡುನೂರು ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾಗಿ, ಇಂಡಿಯಾ ಟುಡೆ ವರದಿ ಮಾಡಿದೆ.

ಮುಖ್ಯಮಂತ್ರಿ ಮತ್ತು ಪೊಲೀಸರ ವಿರುದ್ಧ ದಾಖಲಾದ ಎಫ್​ಐಆರ್​ ಪ್ರತಿ ಇಂಡಿಯಾ ಟುಡೆಗೆ ಲಭ್ಯವಾಗಿದೆ ಎಂದೂ ಹೇಳಿದೆ. ಇಷ್ಟೆಲ್ಲ ಬೆಳವಣಿಗೆಗಳ ಮಧ್ಯೆ ಮಾಧ್ಯಮಗಳೊಂದಿಗೆ ಮಾತನಾಡಿದ ಅಸ್ಸಾಂ ಮುಖ್ಯಮಂತ್ರಿ ಹಿಮಂತ್​ ಬಿಸ್ವಾ ಶರ್ಮಾ, ಅಸ್ಸಾಂನ ಭೂಮಿ, ಪ್ರಾದೇಶಿಕತೆ ರಕ್ಷಣೆಗೆ ನಾನು ನನ್ನ ಜೀವವನ್ನೇ ತ್ಯಾಗ ಮಾಡಲು ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ.

ಗಡಿ ವಿವಾದಕ್ಕೆ ಸಂಬಂಧಪಟ್ಟಂತೆ ಅಸ್ಸಾಂ ಪೊಲೀಸರು, ಮಿಜೋರಾಂನ ರಾಜ್ಯ ಸಭಾ ಸದಸ್ಯ ಸೇರಿ ಆರು ಮಂದಿ ಅಧಿಕಾರಿಗಳಿಗೆ ಸಮನ್ಸ್​ ನೀಡಿದ ಬೆನ್ನಲ್ಲೇ ಈ ಎಲ್ಲ ಬೆಳವಣಿಗೆಗಳೂ ನಡೆದಿವೆ. ಇನ್ನೊಂದೆಡೆ ಮಿಜೋರಾಂ ಮುಖ್ಯಮಂತ್ರಿ ಜೋರಾಮ್ತಂಗಾ ಶಾಂತಿ ಕಾಪಾಡುವಂತೆ ಕರೆ ನೀಡುತ್ತಿದ್ದಾರೆ. ಗಡಿ ವಿವಾದವನ್ನು ಸೌಹಾರ್ದಯುತವಾಗಿ ಪರಿಹರಿಸಿಕೊಳ್ಳಬೇಕು ಎನ್ನುತ್ತಿದ್ದಾರೆ.

ಇದನ್ನೂ ಓದಿ: ಆಲೂರು ಗ್ರಾಮದ ಬಳಿ ಕಲ್ಲಿನ ಕ್ವಾರೆಗಳಿಗೆ ಅಕ್ರಮವಾಗಿ ಸಾಗಿಸುತ್ತಿದ್ದ ಭಾರೀ ಪ್ರಮಾಣದ ಸ್ಪೋಟಕಗಳ ವಶ

Assam-Mizoram Border Dispute FIR registered against Chief Minister Himanta Biswa Sarma