ಪುಲ್ವಾಮಾದಲ್ಲಿ ಇಬ್ಬರು ಉಗ್ರರ ಹತ್ಯೆ; ಕಾರ್ಯಾಚರಣೆ ಮುಂದುವರಿದಿದೆ ಎಂದ ಪೊಲೀಸ್
ಎನ್ಕೌಂಟರ್ ನಡೆದ ನಿಖರವಾದ ಪ್ರದೇಶ ದಾಚಿಗಮ್ ಅರಣ್ಯಪ್ರದೇಶದ ನಂಬಿಯಾನ್ ಮತ್ತು ಮಾರ್ಸಾರ್ ಮಧ್ಯೆ. ಮೃತರಾದ ಉಗ್ರರ ಗುರುತು ಇನ್ನೂ ಪತ್ತೆಯಾಗಿಲ್ಲ
ಇಂದು ಬೆಳಗ್ಗೆ ಜಮ್ಮು-ಕಾಶ್ಮೀರ (Jammu-Kashmir) ದ ಪುಲ್ವಾಮಾದಲ್ಲಿ ಇಬ್ಬರು ಉಗ್ರರನ್ನು ಭದ್ರತಾ ಪಡೆಗಳೂ(Security Forces) ಹತ್ಯೆ ಮಾಡಿವೆ. ದಕ್ಷಿಣ ಕಾಶ್ಮೀರದ ಪುಲ್ವಾಮಾದ ನಾಗಬೇರನ್-ಟಾರ್ಸರ್ ಅರಣ್ಯ ಪ್ರದೇಶದಲ್ಲಿ ಇಂದು ಭದ್ರತಾ ಪಡೆಗಳು ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸಿದ್ದವು. ಭದ್ರತಾ ಪಡೆಗಳು ಉಗ್ರರನ್ನು ಹುಡುಕುತ್ತಿದ್ದಾಗ, ಭಯೋತ್ಪಾದಕರು ಒಮ್ಮೆಲೇ ಗುಂಡಿನ ದಾಳಿ ನಡೆಸಲು ಶುರು ಮಾಡಿದ್ದಾರೆ. ಇದರಿಂದ ಅನಿವಾರ್ಯವಾಗಿ ಎನ್ಕೌಂಟರ್ (Encounter) ಶುರುವಾಯಿತು ಎಂದು ಸ್ಥಳೀಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಈ ಎನ್ಕೌಂಟರ್ ಬಗ್ಗೆ ಮಾತನಾಡಿದ, ಕಾಶ್ಮೀರ ವಲಯ ಪೊಲೀಸ್ ಅಧಿಕಾರಿಯೊಬ್ಬರು, ಎನ್ಕೌಂಟರ್ ನಡೆದ ನಿಖರವಾದ ಪ್ರದೇಶ ದಾಚಿಗಮ್ ಅರಣ್ಯಪ್ರದೇಶದ ನಂಬಿಯಾನ್ ಮತ್ತು ಮಾರ್ಸಾರ್ ಮಧ್ಯೆ. ಮೃತರಾದ ಉಗ್ರರ ಗುರುತು ಇನ್ನೂ ಪತ್ತೆಯಾಗಿಲ್ಲ. ಶೀಘ್ರವೇ ಗುರುತು ಪತ್ತೆಹಚ್ಚಲಾಗುತ್ತದೆ. ಅವರಿಂದ ಈಗಾಗಲೇ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
#EncounterUpdate: Exact location of #encounter is between Namibian & Marsar, general area #Dachigam forest. 02 unidentified #terrorists killed. Army and Police on job. Search is still going on. @JmuKmrPolice https://t.co/MBpKAleHcZ
— Kashmir Zone Police (@KashmirPolice) July 31, 2021
2 terrorists Killed in encounter in Pulwama Of Jammu and Kashmir