ಜೈಲು ಗೋಡೆ ಕುಸಿದು 22 ಕೈದಿಗಳಿಗೆ ಗಾಯ; ಮಳೆಯಿಂದಾದ ಅವಘಡವೆಂದ ಪೊಲೀಸ್ ಅಧಿಕಾರಿ
Madhya Pradesh: ದುರ್ಘಟನೆ ನಡೆಯುವ ಸಂದರ್ಭದಲ್ಲಿ ಕಾರಾಗೃಹದಲ್ಲಿ 225 ಕೈದಿಗಳು ಇದ್ದರು. ಗೋಡೆ ಕುಸಿತದ ಸುದ್ದಿ ಕೇಳುತ್ತಿದ್ದಂತೆ ಪೊಲೀಸ್ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ಶುರು ಮಾಡಿದರು.
ಭಿಂಡ್: ಮಧ್ಯಪ್ರದೇಶದ ಭಿಂಡ್ ಜಿಲ್ಲೆಯಲ್ಲಿ ಕಾರಾಗೃಹದ ಬ್ಯಾರಕ್ ಸಂಖ್ಯೆ 6ರ ಗೋಡೆ ಕುಸಿದು 22 ಕೈದಿಗಳು ಗಂಭೀರ ಗಾಯಗೊಂಡಿದ್ದಾರೆ. ಶನಿವಾರ ಮುಂಜಾನೆ 5.10ರ ಹೊತ್ತಿಗೆ ದುರ್ಘಟನೆ ನಡೆದಿದೆ. ಇತ್ತೀಚೆಗೆ ನಿರಂತರವಾಗಿ ಮಳೆ ಸುರಿಯುತ್ತಿರುವ ಕಾರಣ ಗೋಡೆ ಕುಸಿದಿದೆ ಎಂದು ಹೇಳಲಾಗಿದೆ.
ಘಟನೆಯಲ್ಲಿ 22 ಕೈದಿಗಳು ಗಾಯಗೊಂಡಿದ್ದಾರೆ. ಅದರಲ್ಲಿ ಒಬ್ಬ ಕೈದಿಗೆ ಗಂಭೀರವಾಗಿ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಗ್ವಾಲಿಯರ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಉಳಿದವರಿಗೆ ಜಿಲ್ಲಾಸ್ಪತ್ರೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಭಿಂಡ್ ಎಸ್ಪಿ ಮನೋಜ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ದುರ್ಘಟನೆ ನಡೆಯುವ ಸಂದರ್ಭದಲ್ಲಿ ಕಾರಾಗೃಹದಲ್ಲಿ 225 ಕೈದಿಗಳು ಇದ್ದರು. ಗೋಡೆ ಕುಸಿತದ ಸುದ್ದಿ ಕೇಳುತ್ತಿದ್ದಂತೆ ಪೊಲೀಸ್ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ಶುರು ಮಾಡಿದರು. ಈ ಜೈಲು ತುಂಬ ಹಳೆಯದಾಗಿದ್ದು, ಗೋಡೆಗಳೆಲ್ಲ ಶಿಥಿಲವಾಗುತ್ತಿವೆ. ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಗೋಡೆಗಳೆಲ್ಲ ಒದ್ದೆಯಾಗಿದ್ದವು. ಇದೇ ಕಾರಣಕ್ಕೆ ಕುಸಿದುಬಿದ್ದಿವೆ ಎಂದೂ ಹೇಳಿದ್ದಾರೆ.
ಇದನ್ನೂ ಓದಿ: ಮಾಂಗಲ್ಯ ಸರ ಕದ್ದು ಪರಾರಿಯಾಗಿದ್ದ ಇಬ್ಬರ ಬಂಧನ; ಸರಗಳ್ಳರನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾದ ಕುದೂರು ಪೊಲೀಸರು
22 Prisoners injured as Jail Wall Collapsed in Madhya Pradesh