ಮಾಂಗಲ್ಯ ಸರ ಕದ್ದು ಪರಾರಿಯಾಗಿದ್ದ ಇಬ್ಬರ ಬಂಧನ; ಸರಗಳ್ಳರನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾದ ಕುದೂರು ಪೊಲೀಸರು

TV9 Digital Desk

| Edited By: preethi shettigar

Updated on: Jul 31, 2021 | 10:54 AM

ಇತ್ತೀಚೆಗೆ ಕುದೂರು ವ್ಯಾಪ್ತಿಯಲ್ಲಿ ಇಬ್ಬರು ಮಹಿಳೆಯರ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದರು ಈ ಸಂಬಂಧ ದೂರು ದಾಖಲಿಸಿಕೊಂಡಿದ್ದ ಪೊಲೀಸರು, ಸದ್ಯ ಆರೋಪಿಗಳನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಮಾಂಗಲ್ಯ ಸರ ಕದ್ದು ಪರಾರಿಯಾಗಿದ್ದ ಇಬ್ಬರ ಬಂಧನ; ಸರಗಳ್ಳರನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾದ ಕುದೂರು ಪೊಲೀಸರು
ಕುಮಾರ್ ಮತ್ತು ಹರೀಶ್

Follow us on

ರಾಮನಗರ: ಮಾಂಗಲ್ಯ ಸರ ಕದ್ದು ಪರಾರಿಯಾಗಿದ್ದ ಇಬ್ಬರು ಸರಗಳ್ಳರನ್ನು ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಕುದೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರು ಮೂಲದ ಕುಮಾರ್ ಮತ್ತು ಹರೀಶ್ ಬಂಧಿತ ಆರೋಪಿಗಳು. ಬಂಧಿತರಿಂದ 108 ಗ್ರಾಂ ಚಿನ್ನಾಭರಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇತ್ತೀಚೆಗೆ ಕುದೂರು ವ್ಯಾಪ್ತಿಯಲ್ಲಿ ಇಬ್ಬರು ಮಹಿಳೆಯರ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದರು ಈ ಸಂಬಂಧ ದೂರು ದಾಖಲಿಸಿಕೊಂಡಿದ್ದ ಪೊಲೀಸರು, ಸದ್ಯ ಆರೋಪಿಗಳನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ನೆಲಮಂಗಲ: ಟೆಸ್ಟ್ ಡ್ರೈವ್‌ ನೆಪದಲ್ಲಿ ಕಾರಿನೊಂದಿಗೆ ಪರಾರಿಯಾದ ಕಳ್ಳ ಕಾರು ತೆಗೆದುಕೊಳ್ಳುವ ಸೋಗಿನಲ್ಲಿ 10 ಸಾವಿರ ರೂಪಾಯಿ ಮುಂಗಡ ಹಣ ಕೊಟ್ಟು ಕಾರಿನೊಂದಿಗೆ ಪರಾರಿಯಾದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಟೌನ್ನಲ್ಲಿ ನಡೆದಿದೆ. ಜಕ್ಕಸಂದ್ರದ ಮಂಜ ಎಂಬ ಕುಖ್ಯಾತ ಕಾರು ಕಳ್ಳ ಎಕ್ಸ್.ಯು.ವಿ. 500 ಕೆಎ05-ಎಂಎಕ್ಸ್-2407 ನಂಬರಿನ ಕಪ್ಪು ಬಣ್ಣದ ಮಹೀಂದ್ರ ಕಾರು ಕದ್ದು ಪರಾರಿಯಾಗಿದ್ದಾನೆ. ಜೆಪಿ ನಗರದ ವಾಣಿ ಅವರಿಗೆ ಸೇರಿದ 23 ಲಕ್ಷ ಬೆಲೆಬಾಳುವ ಕಾರಿಗೆ ಕೇವಲ 10 ಸಾವಿರ ರೂ. ಹಣ ನೀಡಿ ಕಾರು ಸಮೇತ ಪರಾರಿಯಾಗಿದ್ದಾನೆ.

ಮುಂಗಡ ಹಣ ಕೊಡುವ ವೇಳೆ ನಕಲಿ ಪೋನ್ ನಂಬರ್ ಕೊಟ್ಟ ಮಂಜ ಟೆಸ್ಟ್ ಡ್ರೈವ್‌ ನೆಪದಲ್ಲಿ ಯಾಮಾರಿಸಿದ್ದಾನೆ. ವಾಪಸ್ ಬರದಿದ್ದಕ್ಕೆ ಮಾಲಿಕರು ಕರೆ ಮಾಡಿದ್ದಾರೆ. ಆಗ ಮೊಬೈಲ್ ಸ್ವಿಚ್ ಅಫ್ ಎಂದು ಬಂದಿದೆ. ಹೀಗಾಗಿ ವಾಣಿ ನೆಲಮಂಗಲ ಟೌನ್ ಠಾಣೆಗೆ ದೂರು ನೀಡಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪರಾರಿಯಾಗಿರುವ ಕಳ್ಳ ಮಂಜನ ಹುಡುಕಾಟದಲ್ಲಿದ್ದಾರೆ.

manja and car

ಟೆಸ್ಟ್ ಡ್ರೈವ್‌ ನೆಪದಲ್ಲಿ ಕಾರಿನೊಂದಿಗೆ ಪರಾರಿಯಾದ ಕಳ್ಳ

ಇದನ್ನೂ ಓದಿ: ಇಬ್ಬರು ಕುಖ್ಯಾತ ಬೈಕ್ ಕಳ್ಳರ ಬಂಧನ; 10 ಲಕ್ಷ ರೂ. ಬೆಲೆಬಾಳುವ ಬೈಕ್‌ಗಳನ್ನು ವಶಕ್ಕೆ ಪಡೆದ ಪೊಲೀಸರು

ಮೊನ್ನೆ ಫೀಲ್ಡಿಗಿಳಿದು 19 ಕಡೆ ಸರಗಳ್ಳತನ ಮಾಡಿದ್ದ ಖದೀಮರ ಪೈಕಿ ಇಬ್ಬರು ಅರೆಸ್ಟ್ ಆದ್ರು: ಸರಗಳ್ಳರ ಮೋಡಸ್​ ಆಪರೆಂಡಿ ಹೀಗಿತ್ತು!

ತಾಜಾ ಸುದ್ದಿ

Related Stories

Most Read Stories

Click on your DTH Provider to Add TV9 Kannada