ಮುಂಜಾನೆ ಬಿಹಾರದ ಚೌರಾ ರೈಲ್ವೆ ಸ್ಟೇಶನ್ಗೆ ಮುತ್ತಿಗೆ ಹಾಕಿದ್ದ ಮಾವೋವಾದಿಗಳು; ಸುಮಾರು 2 ತಾಸು ರೈಲು ಸಂಚಾರ ಬಂದ್
ಬೆಳ್ಳಂಬೆಳಗ್ಗೆ ಮಾವೋವಾದಿಗಳು ರೈಲ್ವೆ ಸ್ಟೇಶನ್ನ್ನು ಸುತ್ತುವರಿದಿದ್ದರು. ಅದರಲ್ಲೊಬ್ಬ ಒಳಹೋಗಿ, ಸ್ಟೇಶನ್ ಮಾಸ್ಟರ್ ಬಿನಯ್ ಕುಮಾರ್ ಅವರಿದ್ದ ಕೊಠಡಿಯನ್ನು ಪ್ರವೇಶಿಸಿದ. ಟ್ರ್ಯಾಕ್ ಸಿಗ್ನಲ್ಗಳನ್ನೆಲ್ಲ ಕೆಂಪಾಗಿಯೇ ಇಡಬೇಕು ಎಂದು ಬೆದರಿಕೆ ಹಾಕಿದ.
ಬಿಹಾರ (Bihar)ದ ಜಮುಯಿಯ ಚೌರಾ ರೈಲ್ವೆ ಸ್ಟೇಶನ್ (Railway Station)ನ್ನು ಇಂದು ಬೆಳಗ್ಗೆ ಸುಮಾರು 2 ತಾಸುಗಳ ಕಾಲ ನಿಯಂತ್ರಣಕ್ಕೆ ತೆಗೆದುಕೊಂಡಿದ್ದ ಕಾರಣ, ದೆಹಲಿ-ಹೌರಾಹ್ ಮಾರ್ಗದ ರೈಲು ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಹತ್ಯೆಯಾದ ತಮ್ಮ ಒಡನಾಡಿಗಳ ಸ್ಮರಣಾರ್ಥ ಮಾವೋವಾದಿಗಳು ಇಲ್ಲಿ ಬಂದ್ ನಡೆಸುತ್ತಿದ್ದು, ಇಂದು ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಈ ಬಂದ್ನ ನಾಲ್ಕನೇ ದಿನ ರೈಲ್ವೆ ಸ್ಟೇಶನ್ನ್ನು ಅವರು ಆಕ್ರಮಿಸಿಕೊಂಡಿದ್ದರು.
ಬೆಳ್ಳಂಬೆಳಗ್ಗೆ ಮಾವೋವಾದಿಗಳು ರೈಲ್ವೆ ಸ್ಟೇಶನ್ನ್ನು ಸುತ್ತುವರಿದಿದ್ದರು. ಅದರಲ್ಲೊಬ್ಬ ಒಳಹೋಗಿ, ಸ್ಟೇಶನ್ ಮಾಸ್ಟರ್ ಬಿನಯ್ ಕುಮಾರ್ ಅವರಿದ್ದ ಕೊಠಡಿಯನ್ನು ಪ್ರವೇಶಿಸಿದ. ಟ್ರ್ಯಾಕ್ ಸಿಗ್ನಲ್ಗಳನ್ನೆಲ್ಲ ಕೆಂಪಾಗಿಯೇ ಇಡಬೇಕು. ರೈಲುಗಳು ಮುಂದೆ ಚಲಿಸುವಂತಿಲ್ಲ. ಹಾಗೊಮ್ಮೆ ನಮ್ಮ ಮಾತನ್ನು ಮೀರಿದರೆ ಖಂಡಿತ ರೈಲ್ವೇ ಸ್ಟೇಶನ್ನ್ನು ಸ್ಫೋಟಿಸುತ್ತೇವೆ ಎಂದು ಬೆದರಿಕೆ ಹಾಕಿದ. ಹಾಗಾಗಿ ರೈಲು ಸಂಚಾರ ತಡೆಯಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರೈಲ್ವೆ ಸ್ಟೇಶನ್ಗೆ ತಾವು ಮುತ್ತಿಗೆ ಹಾಕಿರುವ ಬಗ್ಗೆ ನಿಮ್ಮ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿ ಎಂದು ಬಿನಯ್ ಕುಮಾರ್ಗೆ ಹೇಳಿದರು. ಅಷ್ಟೇ ಅಲ್ಲ, ತಾವೇ ಮೈಕ್ ಹಿಡಿದು, ಪ್ರಯಾಣಿಕರ ಬಳಿ, ನೀವೆಲ್ಲ ರೈಲಿನಲ್ಲಿಯೇ ಕುಳಿತುಕೊಂಡಿರಬೇಕು. ಯಾವ ಕಾರಣಕ್ಕೂ ಕೆಳಕ್ಕೆ ಇಳಿಯುವಂತಿಲ್ಲ ಎಂದೂ ಹೇಳಿದರು. ಅಷ್ಟರಲ್ಲಿ ಜಮುಯಿ ಎಸ್ಪಿ ಪ್ರಮೋದ್ ಕುಮಾರ್ ಮಂಡಲ್ ಮತ್ತು ಪ್ಯಾರಾಮಿಲಿಟರಿ ಪಡೆಗಳು ಸ್ಥಳಕ್ಕೆ ಆಗಮಿಸಿದವು. ಮಾವೋವಾದಿಗಳು ಸ್ಥಳಕ್ಕೆ ಭದ್ರತಾ ಪಡೆಗಳನ್ನು ಕರೆಸಿ, ಹೊಂಚು ಹಾಕಿ ದಾಳಿ ನಡೆಸಲು ಹೀಗೆಲ್ಲ ಪ್ಲ್ಯಾನ್ ಮಾಡಿದ್ದರು ಎಂದು ಸಿಆರ್ಪಿಎಫ್ ಅಧಿಕಾರಿಗಳು ಹೇಳಿದ್ದಾರೆ.
ಮಾವೋವಾದಿಗಳ ಮುತ್ತಿಗೆಯಿಂದ ಮುಂಜಾನೆ 3.20ರಿಂದ 5.30ರವರೆಗೆ ರೈಲು ಸಂಚಾರಗಳೆಲ್ಲ ಸ್ಥಗಿತಗೊಂಡಿದ್ದವು. ನಂತರ ಸ್ಫೋಟಕಗಳನ್ನೇನಾದರೂ ಇಡಲಾಗಿದೆಯಾ ಎಂದು ಹಳಿಗಳನ್ನೆಲ್ಲ ಪರಿಶೀಲನೆ ಮಾಡಲಾಯಿತು. 5.30ರ ಬಳಿಕ ರೈಲು ಸಂಚಾರ ಮರು ಆರಂಭಗೊಂಡಿದೆ ಎಂದು ಸಾರ್ವಜನಿಕ ಸಂಪರ್ಕ ಅಧಿಕಾರಿ ರಾಜೇಶ್ ಕುಮಾರ್ ತಿಳಿಸಿದ್ದಾರೆ.
Maoists take over Chaura railway station in Bihar