Cyclone Biparjoy: ಬಾಹ್ಯಾಕಾಶದಲ್ಲಿ ಬಿಪೋರ್‌ಜಾಯ್ ಚಂಡಮಾರುತದ ದೃಶ್ಯವನ್ನು ಸೆರೆಹಿಡಿದ ಗಗನಯಾತ್ರಿ

| Updated By: Digi Tech Desk

Updated on: Jun 16, 2023 | 9:37 AM

ಬಿಪೋರ್‌ಜಾಯ್ ಚಂಡಮಾರುತದ ತೀವ್ರತೆಯ ಚಿತ್ರಗಳನ್ನು ಅಂತರಾಷ್ಟ್ರೀಯ ಬಾಹ್ಯಾಕಾಶ ಗಗನಯಾತ್ರಿಯೊಬ್ಬರು ಹಂಚಿಕೊಂಡಿದ್ದಾರೆ.

Cyclone Biparjoy: ಬಾಹ್ಯಾಕಾಶದಲ್ಲಿ ಬಿಪೋರ್‌ಜಾಯ್ ಚಂಡಮಾರುತದ ದೃಶ್ಯವನ್ನು ಸೆರೆಹಿಡಿದ ಗಗನಯಾತ್ರಿ
ಬಾಹ್ಯಾಕಾಶದಲ್ಲಿ ಬೈಪರ್‌ಜೋಯ್ ಚಂಡಮಾರುತದ ದೃಶ್ಯವನ್ನು ಸೆರೆಹಿಡಿದ ಗಗನಯಾತ್ರಿ
Follow us on

ದೆಹಲಿ: ಭಾರತದ ದಕ್ಷಿಣ ಭಾಗಗಳಲ್ಲಿ ಬಿಪೋರ್‌ಜಾಯ್ ಚಂಡಮಾರುತದ (Cyclone Biparjoy) ಭೀಕರತೆ ಹೆಚ್ಚಾಗಿದೆ, ಇಂದು ಗುಜರಾತಿನಲ್ಲಿ ಭೂಕುಸಿತದ ಆತಂಕ ಹೆಚ್ಚಾಗಿದ್ದು, ಇದೀಗ ಬಿಪೋರ್‌ಜಾಯ್ ಚಂಡಮಾರುತದ ತೀವ್ರತೆಯ ಚಿತ್ರಗಳನ್ನು ಅಂತರಾಷ್ಟ್ರೀಯ ಬಾಹ್ಯಾಕಾಶ ಗಗನಯಾತ್ರಿಯೊಬ್ಬರು ಹಂಚಿಕೊಂಡಿದ್ದಾರೆ. ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಗಗನಯಾತ್ರಿ ಸುಲ್ತಾನ್ ಅಲ್ ನೆಯಾಡಿ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಅರೇಬಿಯನ್ ಸಮುದ್ರದ ಮೇಲೆ ಚಂಡಮಾರುತದ ಬಿಪೋರ್‌ಜಾಯ್​​​ದ ಕೆಲವು ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ.

ನನ್ನ ಹಿಂದಿನ ವೀಡಿಯೊದಲ್ಲಿ ಹೇಳಿರುವಂತೆ #Biparjoy  ಟ್ಯಾಗ್ ಬಳಸಿಕೊಂಡು ಚಂಡಮಾರುತವು ಅರಬ್ಬಿ ಸಮುದ್ರದಲ್ಲಿ ರೂಪುಗೊಳ್ಳುವ ಕೆಲವು ಚಿತ್ರಗಳನ್ನು ನಾನು ಅಂತರರಾಷ್ಟ್ರೀಯ ಬಾಹ್ಯಾಕಾಶದಿಂದ ಎರಡು ದಿನಗಳಲ್ಲಿ ಕ್ಲಿಕ್ ಮಾಡಿದ್ದೇನೆ ಎಂದು ಅಲ್ ನೆಯಾಡಿ ಬರೆದಿದ್ದಾರೆ. ಎರಡು ದಿನಗಳ ಹಿಂದೆ, ಅರೇಬಿಯನ್ ಸಮುದ್ರದ ಮೇಲೆ ದೈತ್ಯಾಕಾರದ ಚಂಡಮಾರುತವು ಭಾರತದ ಕರಾವಳಿಯತ್ತ ಸಾಗುತ್ತಿರುವುದನ್ನು ತೋರಿಸುವ ವೀಡಿಯೊವನ್ನು ಅಲ್ ನೆಯಾಡಿ ಹಂಚಿಕೊಂಡಿದ್ದಾರೆ.

ನಾನು ಸೆರೆಹಿಡಿದ ಈ ವೀಡಿಯೊ ಅರೇಬಿಯನ್ ಸಮುದ್ರದ ಮೇಲೆ ಉಷ್ಣವಲಯದ ಚಂಡಮಾರುತವು ರೂಪುಗೊಳ್ಳುತ್ತಿರುವುದನ್ನು ಕಾಣಬಹುದು. ISS ಹಲವಾರು ನೈಸರ್ಗಿಕ ವಿದ್ಯಮಾನಗಳ ಬಗ್ಗೆ ಒಂದು ಅದ್ಭುತ ದೃಷ್ಟಿಕೋನವನ್ನು ಒದಗಿಸುತ್ತದೆ, ಇದು ಹವಾಮಾನ ಮೇಲ್ವಿಚಾರಣೆಗೆ ಭೂಮಿಯ ಮೇಲಿನ ತಜ್ಞರಿಗೆ ಸಹಾಯ ಮಾಡುತ್ತದೆ. ಎಲ್ಲರೂ ಸುರಕ್ಷಿತವಾಗಿರಿ ಎಂದು ಅವರು ಟ್ವೀಟ್ ಮಾಡಿದ್ದಾರೆ.

74,000ಕ್ಕೂ ಹೆಚ್ಚು ಜನರನ್ನು ಕರಾವಳಿ ಪ್ರದೇಶಗಳಿಂದ ಸುರಕ್ಷಿತ ಆಶ್ರಯಕ್ಕೆ ಸ್ಥಳಾಂತರಿಸಲಾಗಿದೆ. ಇಂದು ಸಂಜೆ ಚಂಡಮಾರುತವು ಕಚ್‌ಗೆ ಅಪ್ಪಳಿಸುವ ನಿರೀಕ್ಷೆಯಿದೆ ಮತ್ತು ರಾಜ್ಯದ ಹಲವು ಜಿಲ್ಲೆಗಳಲ್ಲಿ ಆರೆಂಜ್ ಮತ್ತು ಎಲ್ಲೋ ಅಲರ್ಟ್​ ಘೋಷಣೆ ಮಾಡಲಾಗಿದೆ.

ಇದನ್ನೂ ಓದಿ:Cyclone Biparjoy: ಭೂಕುಸಿತದ ಆತಂಕಕ್ಕೆ ಗುಜರಾತ್‌ನ ಕಚ್‌ನಿಂದ 30,000 ಜನರ ಸ್ಥಳಾಂತರ

ಬಿಪೋರ್‌ಜಾಯ್ ಚಂಡಮಾರುತವು ಪ್ರಸ್ತುತ ಗುಜರಾತ್ ಕರಾವಳಿಯಿಂದ ಸುಮಾರು 200 ಕಿಮೀ ದೂರದಲ್ಲಿ ಮಾಂಡ್ವಿ ಮತ್ತು ಕರಾಚಿ ನಡುವೆ ಜಖೌ ಬಂದರಿನ ಬಳಿ ಸಂಜೆ 4-8 ಗಂಟೆಯ ನಡುವೆ ಭೂಕುಸಿತ ಉಂಟು ಮಾಡಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ. ಚಂಡಮಾರುತವು ಗುಜರಾತ್‌ನ ಸೌರಾಷ್ಟ್ರ ಮತ್ತು ಕಚ್ ಪ್ರದೇಶಗಳು ಮತ್ತು ಪಕ್ಕದ ಪಾಕಿಸ್ತಾನದ ಕರಾವಳಿಯಲ್ಲಿ ಭಾರೀ ಮಳೆ ಮತ್ತು ಗಾಳಿಯನ್ನು ಉಂಟು ಮಾಡುವ ಸಾಧ್ಯತೆಯಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Published On - 11:08 am, Thu, 15 June 23