AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Cyclone Biparjoy: ಭೂಕುಸಿತದ ಆತಂಕಕ್ಕೆ ಗುಜರಾತ್‌ನ ಕಚ್‌ನಿಂದ 30,000 ಜನರ ಸ್ಥಳಾಂತರ

ಬಿಪರ್‌ಜೋಯ್‌ ಚಂಡಮಾರುತದಿಂದ ಭೂಕುಸಿತ ಸಂಭವಿಸುತ್ತದೆ ಎಂಬ ಕಾರಣಕ್ಕೆ ಎರಡು ದಿನಗಳ ಮೊದಲೇ ಅಧಿಕಾರಿಗಳಿಗೂ ಮಂಗಳವಾರ ಕರಾವಳಿ ಪ್ರದೇಶಗಳಿಂದ 30,000 ಜನರನ್ನು ತಾತ್ಕಾಲಿಕ ಆಶ್ರಯಕ್ಕೆ ಸ್ಥಳಾಂತರಿಸಿದ್ದಾರೆ

Cyclone Biparjoy: ಭೂಕುಸಿತದ ಆತಂಕಕ್ಕೆ ಗುಜರಾತ್‌ನ ಕಚ್‌ನಿಂದ 30,000 ಜನರ ಸ್ಥಳಾಂತರ
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on:Jun 14, 2023 | 11:27 AM

Share

ಗಾಂಧಿನಗರ: ಗುಜರಾತ್‌ನ ಕಚ್ ಜಿಲ್ಲೆಯ ಜಖೌ ಬಂದರಿನ ಬಳಿ ಬಿಪರ್‌ಜೋಯ್‌ ಚಂಡಮಾರುತದಿಂದ (Cyclone Biparjoy) ಭೂಕುಸಿತ ಸಂಭವಿಸುತ್ತದೆ ಎಂಬ ಕಾರಣಕ್ಕೆ ಎರಡು ದಿನಗಳ ಮೊದಲೇ ಅಧಿಕಾರಿಗಳಿಗೂ ಮಂಗಳವಾರ ಕರಾವಳಿ ಪ್ರದೇಶಗಳಿಂದ 30,000 ಜನರನ್ನು ತಾತ್ಕಾಲಿಕ ಆಶ್ರಯಕ್ಕೆ ಸ್ಥಳಾಂತರಿಸಿದ್ದಾರೆ ಎಂದು ತಿಳಿಸಿದ್ದಾರೆ. ಭಾರತದ ಉತ್ತರ ಮತ್ತು ದಕ್ಷಿಣ ಭಾರತಗಳನ್ನು ನಲುಗಿಸಿದ ಚಂಡಮಾರುತ ‘ಸೈಕ್ಲೋನ್ ಬೈಪರ್ಜೋಯ್’ ಭಾರತಕ್ಕೆ ಆತಂಕವನ್ನು ಸೃಷ್ಟಿ ಮಾಡಿದೆ. ಮಂಗಳವಾರ ಇದರ ತೀವ್ರತೆ ಇನ್ನೂ ಹೆಚ್ಚಾಗಿದ್ದು. ಇದು ಅತ್ಯಂತ ತೀವ್ರವಾದ ಚಂಡಮಾರುತವಾಗಿ ಮಾರ್ಪಟ್ಟಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ. ಹವಾಮಾನ ಇಲಾಖೆಯ ಪ್ರಕಾರ, ಚಂಡಮಾರುತವು ಗಂಟೆಗೆ ಐದು ಕಿಲೋಮೀಟರ್ ವೇಗದಲ್ಲಿ ಉತ್ತರಾಭಿಮುಖವಾಗಿ ಚಲಿಸುತ್ತಿದೆ ಮತ್ತು ಗುಜರಾತ್‌ನ ಪೋರಬಂದರ್‌ನಿಂದ ಸುಮಾರು 290 ಕಿಮೀ ನೈಋತ್ಯಕ್ಕೆ ಅಪ್ಪಳಿಸಲಿದೆ. ಇದು ಗುರುವಾರ ಗುಜರಾತ್‌ನ ಸೌರಾಷ್ಟ್ರ ಮತ್ತು ಕಚ್ ಪ್ರದೇಶಗಳು ಹಾಗೂ ಪಕ್ಕದ ಪಾಕಿಸ್ತಾನದ ಕರಾವಳಿಯನ್ನು ದಾಟುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.

1982ರಿಂದ ಯಾವುದೇ ಅರೇಬಿಯನ್ ಸಮುದ್ರದ ಚಂಡಮಾರುತವು ಬಿಪಾರ್ಜೋಯ್ (126 ಗಂಟೆಗಳು) ವರೆಗೆ ಅಪ್ಪಳಿಸಲು ಸಾಧ್ಯವಿಲ್ಲ ಎಂದು ಇಲಾಖೆ ತಿಳಿಸಿದೆ. ಆದರೆ ಜೂನ್ 15 ರಂದು ಗುಜರಾತ್ ಮತ್ತು ಪಾಕಿಸ್ತಾನದ ಕರಾವಳಿ ಪ್ರದೇಶಗಳಿಗೂ ಅಪ್ಪಳಿಸಲಿದೆ ಎಂದು ವರದಿ ಹೇಳಿದೆ, ಬಿಪರ್ಜೋಯ್ ಇದುವರೆಗೆ ಎರಡು ಹಂತಗಳ ವೇಗವರ್ಧನೆಯನ್ನು ಕಂಡಿದೆ. ಜೂನ್ 6 ಮತ್ತು 7ರ ನಡುವೆ ಅದರ ಗಾಳಿಯ ವೇಗವು 55 kmph ನಿಂದ 139 kmph ವರೆಗೆ ಮತ್ತು ಇನ್ನೊಂದು ಜೂನ್ 9 ಮತ್ತು ಜೂನ್ 10ರ ನಡುವೆ, ಸ್ವಲ್ಪ ಕಡಿಮೆ ವೇಗದಲ್ಲಿ 120 kmph ನಿಂದ 195 kmph ಗೆ ತಲುಪಿದೆ. ಟೈಫೂನ್ ಎಚ್ಚರಿಕೆ ಕೇಂದ್ರದ (JTWC) ಮಾಹಿತಿಯ ಪ್ರಕಾರ, ಚಂಡಮಾರುತವು ಜೂನ್ 6ರಿಂದ ಜೂನ್ 10 ವರೆಗೆ ಈ ಬಿಪರ್‌ಜೋಯ್ ಚಂಡಮಾರುತವು ವಿಕಸಗೊಂಡಿದೆ.

ಇದನ್ನೂ ಓದಿ: Cyclone Biparjoy: ಚಂಡಮಾರುತ ಸಮಯದಲ್ಲಿ ಅನುಸರಿಸಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ಸಲಹೆ ನೀಡಿದ ಎನ್​ಡಿಆರ್​ಎಫ್

ಬಿಪರ್‌ಜೋಯ್ ಚಂಡಮಾರುತದಿಂದಾಗಿ ಹವಾಮಾನ ವೈಪರೀತ್ಯದಿಂದ ಈ ಪ್ರದೇಶಗಳ ಮೂಲಕ ಹಾದುಹೋಗುವ 67 ರೈಲುಗಳನ್ನು ಪಶ್ಚಿಮ ರೈಲ್ವೆ ಇಲಾಖೆ ರದ್ದುಗೊಳಿಸಿದೆ. ಈಗಾಗಲೇ ರೈಲು ಬುಕ್​​ ಮಾಡಿರುವ ಪ್ರಯಾಣಿಕರ ಹಣವನ್ನು ಮರುಪಾವತಿ ಮಾಡಲಾಗುವುದು ಎಂದು ಇಲಾಖೆ ತಿಳಿಸಿದೆ. ಬಿಪರ್‌ಜೋಯ್ ಚಂಡಮಾರುತ ಪೀಡಿತ ಪ್ರದೇಶಗಳ ರೈಲು ಪ್ರಯಾಣಿಕರಿಗೆ ಪಶ್ಚಿಮ ರೈಲ್ವೇ ವಿವಿಧ ಸುರಕ್ಷತೆ ಮತ್ತು ಭದ್ರತಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಭಾರತೀಯ ರೈಲ್ವೆಯ ವಲಯ ಕಚೇರಿ ತಿಳಿಸಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 11:26 am, Wed, 14 June 23

Follow Us
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ