Mir Osman: ಮೀರ್ ಉಸ್ಮಾನ್ ಅಲಿ ಖಾನ್, ಭಾರತದ ಮೊದಲ ಬಿಲಿಯನೇರ್; ಅವರಿಗಿದ್ದ ಆಸ್ತಿ ಮೌಲ್ಯಕ್ಕೆ ಇವತ್ತು ಅವರೇ ವಿಶ್ವದ ನಂ. 1 ಶ್ರೀಮಂತ

India's First Billionaire: ಇಪ್ಪತ್ತನೇ ಶತಮಾನದಿಂದೀಚೆಗಿನ ವ್ಯಕ್ತಿಗಳನ್ನು ಗಣನೆಗೆ ತೆಗೆದುಕೊಳ್ಳುವುದಾದರೆ ಭಾರತದ ಮೊದಲ ಬಿಲಿಯನೇರ್ ಯಾರು ಎಂಬ ಪ್ರಶ್ನೆಗೆ ನಿಸ್ಸಂದೇಹವಾಗಿ ಬರುವ ಉತ್ತರ ಮೀರ್ ಉಸ್ಮಾನ್ ಅಲಿ ಖಾನ್ ಎಂಬ ಹೆಸರು.

Mir Osman: ಮೀರ್ ಉಸ್ಮಾನ್ ಅಲಿ ಖಾನ್, ಭಾರತದ ಮೊದಲ ಬಿಲಿಯನೇರ್; ಅವರಿಗಿದ್ದ ಆಸ್ತಿ ಮೌಲ್ಯಕ್ಕೆ ಇವತ್ತು ಅವರೇ ವಿಶ್ವದ ನಂ. 1 ಶ್ರೀಮಂತ
ಹೈದರಾಬಾದ್ ನಿಜಾಮ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 14, 2023 | 12:06 PM

ಒಂದು ತಲೆಮಾರಿನ ಹಿಂದೆ ಶ್ರೀಮಂತಿಕೆ ಎಂದರೆ ನೀ ಟಾಟಾನಾ, ನಾ ಬಿರ್ಲಾನಾ ಎನ್ನುತ್ತಿದ್ದರು. ಈ ತಲೆಮಾರಿನಲ್ಲಿ ಅಂಬಾನಿ, ಅದಾನಿಯದ್ದೇ ಕಾಲ. ಮುಂದಿನ ತಲೆಮಾರಿನಲ್ಲಿ ಮಿಂಚಲು ಬಹಳಷ್ಟು ಬಿಲಿಯನೇರ್​ಗಳು ಸಿದ್ಧವಾಗಿದ್ದಾರೆ. ಆದರೆ, ಭಾರತದ ಮೊದಲ ಬಿಲಿಯನೇರ್ (Billionaire) ಯಾರು ಎಂಬ ಕುತೂಹಲ ಕೆಲವರಿಗಾದರೂ ಬಂದಿರಬಹುದು. ಶತಮಾನಗಳ ಹಿಂದೆ ಭಾರತ ಬಹಳಷ್ಟು ಸಿರಿವಂತಿಕೆ ಹೊಂದಿತ್ತು ಎನ್ನುವವರಿದ್ದಾರೆ. ವಿಜಯನಗರ ಸಾಮ್ರಾಜ್ಯದಲ್ಲಿ ರಸ್ತೆರಸ್ತೆಯಲ್ಲೂ ಕಡಲೆಪುರಿಯಂತೆ ಚಿನ್ನ, ವಜ್ರ ವೈಢೂರ್ಯಗಳ ಮಾರಾಟವಾಗುತ್ತಿತ್ತು ಎಂಬಂತಹ ಸಂಗತಿ ಇತಿಹಾಸಪುಟದಲ್ಲಿ ದಾಖಲಾಗಿದ್ದು ಇದೆ. ಆದರೆ, ಒಬ್ಬ ರಾಜನಲ್ಲಿ ಎಷ್ಟು ಶ್ರೀಮಂತಿಕೆ ಎಂದು ನಿಖರವಾಗಿ ಅಳೆಯುವುದು ಕಷ್ಟ. ಒಂದು ಕಾಲದಲ್ಲಿ ವಿಶ್ವದ ಶೇ. 25ರಷ್ಟು ಆರ್ಥಿಕತೆಯನ್ನು ಹೊಂದಿದ್ದ ಮೊಘಲ್ ಸಾಮ್ರಾಜ್ಯದ ದೊರೆ ಅಕ್ಬರ್ (King Akbar) ಅತಿದೊಡ್ಡ ಶ್ರೀಮಂತ ಎನಿಸಿಕೊಳ್ಳಬಹುದು. ಇಪ್ಪತ್ತನೇ ಶತಮಾನದಿಂದೀಚೆಗಿನ ವ್ಯಕ್ತಿಗಳನ್ನು ಗಣನೆಗೆ ತೆಗೆದುಕೊಳ್ಳುವುದಾದರೆ ಭಾರತದ ಮೊದಲ ಬಿಲಿಯನೇರ್ ಯಾರು ಎಂಬ ಪ್ರಶ್ನೆಗೆ ನಿಸ್ಸಂದೇಹವಾಗಿ ಬರುವ ಉತ್ತರ ಮೀರ್ ಉಸ್ಮಾನ್ ಅಲಿ ಖಾನ್ (Hyderabad Nizam Mir Osman Ali Khan) ಎಂಬ ಹೆಸರು. ಇವರು ಹೈದರಾಬಾದ್ ಸಂಸ್ಥಾನದ ಅಧಿಪತಿಯಾಗಿದ್ದವರು. ಹೈದರಾಬಾದ್​ನ ಕೊನೆಯ ನಿಜಾಮ್. ಆಧುನಿಕ ಹೈದರಾಬಾದ್​ನ ನಿರ್ಮಾತೃ.

1886ರ ಏಪ್ರಿಲ್ 5ರಂದು ಹುಟ್ಟಿದ್ದ ಮೀರ್ ಉಸ್ಮಾನ್ ಅಲಿ 80ನೇ ವಯಸ್ಸಿನಲ್ಲಿ 1967ರಲ್ಲಿ ಅಸುನೀಗಿದ್ದರು. 25ನೇ ವಯಸ್ಸಿನಲ್ಲಿ ನಿಜಾಮರಾಗಿ ಸಿಂಹಾಸನ ಹೇರಿದ ಅವರು 1948ರವರೆಗೂ ಹೈದರಾಬಾದ್ ಸಂಸ್ಥಾನದ ಆಳ್ವಿಕೆ ಮಾಡಿದ್ದರು. ಅಮೆರಿಕದ ಶೇ. 2ರಷ್ಟು ಜಿಡಿಪಿಗೆ ಸಮವಾದ ಸಂಪತ್ತು ಉಸ್ಮಾನ್ ಅಲಿ ಅವರಿಗಿತ್ತು. ಅವರ ಕಾಲದಲ್ಲಿ ವಿಶ್ವದ ಶ್ರೀಮಂತರಲ್ಲಿ ಅವರ ಹೆಸರೂ ಇತ್ತು. ಈಗಲೂ ಕೂಡ ವಿಶ್ವದ ಸಾರ್ವಕಾಲಿಕ ಶ್ರೀಮಂತರ ಪಟ್ಟಿಯಲ್ಲಿ ಮೀರ್ ಉಸ್ಮಾನ್ ಅಲಿ ಉರುಫ್ 7ನೇ ಅಸಫ್ ಜಾ (Asaf Jah VII) ಹೆಸರು ಇದೆ.

ಇದನ್ನೂ ಓದಿNo Boss: ಉದ್ಯೋಗಿಗಳ ಮಾತು ನಂಬಿ ಮ್ಯಾನೇಜರ್ ಹುದ್ದೆಗಳನ್ನೇ ತೊಲಗಿಸಿದ ಕಂಪನಿ; ಆಮೇಲಾಯಿತು ನೋಡಿ ಅಚ್ಚರಿ

ಆಗಿನ ಕಾಲಕ್ಕೆ ಅವರಿಗಿದ್ದ ಸಂಪತ್ತಿಗೆ ಇವತ್ತಿನ ಮೌಲ್ಯವನ್ನು ಪರಿಗಣಿಸಿದರೆ 17.47 ಲಕ್ಷ ಕೋಟಿ ರೂ ಆಗುತ್ತದೆ ಎಂದು ಕೆಲವರು ಲೆಕ್ಕ ಹಾಕಿದ್ದಾರೆ. 17.47 ಲಕ್ಷ ಕೋಟಿ ಎಂದರೆ ಸುಮಾರು 230 ಬಿಲಿಯನ್ ಡಾಲರ್. ಇವತ್ತು ಜಗತ್ತಿನ ಅತಿದೊಡ್ಡ ಶ್ರೀಮಂತ ಎನಿಸಿರುವ ಎಲಾನ್ ಮಸ್ಕ್ ಬಳಿ ಇರುವ ಒಟ್ಟು ಆಸ್ತಿಮೌಲ್ಯ 229 ಬಿಲಿಯನ್ ಡಾಲರ್. ಅಂದರೆ, ಉಸ್ಮಾನ್ ಸಂಪತ್ತು ಮಸ್ಕ್​ಗಿಂತಲೂ ಒಂದು ಕೈ ಮೇಲೆಯೇ ಆಗುತ್ತದೆ.

ಗೋಲ್ಕೊಂಡಾ ಗಣಿಯಿಂದ ಯಥೇಚ್ಛ ಸಂಪತ್ತು ಸಂಪಾದನೆ

ಮೀರ್ ಉಸ್ಮಾನ್ ಅಲಿ ಖಾನ್ ಅವರ ಈ ಪರಿಯ ಶ್ರೀಮಂತಿಕೆಗೆ ಕಾರಣವಾಗಿದ್ದು ಗೋಲ್ಕೊಂಡಾದ ಗಣಿಗಳು. ಜಗತ್ತಿಗೆ ಆಗ ವಜ್ರ ಸರಬರಾಜು ಮಾಡುತ್ತಿದ್ದ ಏಕೈಕ ಸ್ಥಳ ಗೋಲ್ಕೊಂಡಾ ಆಗಿತ್ತು. ಇವರ ಬಳಿ ಇದ್ದ ಜೇಕಬ್ ಡೈಮಂಡ್​ನ ಬೆಲೆ ಸುಮಾರು 500-600 ಕೋಟಿ ರೂಪಾಯಿ ಎನ್ನಲಾಗುತ್ತಿದೆ.

ಮೀರ್ ಉಸ್ಮಾನ್ ಅಲಿ ಖಾನ್ ಅವರ ಖಜಾನೆಯಲ್ಲಿ ಇದ್ದ ಚಿನ್ನ, ಬೆಳ್ಳಿ, ಮುತ್ತು ರತ್ನಗಳ ಮೌಲ್ಯ ಇವತ್ತಿನ ಕಾಲಕ್ಕೆ 50,000 ಕೋಟಿ ರೂ ಆಗುತ್ತದಂತೆ.

ಆಧುನಿಕ ಹೈದರಾಬಾದ್​ನ ನಿರ್ಮಾತೃ ನಿಜಾಮ್ ಮೀರ್ ಒಸ್ಮಾನ್ ಅಲಿ ಖಾನ್

ಈಗಿನ ತೆಲಂಗಾಣ, ಮಹಾರಾಷ್ಟ್ರ ಮತ್ತು ಕರ್ನಾಟಕದ ಕೆಲ ಪ್ರದೇಶಗಳು ಸೇರಿದ್ದ ಹೈದರಾಬಾದ್ ಸಂಸ್ಥಾನವನ್ನು ಮೀರ್ ಉಸ್ಮಾನ್ ಅಲಿ ಖಾನ್ 37 ವರ್ಷ ಆಡಳಿತ ನಡೆಸಿದ್ದರು. ಇಂದಿನ ಹೈದರಾಬಾದ್​ನ ನಿರ್ಮಾತೃ ಅವರೇ ಆಗಿದ್ದಾರೆ. ಪ್ರತಿಯೊಬ್ಬರಿಗೂ ಪ್ರಾಥಮಿಕ ಶಾಲಾ ಶಿಕ್ಷಣವನ್ನು ನಿಜಾಮರು ಆಗಲೇ ಕಡ್ಡಾಯಪಡಿಸಿದ್ದರು. ಉಸ್ಮಾನಿಯಾ ಯೂನಿವರ್ಸಿಟಿ, ಉಸ್ಮಾನಿಯಾ ಆಸ್ಪತ್ರೆ, ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್, ಬೇಗಮ್​ಪೇಟ್ ಏರ್​ಪೋರ್ಟ್, ಹೈದರಾಬಾದ್ ಹೈಕೋರ್ಟ್, ಉಸ್ಮಾನ್ ಸಾಗರ್ ಅಣೆಕಟ್ಟು, ಹಿಮಾಯತ್ ಸಾಗರ್ ಅಣೆಕಟ್ಟುಗಳನ್ನು ಕಟ್ಟಿಸಿದವರು ಹೈದರಾಬಾದ್ ನಿಜಾಮರು.

ಇದನ್ನೂ ಓದಿMass Resignation: ಟಿಸಿಎಸ್​ನಲ್ಲಿ ಮಹಿಳೆಯರ ಸಾಮೂಹಿಕ ರಾಜೀನಾಮೆ; ವರ್ಕ್ ಫ್ರಂ ಹೋಂ ಬೇಡ ಎಂದಿದ್ದಕ್ಕೆ ನಡೆಯಿತಾ ಮಾಸ್ ರೆಸಿಗ್ನೇಶನ್?

ಭಾರತದ ವಿಭಜನೆಯಾದಾಗ ನಿಜಾಮರು ಭಾರತಕ್ಕೆ ಸೇರಲು ಹಿಂದೇಟು ಹಾಕಿದ್ದುಂಟು

1947ರ ಆಗಸ್ಟ್ 15ರಂದು ಭಾರತಕ್ಕೆ ಸ್ವಾತಂತ್ರ್ಯ ಬಂದಿತಾದರೂ ದೇಶದ ವಿಭಜನೆಯಾಗಿ ಪಾಕಿಸ್ತಾನ ಪ್ರತ್ಯೇಕ ರಾಷ್ಟ್ರವಾಗಿತ್ತು. ಆಗ ಹೈದರಾಬಾದ್ ಸೇರಿದಂತೆ ಕೆಲ ಸಂಸ್ಥಾನಗಳು ಸ್ವತಂತ್ರವಾಗಿ ಉಳಿದಿದ್ದವು. ಹೈದರಾಬಾದ್ ನಿಜಾಮರು ತಮ್ಮ ಸಂಸ್ಥಾನವನ್ನು ಪಾಕಿಸ್ತಾನಕ್ಕೆ ಸೇರಿಸಲು ಅಥವಾ ಸ್ವತಂತ್ರವಾಗಿ ಆಡಳಿತ ನಡೆಸಲು ಅಪೇಕ್ಷಿಸಿದ್ದರು.

ಕೆಲ ಕಾಲದ ಬಳಿಕ ನಿಜಾಮರು ತಮ್ಮ ಮನಸು ಬದಲಾಯಿಸಿ, ಭಾರತಕ್ಕೆ ಹೈದರಾಬಾದ್ ಸಂಸ್ಥಾನದ ಸೇರ್ಪಡೆಗೆ ಒಪ್ಪಿಗೆ ನೀಡಿದ್ದರು. ಆದರೆ, ಅಷ್ಟರಲ್ಲಾಗಲೇ ರಜಾಕರ್ಸ್ ಎಂಬ ಮುಸ್ಲಿಮ್ ಉಗ್ರ ಗುಂಪಿನ ಪ್ರಾಬಲ್ಯ ಹಾಗೂ ತೆಲಂಗಾಣ ಕಮ್ಯೂನಿಸ್ಟ್ ನೇತೃತ್ವದ ಬಂಡಾಯ ಇತ್ಯಾದಿ ಘಟನೆಗಳು ನಿಜಾಮರ ಬಲ ಕುಂದಿಸಿದ್ದವು. ರಕಾಕರ್ ಮುಸ್ಲಿಂ ಗುಂಪು ಹೈದರಾಬಾದ್ ಅನ್ನು ಭಾರತಕ್ಕೆ ಸೇರಿಸದಂತೆ ಹೋರಾಡುತ್ತಿತ್ತು.

ಈ ಸಂದರ್ಭದಲ್ಲಿ ಭಾರತ ಸರ್ಕಾರ 1948ರಲ್ಲಿ ತನ್ನ ಸೇನಾ ಕಾರ್ಯಾಚರಣೆ ಮೂಲಕ ರಜಾಕರ್​ಗಳನ್ನು ಸೋಲಿಸಿ ಹೈದರಾಬಾದ್ ಸಂಸ್ಥಾನವನ್ನು ವಶಪಡಿಸಿಕೊಂಡಿತು. ಇದಾದ ಬಳಿಕ ಉಸ್ಮಾನ್ ಅವರ ಸಂಪತ್ತು ಬಹುತೇಕ ಕರಗಿಹೋಗಿತ್ತು. 1950ರಿಂದ 56ರವರೆಗೂ ಅವರು ಹೈದರಾಬಾದ್ ರಾಜ್ಯದ ರಾಜಪ್ರಮುಖರಾಗಿ ಕೆಲಸ ಮಾಡಿದರು. 1967ರಲ್ಲಿ ಅವರು ಇಹಲೋಕ ತ್ಯಜಿಸಿದರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ