No Boss: ಉದ್ಯೋಗಿಗಳ ಮಾತು ನಂಬಿ ಮ್ಯಾನೇಜರ್ ಹುದ್ದೆಗಳನ್ನೇ ತೊಲಗಿಸಿದ ಕಂಪನಿ; ಆಮೇಲಾಯಿತು ನೋಡಿ ಅಚ್ಚರಿ
Managers Replaced With Coaches: ಮ್ಯಾನೇಜರ್ಗಳೇ ಇಲ್ಲದ ಕಂಪನಿಯೊಂದರಲ್ಲಿ ಉದ್ಯೋಗಿಗಳು ಅದ್ಭುತವಾಗಿ ಕೆಲಸ ಮಾಡುತ್ತಿದ್ದಾರಂತೆ. ಟೈಮ್ ಇಟಿಸಿ ಕಂಪನಿಯಲ್ಲಿ ಇಂಥದ್ದೊಂದು ಅಚ್ಚರಿಯ ಬೆಳವಣಿಗೆ ಅಗಿದೆಯಂತೆ.
ಕೆಲಸ ಇಷ್ಟವಾದರೆ, ಕೆಲಸದ ವಾತಾವರಣ (Working Environment) ಸರಿ ಇದ್ದರೆ ಎಷ್ಟು ಬೇಕಾದರೂ ಕೆಲಸ ಮಾಡ್ತೀನಪ್ಪ ಎಂದು ಬಹಳ ಮಂದಿ ಹೇಳೋದನ್ನು ಕೇಳಿದ್ದೇವೆ. ಇವರು ಯಾವ ಕೆಲಸ ಕೊಟ್ಟರೂ ಹೀಗೇ ರಾಗ ಎಳೆಯೋದು ಎಂದು ಸುಮ್ಮನಾಗುವುದು ಕಷ್ಟ. ಕೆಟ್ಟ ಬಾಸ್ಗಳ ಕಾಟದಿಂದ ಕೆಲಸ ಬದಲಿಸುವವರ ಸಂಖ್ಯೆ ಹೆಚ್ಚು ಎಂಬಂತಹ ವರದಿಯನ್ನು ಇತ್ತೀಚೆಗೆ ಟಿವಿ9ಪ್ರಕಟಿಸಿತ್ತು. ಬಾಸ್ಗಳು ಸರಿ ಇದ್ದರೆ ಕೆಲಸ ಸರಿಹೋಗುತ್ತದಾ? ಈ ಪ್ರಶ್ನೆಗೆ ಉತ್ತರವಾಗಿ ಹೊಸ ವರದಿಯೊಂದು ಬಂದಿದ್ದು, ಅದರ ಪ್ರಕಾರ ಬಾಸ್ಗಳೇ ಇಲ್ಲದ, ಅಂದರೆ ಮ್ಯಾನೇಜರ್ಗಳೇ ಇಲ್ಲದ ಕಂಪನಿಯೊಂದರಲ್ಲಿ ಉದ್ಯೋಗಿಗಳು ಅದ್ಭುತವಾಗಿ ಕೆಲಸ ಮಾಡುತ್ತಿದ್ದಾರಂತೆ. ಟೈಮ್ ಇಟಿಸಿ (Time Etc) ಕಂಪನಿಯಲ್ಲಿ ಇಂಥದ್ದೊಂದು ಅಚ್ಚರಿಯ ಬೆಳವಣಿಗೆ ಅಗಿದೆಯಂತೆ. ಉದ್ಯೋಗಿಗಳ ಮಾತು ಕೇಳಿಕೊಂಡು ಮ್ಯಾನೇಜರ್ ಹುದ್ದೆಗಳನ್ನೇ ನಿಲ್ಲಿಸಿದ್ದರ ಫಲವಾಗಿ ಟೈಮ್ ಇಟಿಸಿ ಕಂಪನಿಯಲ್ಲಿ ಉತ್ಪಾದನೆ ಶೇ. 20ರಷ್ಟು ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ.
ಟೈಮ್ ಇಟಿಸಿಯಲ್ಲಿ ಮ್ಯಾನೇಜರ್ ಬದಲು ಕೋಚ್; ಹೊಸ ಕಾನ್ಸೆಪ್ಟ್
ಟೈಮ್ ಇಟಿಸಿ ಕಂಪನಿ ಮ್ಯಾನೇಜರ್ ಹುದ್ದೆ ಬದಲು ಕೋಚ್ಗಳನ್ನು ನೇಮಕ ಮಾಡಿಕೊಂಡಿತ್ತು. ಇದರ ಹಿಂದಿರುವ ಕಾರಣವೂ ಅಮೋಘವಾದುದು. ಉದ್ಯೋಗಿಗಳನ್ನು ನೇಮಕಾತಿ ಮಾಡಿಕೊಳ್ಳುವಾಗ ಇಂಟರ್ವ್ಯೂ ವೇಳೆ ಅವರಿಗೆಲ್ಲಾ ಒಂದು ಪ್ರಶ್ನೆ ಕೇಳಲಾಗಿತ್ತು. ಒಬ್ಬ ಮ್ಯಾನೇಜರ್ನಿಂದ ನೀವು ಏನು ಅಪೇಕ್ಷಿಸುತ್ತೀರಿ ಎಂಬ ಪ್ರಶ್ನೆಯನ್ನು ನೇಮಕಾತಿ ವೇಳೆ ಅಭ್ಯರ್ಥಿಗಳಿಗೆ ಕೇಳಲಾಗಿತ್ತು. ಗುರಿ ನಿಗದಿ, ಫೀಡ್ಬ್ಯಾಕ್, ವೈಯಕ್ತಿ ಮತ್ತು ವೃತ್ತಿಪರ ಬೆಳವಣಿಗೆಗೆ ಅವಕಾಶ, ಸ್ವತಂತ್ರವಾಗಿ ಕೆಲಸ ಮಾಡಲು ಅವಕಾಶ ಹೀಗೆ ಬಹಳಷ್ಟು ಅಂಶಗಳ ಪಟ್ಟಿ ಬಂದಿತು. ಆಗ ಟೈಮ್ ಇಟಿಸಿ ರೆಕ್ರೂಟರುಗಳಿಗೆ ಅನಿಸಿದ್ದು, ಉದ್ಯೋಗಿಗಳಿಗೆ ಮ್ಯಾನೇಜರ್ಗಿಂತ ಹೆಚ್ಚಾಗಿ ಒಬ್ಬ ಕೋಚ್ನ ಅವಶ್ಯಕತೆ ಇದೆ ಎಂದು. ಕ್ರಿಕೆಟ್ನಲ್ಲಿ ತಂಡಗಳಿಗೆ ಕೋಚ್ ಅಥವಾ ಮ್ಯಾನೇಜರ್ ಇರುವುದನ್ನು ನೋಡಿದ್ದೇವೆ. ಕಾರ್ಪೊರೇಟ್ ಕಂಪನಿಗಳಲ್ಲಿ ಈ ಕಾನ್ಸೆಪ್ಟ್ ಹೊಸದಿರಬಹುದು.
ಇದನ್ನೂ ಓದಿ: ಮಧ್ಯ ಪ್ರದೇಶದಲ್ಲಿ ಕನ್ಯಾದಾನದ ಬದಲಿಗೆ ಪಿಂಡದಾನ !; ಏನಿದು ವಿಚಿತ್ರ ವಿವಾಹ ಅಂತೀರಾ? ಇಲ್ಲಿದೆ ಮಾಹಿತಿ
ಟೈಮ್ ಇಟಿಸಿಯಲ್ಲಿ ಕೋಚ್ನಿಂದ ಏನು ಉಪಯೋಗ?
ಉದ್ಯೋಗಿಗಳ ಅಭಿಪ್ರಾಯದ ಮೇರೆಗೆ ಟೈಮ್ ಇಟಿಸಿ ಸಂಸ್ಥೆ ಮ್ಯಾನೇಜರ್ ಸ್ಥಾನಗಳಿಗೆ ಕೋಚ್ಗಳನ್ನು ನೇಮಿಸಿತು. ಇಲ್ಲಿ ಕೋಚ್ಗಳ ಕೆಲಸ ಎಂದರೆ ಉದ್ಯೋಗಿಗಳ ಉತ್ಪನ್ನಶೀಲತೆಯನ್ನು ಗರಿಷ್ಠ ಮಟ್ಟಕ್ಕೆ ಏರಿಸುವುದು, ಅವರು ಸಾಮರ್ಥ್ಯಕ್ಕೆ ತಕ್ಕಂತೆ ಕೆಲಸ ಮಾಡಲಾಗುವಂತೆ ನೋಡಿಕೊಳ್ಳುವುದು. ಉದ್ಯೋಗಿಗಳ ವೈಯಕ್ತಿಕ ಮಟ್ಟದಲ್ಲಿ ಅವರ ಸಾಮರ್ಥ್ಯ, ಕೌಶಲ್ಯ ಇತ್ಯಾದಿ ಹೆಚ್ಚಿಸುವ ಜವಾಬ್ದಾರಿ ಕೋಚ್ಗಳದ್ದಾಗಿರುತ್ತದೆ.
ಆರು ಮಂದಿ ಉದ್ಯೋಗಿಗಳ ತಂಡದ ಜವಾಬ್ದಾರಿ ಒಬ್ಬ ಕೋಚ್ಗೆ ನೀಡಲಾಗಿತ್ತು. ಮ್ಯಾನೇಜರ್ಗಳಾದರೆ ತಮ್ಮ ಮೇಲಿಂದ ಬಂದ ಆದೇಶವನ್ನು ತಮ್ಮ ಕೆಳಗಿನ ತಂಡದ ಸದಸ್ಯರಿಗೆ ತಲುಪಿಸಿ, ಡೆಡ್ಲೈನ್ ನೀಡಿ ಕೆಲಸ ಮಾಡಲು ಆದೇಶಿಸುತ್ತಾರೆ. ಆದರೆ, ಕೋಚ್ ಪಾತ್ರ ವಿಭಿನ್ನ. ಅವರು ಉದ್ಯೋಗಿಗಳಿಗೆ ಶಕ್ತಿ ತುಂಬಿ ಅವರಿಗೆ ವಿವಿಧ ರೀತಿಯಲ್ಲಿ ಸಹಾಯಕರಾಗಿ ಗುರಿ ತಲುಪಿಸಬೇಕು.
ಇದೊಂದು ತಂತ್ರ ಟೈಮ್ ಇಟಿಸಿಗೆ ವರ್ಕೌಟ್ ಆಯಿತು. ಕೆಲವೇ ದಿನಗಳಲ್ಲಿ ಸಂಸ್ಥೆಯ ಉದ್ಯೋಗಿಗಳ ಕಾರ್ಯದಕ್ಷತೆ ಹೆಚ್ಚಿತು, ಉತ್ಪನ್ನಶೀಲತೆಯೂ ವೃದ್ಧಿಸಿತು.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ