Viral Video: ಬಿಸಿಲ ಝಳಕ್ಕೆ ಬಳಲಿ ದೇಹ ತಂಪಾಗಿಸಲು ಸಮುದ್ರದಲ್ಲಿ ಈಜಾಡಲು ಬಂದ ಕರಡಿ

ಕರಡಿಯೊಂದು ಬೀಚ್​​ನಲ್ಲಿ ಖುಷಿಯಾಗಿ ಈಜಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಕರಡಿಯೂ ಸಮುದ್ರದಲ್ಲಿ ಈಜಾಡುವುದುಂಟೆ ಎಂದು ನೋಡುಗರು ಅಚ್ಚರಿಪಟ್ಟಿದ್ದಾರೆ.

Viral Video: ಬಿಸಿಲ ಝಳಕ್ಕೆ ಬಳಲಿ ದೇಹ ತಂಪಾಗಿಸಲು ಸಮುದ್ರದಲ್ಲಿ ಈಜಾಡಲು ಬಂದ ಕರಡಿ
ವೈರಲ್​ ವೀಡಿಯೊ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Jun 13, 2023 | 5:51 PM

ಕಾಡು ಪ್ರಾಣಿಗಳು ಜನವಸತಿ ಪ್ರದೇಶಗಳಿಗೆ ಬರುವುದು ಇತ್ತೀಚಿಗೆ ಸಾಮಾನ್ಯವಾಗಿಬಿಟ್ಟಿದೆ. ಆಹಾರವನ್ನರಸುತ್ತಾ ಪ್ರಾಣಿಗಳು ನಾಡಿಗೆ ಲಗ್ಗೆಯಿಡುತ್ತವೆ. ಆದರೆ ಇಲ್ಲೊಂದು ಕರಡಿ ಬೇಸಿಗೆ ತಾಪಮಾನವನ್ನು ತಡೆಯಲಾರದೆ ನೀರಿನಲ್ಲಿ ಸ್ವಲ್ಪ ಆಟವಾಡಲೆಂದು ಬೀಚ್​​​ಗೆ ಬಂದಿದೆ. ಈ ಘಟನೆ ಫ್ಲೋರಿಡಾದ ಡೆಸ್ಟಿನ್ ಕರಾವಳಿ ತೀರದಲ್ಲಿ ನಡೆದಿದೆ. ಇತ್ತೀಚಿಗೆ ಫ್ಲೋರಿಡಾದಲ್ಲಿ ತಾಪಮಾನವು ಹೆಚ್ಚಿದ್ದು, ಅಲ್ಲಿನ ಹೆಚ್ಚಿನ ಜನರು ತಣ್ಣನೆಯ ಗಾಳಿಯನ್ನು ತೆಗೆದುಕೊಳ್ಳಲು ಹಾಗೂ ನೀರಿನಲ್ಲಿ ಆಟವಾಡಲೆಂದು ಡೆಸ್ಟಿನ್ ಬೀಚ್​​​ಗೆ ಬರುತ್ತಿರುತ್ತಾರೆ. ಹಾಗೆಯೇ ದೇಹವನ್ನು ತಣ್ಣಗಾಗಿಸಲೆಂದು ಕರಡಿಯೊಂದು ಸಮುದ್ರ ತೀರಕ್ಕೆ ಬಂದಿದೆ. ನೀರಿನಲ್ಲಿ ತನ್ನ ಪಾಡಿಗೆ ಆಟವಾಡುತ್ತಿದ್ದ ಕರಡಿಯನ್ನು ಕಂಡ ಪ್ರತ್ಯಕ್ಷದರ್ಶಿಗಳು ಇದು ಶಾರ್ಕ್ ಎಂದು ಭಾವಿಸಿದ್ದರು. ಅಷ್ಟರಲ್ಲಿ ಕಿಕ್ಕಿರಿದ ಜನಸಮೂಹವನ್ನು ಕಂಡು ಕರಡಿಯು ಭಯಪಟ್ಟು ಓಡಲು ಶುರು ಮಾಡಿದಾಗ, ಇದು ಶಾರ್ಕ್ ಅಲ್ಲ ಬದಲಿಗೆ ಕಪ್ಪು ಕರಡಿ ಎಂದು ತಿಳಿದಿದೆ. ಇನ್ನೂ ಸಮುದ್ರದಲ್ಲಿ ಕರಡಿಯು ಈಜಾಡುತ್ತಾ ಆಟವಾಡುವುದನ್ನು ಕಂಡ ನೋಡುಗರು ಕರಡಿಗಳು ಸಮುದ್ರದಲ್ಲಿ ಈಜಾಡುವುದನ್ನು ನಾವು ಈ ಮೊದಲು ನೋಡಿಲ್ಲ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಕಪ್ಪು ಕರಡಿಗಳು ಸಾಮಾನ್ಯವಾಗಿದೆ. ಈ ಪ್ರದೇಶದಲ್ಲಿ 4,000 ಕ್ಕಿಂತಲೂ ಹೆಚ್ಚು ಕರಡಿಗಳು ವಾಸವಿರುವುದನ್ನು ಅಂದಾಜಿಸಲಾಗಿದೆ ಎಂದು ಫ್ಲೋರಿಡಾ ಮೀನು ಮತ್ತು ವನ್ಯಜೀವಿ ಸಂರಕ್ಷಣಾ ಆಯೋಗವು ತಿಳಿಸಿದೆ.

ಇದನ್ನೂ ಓದಿ: Viral Video: ಹಾವನ್ನು ತಿಂದ ಜಿಂಕೆ, ಇದು ಸಸ್ಯಾಹಾರಿ ಪ್ರಾಣಿ ಅಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ

ಜೆನ್ನಿಫರ್ ಮೇಜರ್ಸ್ ಸ್ಮಿತ್ (@jennsing80) ಎಂಬವರು ತಮ್ಮ ಇನ್ಟಾಗ್ರಾಮ್ ಖಾತೆಯಲ್ಲಿ ಬೀಚ್​​​ನಲ್ಲಿ ಕರಡಿಯು ಕಾಣಿಸಿಕೊಂಡ ವೀಡಿಯೋ ತುಣುಕುಗಳನ್ನು ಹಂಚಿಕೊಂಡಿದ್ದಾರೆ. ಹಾಗೂ ‘ನಾನು ಎಂದಿಗೂ ಕಪ್ಪು ಕರಡಿಯು ಸಮುದ್ರದಲ್ಲಿ ಈಜುವುದನ್ನು ನೋಡಿಲ್ಲ’ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ಮೊದಲನೇ ವೀಡಿಯೋ ಕ್ಲಿಪ್​​​ನಲ್ಲಿ ಕರಡಿ ಮರಿ ಬೀಚ್​​ನಲ್ಲಿ ನೀರಿನಲ್ಲಿ ಮುಳುಗಿ ಆಟವಾಡುತ್ತಿರುತ್ತದೆ. ಎರಡನೇ ವೀಡಿಯೋ ಕ್ಲಿಪ್​​​​ನಲ್ಲಿ ಆ ಕರಡಿಯನ್ನು ನೋಡಲು ಹಲವು ಜನರು ಬಂದು ಸೇರುತ್ತಾರೆ. ಜನರನ್ನು ಕಂಡು ಭಯಗೊಂಡ ಕರಡಿ ನೀರಿನಿಂದ ಹೊರಬಂದು ಓಡಿ ಹೋಗಲು ಪ್ರಯತ್ನಿಸುತ್ತದೆ. ನಂತರದ ವಿಡಿಯೋ ಕ್ಲಿಪ್ ನಲ್ಲಿ ಈ ಜನಗಳಿಂದ ಹೇಗಾದರೂ ತಪ್ಪಿಸಿಕೊಂಡು ಹೋಗಬೇಕೆಂದು ಕರಡಿ ಜನರ ಕಣ್ತಪ್ಪಿಸಿ ದೂರ ಓಡಿ ಹೋಗುವುದನ್ನು ಕಾಣಬಹುದು. ಮತ್ತು ಇಲ್ಲಿ ಇನ್ನೊಂದು ಗಮನಿಸಬೇಕಾದ ವಿಷಯವೆಂದರೆ ಜನರು ಕರಡಿಗೆ ಯಾವುದೇ ರೀತಿಯಲ್ಲಿಯೂ ಭಯಪಡಿಸುವುದಾಗಲಿ ಅಥವಾ ತೊಂದರೆ ಕೊಡುವುದಾಗಲಿ ಮಾಡಲಿಲ್ಲ, ಬದಲಿಗೆ ಜನರನ್ನು ಕಂಡು ಕರಡಿಯೇ ಓಡಿ ಹೋಗಿದೆ.

ಈ ವೈರಲ್ ವಿಡಿಯೋಗೆ ಹಲವು ಲೈಕ್ಸ್ ಹಾಗೂ ಕಮೆಂಟ್ಸ್ ಗಳೂ ಬಂದಿವೆ. ಒಬ್ಬ ಬಳಕೆದಾರರು ‘ನನ್ನ ಜೀವನದಲ್ಲಿ ಕರಡಿ ಈಜುವುದನ್ನು ಕಂಡಿಲ್ಲ’ ಎಂದು ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ‘ಆ ಕರಡಿ ಈಗ ಕ್ಷೇಮವಾಗಿದೆಯೇ’ ಎಂದು ಕೇಳಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್